ಗ್ರೀನ್‌ಲ್ಯಾಂಡ್‌ನ ಬಳಿಕ ಹಿಂದೂ ಮಹಾಸಾಗರದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕಣ್ಣು

Kannadaprabha News   | Kannada Prabha
Published : Jan 22, 2026, 07:25 AM IST
trump

ಸಾರಾಂಶ

ರಕ್ಷಣೆ ಮತ್ತು ಸಂಪನ್ಮೂಲದ ವಿಷಯದಲ್ಲಿ ಅತ್ಯಂತ ಮಹತ್ವವಿರುವ ಗ್ರೀನ್‌ಲ್ಯಾಂಡ್‌ ದ್ವೀಪ ವಶದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕಣ್ಣು ಇದೀಗ ಹಿಂದೂ ಮಹಾಸಾಗರದಲ್ಲಿ ಪುಟ್ಟ ದ್ವೀಪದ ಡಿಯಾಗೋ ಗಾರ್ಸಿಯೋದ ಮೇಲೆ ಬಿದ್ದಿದೆ.

ವಾಷಿಂಗ್ಟನ್‌: ರಕ್ಷಣೆ ಮತ್ತು ಸಂಪನ್ಮೂಲದ ವಿಷಯದಲ್ಲಿ ಅತ್ಯಂತ ಮಹತ್ವವಿರುವ ಗ್ರೀನ್‌ಲ್ಯಾಂಡ್‌ ದ್ವೀಪ ವಶದ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಲೇ ಇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಕಣ್ಣು ಇದೀಗ ಹಿಂದೂ ಮಹಾಸಾಗರದಲ್ಲಿ ಪುಟ್ಟ ದ್ವೀಪದ ಡಿಯಾಗೋ ಗಾರ್ಸಿಯೋದ ಮೇಲೆ ಬಿದ್ದಿದೆ.

ಒಂದು ವೇಳೆ ಇದರ ಮೇಲೇನಾದರೂ ಹಕ್ಕು ಸಾಧನೆಗೆ ಟ್ರಂಪ್‌ ಮುಂದಾದಲ್ಲಿ ಗ್ರೀನ್‌ಲ್ಯಾಂಡ್ ವಿಷಯದಲ್ಲಿ ಯುರೋಪ್‌ ದೇಶಗಳ ವೈರತ್ವ ಕಟ್ಟಿಕೊಂಡಂತೆ ಇಲ್ಲಿ ಭಾರತ ಮತ್ತು ಚೀನಾದ ವಿರೋಧಕ್ಕೂ ತುತ್ತಾಗುವ ಸಾಧ್ಯತೆ ಇದೆ.

ದ್ವೀಪ ಹಸ್ತಾಂತರ:

ಈ ಹಿಂದೆ ಆದ ಒಪ್ಪಂದ ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಇತ್ತೀಚಿನ ಆದೇಶದ ಅನ್ವಯ, ಹಿಂದೂ ಮಹಾಸಾಗರದ ಆಯಕಟ್ಟಿನ ಜಾಗದಲ್ಲಿರುವ ಡಿಯಾಗೋ ಗಾರ್ಸಿಯಾ ದ್ವೀಪವನ್ನು ಮಾರಿಷಸ್‌ಗೆ ಬಿಟ್ಟುಕೊಡಲು ಬ್ರಿಟನ್‌ ಸರ್ಕಾರ ಮುಂದಾಗಿದೆ. ಆದರೆ ಈ ದ್ವೀಪದಲ್ಲಿ ಅಮೆರಿಕದ ಸೇನಾ ನೆಲೆ ಇರುವ ಕಾರಣ, ಬ್ರಿಟನ್‌ ನಿರ್ಧಾರಕ್ಕೆ ಟ್ರಂಪ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ ಆಕ್ಷೇಪ:

‘ಅಮೆರಿಕದ ಮಹತ್ವದ ಸೇನಾ ನೆಲೆ ಇರುವ ಡಿಯಾಗೋ ಗ್ರಾಸಿಯಾ ದ್ವೀಪವನ್ನು ನಮ್ಮ ಅದ್ಭುತ ನ್ಯಾಟೋ ಸದಸ್ಯ ರಾಷ್ಟ್ರ ಬ್ರಿಟನ್‌ ಕಾರಣವೇ ಇಲ್ಲದೆ ಮಾರಿಷಸ್‌ಗೆ ಬಿಟ್ಟುಕೊಡಲು ಮುಂದಾಗಿದೆ. ಚೀನಾ ಮತ್ತು ರಷ್ಯಾ ಈ ನಡೆಯನ್ನು ದೌರ್ಬಲ್ಯ ಎಂದು ಪರಿಗಣಿಸಿದೆ. ಅತೀ ಮಹತ್ವದ್ದಾದ ಭೂಮಿಯನ್ನು ವಾಪಸ್‌ ನೀಡುತ್ತಿರುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮೂರ್ಖತನ. ಇದೇ ಕಾರಣಕ್ಕೆ ಗ್ರೀನ್‌ಲ್ಯಾಂಡ್‌ ಅನ್ನು ಅಮೆರಿಕವು ವಶಕ್ಕೆ ಪಡೆಯುವ ಅಗತ್ಯವಿದೆ’ ಎಂದು ಟ್ರಂಪ್‌ ಅವರು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್‌ ಸೋಷಿಯಲ್‌ನಲ್ಲಿ ಹೇಳಿಕೊಂಡಿದ್ದಾರೆ.

ಭಾರತ ಬೆಂಬಲ:

ಹಿಂದೂ ಮಹಾ ಸಾಗರದಲ್ಲಿ ತನ್ನದೇ ರಕ್ಷಣಾ ಹಿತಾಸಕ್ತಿ ಹೊಂದಿರುವ ಭಾರತ ಬ್ರಿಟನ್ ಸರ್ಕಾರ ದ್ವೀಪವನ್ನು ವಾಪಸ್‌ ಮಾರಿಷಸ್‌ಗೆ ಒಪ್ಪಿಸಲು ಉತ್ತೇಜನ ನೀಡುತ್ತಲೇ ಬಂದಿದೆ. 1971ರ ಬಾಂಗ್ಲಾ ವಿಮೋಚನಾ ಸಮರ ವೇಳೆ ಅಮೆರಿಕವು ಇಲ್ಲಿ ನಿಯೋಜಿಸಿದ್ದ ಯುದ್ಧನೌಕೆಯು ಭಾರತಕ್ಕೆ ಅಪಾಯ ತಂದೊಡ್ಡಿದ ಹಿನ್ನೆಲೆಯಲ್ಲಿ ಈ ದ್ವೀಪವನ್ನು ವಿದೇಶಿ ಸೇನೆಯಿಂದ ಮುಕ್ತ ಮಾಡಬೇಕೆಂಬುದು ಭಾರತದ ಪ್ರಯತ್ನವಾಗಿದೆ.

ಗಾರ್ಸಿಯೋ ದ್ವೀಪದ ಹಿನ್ನೆಲೆ

1814ರಲ್ಲಿ ನೆಪೋಲಿಯನ್ ಮೇಲೆ ಗೆದ್ದ ಬಳಿಕ ಮಾರಿಷಸ್‌ ಒಳಗೊಂಡಂತೆ ಗಾರ್ಸಿಯೋ ದ್ವೀಪ ಸಮೂಹ ಬ್ರಿಟನ್‌ ವ್ಯಾಪ್ತಿಗೆ ಬಂದಿತ್ತು. ಆದರೆ 1968ರಲ್ಲಿ ಮಾರಿಷಸ್‌ ಸ್ವತಂತ್ರ್ಯ ಘೋಷಿಸಿಕೊಂಡಿತ್ತು. ಆಗ ಮಾಡಿಕೊಂಡ ಒಪ್ಪಂದದ ಅನ್ವಯ, ಯಾವಾಗ ಮಾರಿಷಸ್‌ಗೆ ಬ್ರಿಟನ್‌ನ ಸೇನೆಯ ರಕ್ಷಣೆ ಅವಶ್ಯಕತೆ ಇರುವುದಿಲ್ಲವೋ ಆಗ ಗಾರ್ಸಿಯೋ ದ್ವೀಪವನ್ನು ಮಾರಿಷಸ್‌ಗೆ ಹಿಂದಿರಿಗಿಸಲಾಗುವುದು ಎಂದು ಹೇಳಲಾಗಿತ್ತು. ಹೀಗಾಗಿ ಆಗ ಗಾರ್ಸಿಯೋ ದ್ವೀಪದಲ್ಲಿ ಅಮೆರಿಕ- ಬ್ರಿಟನ್‌ನ ಜಂಟಿ ಸೇನಾ ನೆಲೆ ಸ್ಥಾಪಿಸಲಾಗಿತ್ತು. ಈ ನಡುವೆ 1980ರ ಬಳಿಕ ಮಾರಿಷಸ್‌ ದ್ವೀಪದ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಲು ಆರಂಭಿಸಿತ್ತು. ಬ್ರಿಟನ್‌ ಒಪ್ಪದೇ ಇದ್ದಾಗ ಅಂತಾರಾಷ್ಟ್ರೀಯ ಕೋರ್ಟ್‌ ಮೊರೆ ಹೋಗಿತ್ತು. ಬಳಿಕ ಕೋರ್ಟ್‌ ಮಾರಿಷಸ್‌ ಪರವಾಗಿ ತೀರ್ಪು ನೀಡಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆರಿಕ-ಇಯು ತೆರಿಗೆ ಸಮರ - ವ್ಯಾಪಾರ ಒಪ್ಪಂದಕ್ಕೆ ಬ್ರೇಕ್‌
ಸಿಂಧೂ ನೀರಿಲ್ಲದೆ 24 ಕೋಟಿ ಜನಕ್ಕೆ ಸಂಕಷ್ಟ : ಪಾಕ್‌ ಗೋಳು