ಧರ್ಮನಿಂದನೆ ಕೇಸಲ್ಲಿ ಹಿಂಸೆ: 86 ಜನರಿಗೆ 55 ವರ್ಷ ಜೈಲು!

By Suvarna NewsFirst Published Jan 18, 2020, 3:55 PM IST
Highlights

ಧರ್ಮನಿಂದನೆ ಕೇಸಲ್ಲಿ ಹಿಂಸೆ: ಪಾಕ್‌ನಲ್ಲಿ 86 ಜನರಿಗೆ 55 ವರ್ಷ ಜೈಲು| ಆಸಿಯಾ ಬೀಬಿ ಎಂಬ ಕ್ರೈಸ್ತ ಮಹಿಳೆಯನ್ನು ಖುಲಾಸೆಗೊಳಿಸಿದ್ದನ್ನು ವಿರೋಧಿಸಿ ನಡೆದಿದ್ದ ಪ್ರತಿಭಟನೆ

ಇಸ್ಲಾಮಾಬಾದ್‌[ಜ.18]: ಪ್ರತಿಭಟನೆಯ ವೇಳೆ ಹಿಂಸಾಚಾರ ಮತ್ತು ಗಲಭೆ ನಡೆಸಿದ ಕಾರಣಕ್ಕೆ ಪಾಕಿಸ್ತಾನದ ಕೋರ್ಟ್‌ವೊಂದು ತೆಹ್ರೀಕ್‌- ಇ- ಲ್ಯಾಬ್‌ಬೈಕ್‌ ಪಾಕಿಸ್ತಾನ (ಟಿಎಲ್‌ಪಿ) ಪಕ್ಷದ 86 ಮಂದಿ ಸದಸ್ಯರಿಗೆ ತಲಾ 55 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇಮ್ರಾನ್ ಖಾನ್ ಅವರನ್ನು ಭಾರತಕ್ಕೆ ಆಹ್ವಾನಿಸಲಿರುವ ಮೋದಿ ಸರ್ಕಾರ!

2018ರಲ್ಲಿ ಧರ್ಮ ನಿಂದನೆ ಪ್ರಕರಣದಲ್ಲಿ ಆಸಿಯಾ ಬೀಬಿ ಎಂಬ ಕ್ರೈಸ್ತ ಮಹಿಳೆಯನ್ನು ಖುಲಾಸೆಗೊಳಿಸಿದ್ದನ್ನು ವಿರೋಧಿಸಿ ಪಂಜಾಬ್‌ ಪ್ರಾಂತ್ಯದಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದಿತ್ತು. ಟಿಎಲ್‌ಪಿ ಪಕ್ಷದ ಮುಖ್ಯಸ್ಥ ಖಾದೀಮ್‌ ಹುಸೇನ್‌ ರಿಜ್ವಿಯನ್ನು ಬಂಧಿಸಿದ್ದನ್ನು ಖಂಡಿಸಿ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತೀರ್ಪು ಪ್ರಕಟವಾಗಿದೆ. ಅಲ್ಲದೇ ದೋಷಿಗಳಿಗೆ 1.2 ಕೋಟಿ ರು. ದಂಡ ಹಾಗೂ ಅವರ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡುವಂತೆಯೂ ಕೋರ್ಟ್‌ ಆದೇಶಿಸಿದೆ.

‘ನೀವು ಪಾಕಿಸ್ತಾನದವರಾ?’ ವಿದ್ಯಾರ್ಥಿಗಳಿಗೆ ಪೊಲೀಸರಿಂದ ಹಲ್ಲೆ?

click me!