
ದುರಂಧರ್ ಪಾರ್ಟ್ 1 ಮತ್ತು ಪಾರ್ಟ್- 2 ಬಾಲಿವುಡ್ನ ಎಲ್ಲಾ ದಾಖಲೆಗಳನ್ನು ಉಡಾಯಿಸಿ ನಂಬರ್ 1 ಸ್ಥಾನಕ್ಕೆ ಏರಿದೆ. ಇದರಲ್ಲಿ ತೋರಿಸಿರೋದು ಎಲ್ಲವೂ ಸುಳ್ಳು ಎಂದು ಪಾಕಿಸ್ತಾನಿಗಳು ಬಿಡಿ, ನಮ್ಮ ಭಾರತದಲ್ಲಿಯೇ ಒಂದಷ್ಟು ವರ್ಗ ಹೇಳುವ ಮೂಲಕ, ತಮ್ಮನ್ನು ತಾವು ಸಮಾಧಾನ ಪಡಿಸಿಕೊಳ್ಳುತ್ತಿವೆ. ಅಷ್ಟಕ್ಕೂ ಸತ್ಯ ಎಂದಿಗೂ ಕಹಿನೇ ಎನ್ನುವುದು ದುರಂಧರ್ ಮಾಡಿರುವ ದಾಖಲೆ ಸಾಬೀತು ಮಾಡಿದೆ. ಭಾರತದ ಇತಿಹಾಸದಲ್ಲಿನ ಕೆಲವು ಪುರುಷರನ್ನು ಮಹಾನ್ ಎಂದು ಬಿಂಬಿಸಿ ಪಠ್ಯ ಪುಸ್ತಕಗಳಲ್ಲಿ ಹಲವಾರು ದಶಕಗಳಿಂದ ಮಕ್ಕಳ ತಲೆಯಲ್ಲಿ ತುಂಬಿ, ಸುಳ್ಳೇ ಸತ್ಯ ಎಂದು ನಂಬಿಕೊಂಡು ಬಂದಿರುವವರಿಗೆ ಈಗ ಭಾರತದ ಇತಿಹಾಸದ ಆ ಕರಾಳ ಮುಖಗಳು, ಮಹಾನ್ ಪುರುಷರ ಸತ್ಯದ ಅನಾವರಣವೂ ಆಗುತ್ತಿದೆ.
ದುರಂಧರ್ ಸಿನಿಮಾ ಪಾಕಿಸ್ತಾನ ಸೇರಿದಂತೆ ಕೆಲವು ಮುಸ್ಲಿಂ ರಾಷ್ಟ್ರಗಳು ಬ್ಯಾನ್ ಮಾಡಿದ್ದರೂ, ಪಾಕಿಸ್ತಾನದಲ್ಲಿ ದಾಖಲೆಯ ಪ್ರಮಾಣದಲ್ಲಿ ನಕಲಿ ಪ್ರತಿಗಳು ಸೋರಿಕೆಯಾಗಿವೆ ಎಂದ ಮೇಲೆ ತಮ್ಮ ಹಿಂದಿನವರ ಪಾಪದ ಕೃತ್ಯವನ್ನು ನೋಡಲು ಅದೆಷ್ಟು ಮಂದಿ ಉತ್ಸುಕರಾಗಿದ್ದಾರೆ ಎನ್ನುವುದು ಕಾಣಿಸುತ್ತದೆ. ಭಾರತದಲ್ಲಿಯೂ ಇದರ ವಿರುದ್ಧ ಮಾತನಾಡುವವರೇ ಚಿತ್ರ ಬಿಡುಗಡೆಯಾದ ತಕ್ಷಣ ಎಲ್ಲಕ್ಕಿಂತ ಮೊದಲು ಹೋಗಿ ನೋಡಿ ಕಮೆಂಟ್ಸ್ ಮಾಡುತ್ತಿದ್ದಾರೆ ಅಲ್ಲವೆ, ಇದೂ ಹಾಗೆನೇ.
ಅದೇನೇ ಇರಲಿ. ಪಾಕಿಸ್ತಾನದಲ್ಲಿ, ಭಾರತದ ರಾ ಏಜೆಂಟ್ಗಳು ಯಾವ ರೀತಿಯಲ್ಲಿ ಇರುತ್ತಿದ್ದರು ಎಂದು ಚಿತ್ರ ತೋರಿಸಿದೆ. ಇದೀಗ ಈ ಚಿತ್ರವನ್ನು ನೋಡಿದ ಬಳಿಕ ಅಲ್ಲಿರುವ ಜನರು ಒಬ್ಬರನ್ನೊಬ್ಬರು ನಂಬದ ಸ್ಥಿತಿ ಎದುರಾಗಿದೆಯಂತೆ. ಅದಕ್ಕೆ ತಕ್ಕಂಥ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಇದರಲ್ಲಿ ಭಿಕ್ಷುಕನೊಬ್ಬ ಮಲಗಿದ್ದಾಗ, ಅವನನ್ನು ಎಬ್ಬಿಸಿ ಐಡಿ ಕಾರ್ಡ್ ಎಲ್ಲಾ ಕೇಳಿದ್ದಾರೆ. ಏಕೆಂದರೆ, ಭಾರತದ ರಾ ಏಜೆಂಟ್ಗಳು ಭಿಕ್ಷುಕರ ವೇಷದಲ್ಲಿ ಇದ್ದ ಸತ್ಯ ಈಗ ಪಾಕಿಗಳಿಗೆ ಗೊತ್ತಾಗಿ ನಡುಗಿ ಹೋಗಿದ್ದಾರೆ. ಈಗಲೂ ಯಾವ ರೂಪದಲ್ಲಿಯಾದರೂ ಭಾರತದ ರಾ ಏಜೆಂಟ್ಗಳು ಇರಬಹುದು ಎನ್ನುವ ವಾತಾವರಣ ನಿರ್ಮಾಣವಾಗಿದೆ. ತಮ್ಮವರನ್ನೇ ತಾವು ನಂಬದ ಸ್ಥಿತಿಯನ್ನು ತಂದುಕೊಂಡಿದ್ದಾರೆ ಪಾಕಿಸ್ತಾನಿಗಳು. ಇದರ ವಿಡಿಯೋ ವೈರಲ್ ಆಗುತ್ತಲೇ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ