
ಇರಾನ್ ಇಸ್ರೇಲ್ ನಡುವಣ ಯುದ್ಧದಲ್ಲಿ ಮಧ್ಯೆ ಬಂದ ಅಮೆರಿಕಾ ಈಗಾಗಲೇ ಯುದ್ಧಕ್ಕಾಗಿ ಲಕ್ಷಾಂತರ ಡಾಲರ್‌ಗಳನ್ನು ವೆಚ್ಚ ಮಾಡಿರೋದು ಗೊತ್ತೇ ಇದೆ. ಒಂದ ಅಂದಾಜಿನ ಪ್ರಕಾರ ಅಮೆರಿಕಾ ಇಸ್ರೇಲ್ ಇರಾನ್ ಯುದ್ಧದ ಮೊದಲ ವಾರದಲ್ಲಿ ಇದಕ್ಕಾಗಿ ಅಮೆರಿಕಾ ವ್ಯಯಿಸಿದ ಮೊತ್ತ ಬರೋಬ್ಬರಿ 11 ಬಿಲಿಯನ್ ಡಾಲರ್‌ಗಳು. ತನಗೆ ಸಂಬಂಧವಿಲ್ಲದ ಕಡೆ ಯುದ್ಧ ಮಾಡುವ ಮೂಲಕ ಇಷ್ಟೊಂದು ಮೊತ್ತ ವ್ಯಯಿಸಿದ ಅಮೆರಿಕಾದ ಪಾಲಿಗೆ ಇದೊಂದು ದೊಡ್ಡ ನಷ್ಟವೇ ಹೀಗಿರುವಾ ಅಮೆರಿಕಾದಲ್ಲಿ ಕೆಲವು ಸಂಸ್ಥೆಗಳ ಸರ್ಕಾರಿ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ವೇತನ ಇನ್ನೂ ಆಗಿಲ್ಲ ಎಂಬ ವಿಚಾರ ಚರ್ಚೆಗೆ ಬಂದಿದೆ. ಹೌದು ಮತ್ತೊಬ್ಬ ಶ್ರೀಮಂತ ಉದ್ಯಮಿ, ಎಲಾನ್ ಮಸ್ಕ್ ಅವರು, ಅಮೆರಿಕದ ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ಸಿಬ್ಬಂದಿಗೆ ವೇತನ ನೀಡುವುದಾಗಿ ಹೇಳಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ಹಣಕಾಸಿನ ಕುರಿತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ (DHS)ಶನಿವಾರ ಪ್ರಪಂಚದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರೆನಿಸಿರುವ ಸ್ಪೇಸ್ ಎಕ್ಸ್ ಸಂಸ್ಥಾಪಕ ಎಲಾನ್ ಮಸ್ಕ್, ಹಣಕಾಸು ಸಹಾಯ ನೀಡುವುದಾಗಿ ಘೋಷಿಸಿದ್ದಾರೆ. ಮೆರಿಕದ ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ಸಿಬ್ಬಂದಿಗೆ ವೇತನ ನೀಡಲು ಅವರು ಮುಂದಾಗಿದ್ದಾರೆ. ಹಣಕಾಸಿನ ಕೊರತೆಯಿಂದಾಗಿ ವಿಮಾನ ನಿಲ್ದಾಣದ ಭದ್ರತಾ ತಪಾಸಣೆಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಉದ್ದವಾದ ಸಾಲುಗಳು ಕಂಡುಬರುತ್ತಿವೆ, ಅಲ್ಲಿ ಸಾರಿಗೆ ಭದ್ರತಾ ಸಂಸ್ಥೆಯ (ಟಿಎಸ್ಎ) ನೌಕರರು ಫೆಬ್ರವರಿ ಮಧ್ಯದಿಂದ ವೇತನವಿಲ್ಲದೆ ಕೆಲಸ ಮಾಡುತ್ತಿದ್ದಾರೆ.
ಟ್ವಿಟ್ಟರ್‌ನಲ್ಲಿ ಎಲಾನ್ ಮಸ್ಕ್ ಪೋಸ್ಟ್
ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಹಲವಾರು ಅಮೆರಿಕನ್ನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿರುವ ಈ ಹಣಕಾಸಿನ ಬಿಕ್ಕಟ್ಟಿನ ಸಮಯದಲ್ಲಿ ಟಿಎಸ್ಎ ಸಿಬ್ಬಂದಿಯ ಸಂಬಳವನ್ನು ಪಾವತಿಸಲು ನಾನು ಬಯಸುತ್ತೇನೆ ಎಂದು ಮಸ್ಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎಲಾನ್ ಮಸ್ಕ್ ಪೋಸ್ಟ್ ಬಳಿಕ ಟ್ರಂಪ್ ಬೆದರಿಕೆ
ಆದರೆ ಎಲಾನ್ ಮಸ್ಕ್ ಅವರು ಈ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಒದಗಿಸಲು ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಏಜೆಂಟ್‌ಗಳನ್ನು ಬಳಸುವುದಾಗಿ ಬೆದರಿಕೆ ಹಾಕಿದ್ದಾರೆ. ಒಂದು ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಖಾಸಾ ದೋಸ್ತ್‌ಗಳಾಗಿದ್ದವರು. ಆದರೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ನಡೆದು ಟ್ರಂಪ್ ಅಧಿಕಾರಕ್ಕೇರುತ್ತಿದ್ದಂತೆ ಅದೇನಾಯ್ತೋ ಏನೋ ಖಾಸಾ ದೋಸ್ತ್‌ಗಳು ಬದ್ಧವೈರಿಗಳಾಗಿ ಬದಲಾಗಿದ್ದರು. ಡೆಮೋಕ್ರಾಟ್‌ಗಳು ತಕ್ಷಣ ಹಣಕಾಸಿನ ಒಪ್ಪಂದಕ್ಕೆ ಸಹಿ ಹಾಕದಿದ್ದರೆ, ನಮ್ಮ ಅದ್ಭುತ ಮತ್ತು ದೇಶಭಕ್ತಿಯ ICE ಏಜೆಂಟ್‌ಗಳನ್ನು ವಿಮಾನ ನಿಲ್ದಾಣಗಳಿಗೆ ಸ್ಥಳಾಂತರಿಸುತ್ತೇನೆ ಅಲ್ಲಿ ಅವರು ಹಿಂದೆಂದೂ ನೋಡಿರದ ರೀತಿಯಲ್ಲಿ ಭದ್ರತೆಯನ್ನು ಮಾಡುತ್ತಾರೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ಶವದೊಂದಿಗೆ 13 ಗಂಟೆ ಪ್ರಯಾಣ ಮಾಡಿದ 331 ಪ್ರಯಾಣಿಕರು
ಕೆಲವು ಗಂಟೆಗಳ ನಂತರ, ಅವರು ಮತ್ತೆ ಪೋಸ್ಟ್ ಮಾಡಿದ್ದು, ಸೋಮವಾರ ICE ಸ್ಥಳಾಂತರಿಸಲು ನಾನು ಎದುರು ನೋಡುತ್ತಿದ್ದೇನೆ, ಮತ್ತು ಈಗಾಗಲೇ ಅವರಿಗೆ'ಸಿದ್ಧರಾಗಿ ಎಂದು ಹೇಳಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ. ಡಿಹೆಚ್‌ಎಸ್ ಅಧಿಕಾರದ ಅಡಿಯಲ್ಲಿ DHS (Department of Homeland Security) ಕಾರ್ಯನಿರ್ವಹಿಸುವ ಟಿಎಸ್‌ಎ, ಸುಮಾರು 65,000 ಉದ್ಯೋಗಿಗಳನ್ನು ಒಳಗೊಂಡಿದೆ. ವಿವಿಧ ಅಂದಾಜಿನ ಪ್ರಕಾರ ಅವರಿಗೆ ನೀಡಲಾಗುವ ವೇತನದ ವಾರ್ಷಿಕ ವೆಚ್ಚ $2.5 ಬಿಲಿಯನ್ ಮತ್ತು $3 ಬಿಲಿಯನ್ ನಡುವೆ ಇದೆ.
ಅಮೆರಿಕಾದ ವಲಸೆ ಮತ್ತು ಕಸ್ಟಮ್ಸ್ ಜಾರಿ (Immigration and Customs Enforcement) ಅಡಿಯಲ್ಲಿ ಬರುವ ಮತ್ತೊಂದು ಏಜೆನ್ಸಿ ವಲಸೆ ಜಾರಿ ಕಾರ್ಯಾಚರಣೆಯನ್ನು ಹೇಗೆ ನಡೆಸುತ್ತದೆ ಎಂಬುದರಲ್ಲಿ ಬದಲಾವಣೆಗಳನ್ನು ಜಾರಿಗೆ ತರುವವರೆಗೆ, ಕಾಂಗ್ರೆಸ್‌ನಲ್ಲಿರುವ ಡೆಮೋಕ್ರಾಟ್‌ಗಳು ಡಿಹೆಚ್‌ಎಸ್‌ಗೆ ಯಾವುದೇ ಹೊಸ ನಿಧಿಯನ್ನು ವಿರೋಧಿಸಿದ್ದಾರೆ. ಫೆಬ್ರವರಿ 14 ರಂದು ವೇತನ ಸ್ಥಗಿತಗೊಂಡಾಗಿನಿಂದ 300 ಕ್ಕೂ ಹೆಚ್ಚು ಟಿಎಸ್ಎ ಉದ್ಯೋಗಿಗಳು ಈಗಾಗಲೇ ಏಜೆನ್ಸಿಯನ್ನು ತೊರೆದಿದ್ದಾರೆ ಎಂದು ಡಿಎಚ್‌ಎಸ್ ತಿಳಿಸಿದೆ. ಆದರೆ ಅಮೆರಿಕಾ ಮಾಧ್ಯಮಗಳು ಅನಿಯಂತ್ರಿತ ಗೈರುಹಾಜರಿ ದ್ವಿಗುಣಗೊಂಡಿದೆ ಎಂದು ವರದಿ ಮಾಡಿವೆ.
ಇದನ್ನೂ ಓದಿ: ರನ್‌ವೇಯಲ್ಲಿ ಟ್ರಕ್‌ಗೆ ಡಿಕ್ಕಿ ಹೊಡೆದ ವಿಮಾನ
ಕೆಲವು ಅಧಿಕಾರಿಗಳು ಬೇರೆ ಕೆಲಸಗಳನ್ನು ಮಾಡುತ್ತಿದ್ದಾರೆಅಥವಾ ದೇಣಿಗೆಗಳನ್ನು ಅವಲಂಬಿಸಿದ್ದಾರೆ ಎಂದು ಯೂನಿಯನ್ ಅಧಿಕಾರಿಗಳು ಹೇಳುತ್ತಿದ್ದಾರರೆ, ಆದರೆ ಹಲವಾರು ಪ್ರಮುಖ ವಿಮಾನ ನಿಲ್ದಾಣಗಳು ವೇತನವಿಲ್ಲದೆ ಕಷ್ಟಪಡುತ್ತಿರುವ ಟಿಎಸ್‌ಎ ಸಿಬ್ಬಂದಿಗೆ ಉಡುಗೊರೆ ಕಾರ್ಡ್‌ಗಳನ್ನು ಸಂಗ್ರಹಿಸುತ್ತಿವೆ ಮತ್ತು ಆಹಾರ ಪ್ಯಾಂಟ್ರಿಗಳನ್ನು ಸಂಗ್ರಹಿಸುತ್ತಿವೆ. ಡಿಹೆಚ್‌ಎಸ್‌ಗೆ ಹಣಕಾಸು ಮಂಜೂರು ಮಾಡುವ ಮೊದಲು, ಡೆಮಾಕ್ರಟಿಕ್ ಶಾಸಕರು ಗಸ್ತುಗಳನ್ನು ಕಡಿತಗೊಳಿಸಬೇಕು, ಐಸಿಇ ಏಜೆಂಟ್‌ಗಳು ಫೇಸ್ ಮಾಸ್ಕ್ ಧರಿಸುವುದನ್ನು ನಿಷೇಧಿಸಬೇಕು ಮತ್ತು ಖಾಸಗಿ ಆಸ್ತಿಯನ್ನು ಪ್ರವೇಶಿಸುವ ಮೊದಲು ನ್ಯಾಯಾಂಗ ವಾರಂಟ್ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಜನವರಿಯಲ್ಲಿ ಮಿನ್ನಿಯಾಪೋಲಿಸ್‌ನಲ್ಲಿ ಆಕ್ರಮಣಕಾರಿ ಐಸಿಇ ಕಾರ್ಯಾಚರಣೆಯನ್ನು ಪ್ರತಿಭಟಿಸುತ್ತಿದ್ದ ಇಬ್ಬರು ಅಮೇರಿಕನ್ ನಾಗರಿಕರ ಹತ್ಯೆಯ ನಂತರ, ಟ್ರಂಪ್ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮುಖ್ಯಸ್ಥೆ ಕ್ರಿಸ್ಟಿ ನೋಯೆಮ್ ಅವರನ್ನು ವಜಾಗೊಳಿಸಿದರು, ಆದರೆ ವಲಸೆ ಜಾರಿ ಸಂಸ್ಥೆಯ ಬಗ್ಗೆ ಅಮೆರಿಕನ್ನರಲ್ಲೇ ಅಸಮಾಧಾನವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ