
ಕಾಬೂಲ್ (ಅ.27): ಅಮೆರಿಕ ಅಷ್ಘಾನಿಸ್ತಾನ ತೊರೆಯಲು ನಿರ್ಧರಿಸಿದ ಬಳಿಕ ಆಫ್ಘನ್ ಸೇನೆಗೆ ನೀಡಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳೆಲ್ಲಾ ಉಗ್ರರ ಪಾಲಾಗಿದ್ದವು. ಇದೀಗ ಹೊರಬಿದ್ದಿರುವ ಇನ್ನೊಂದು ಅಚ್ಚರಿಯ ವಿಷಯವೆಂದರೆ, ಅಮೆರಿಕ ಹೊರತುಪಡಿಸಿದರೆ ಅಮೆರಿಕ ನಿರ್ಮಿತ ಅತ್ಯಾಧುನಿಕ ಯುಎಚ್-60 ಬ್ಲಾಕ್ ಹಾಕ್ ಕಾಪ್ಟರ್‌ಗಳಿರುವುದು ಇದೀಗ ತಾಲಿಬಾನ್ ಬಳಿಯಂತೆ.
ಹೌದು ಅಮೆರಿಕ ಸೇನಾ ಪಡೆ ಆಫ್ಘನ್ ಕಾರ್ಯಾಚರಣೆಗೆಂದು 25 ಯುಎಚ್-60 ಕಾಪ್ಟರ್‌ಗಳನ್ನು ಬಳಸುತ್ತಿತ್ತು. ಅವೆಲ್ಲವನ್ನೂ ಅದೀಗ ಅಷ್ಘಾನಿಸ್ತಾನದಲ್ಲೇ ಬಿಟ್ಟುಹೋಗುತ್ತಿದೆ. ಹೀಗಾಗಿ ಅವೆಲ್ಲಾ ಇದೀಗ ಉಗ್ರರ ಪಾಲಾಗಿದೆ. ಇಂಥ ಒಂದು ಕಾಪ್ಟರ್ ಅನ್ನು ಸೇನಾ ನೆಲೆಯೊಂದರ ಬಳಿ ಉಗ್ರರು ಚಲಾಯಿಸುತ್ತಿರುವ ದೃಶ್ಯಗಳು ಗುರುವಾರ ವೈರಲ್ ಆಗಿದೆ. ಆದರೆ ಯುದ್ಧ ಕಾಪ್ಟರ್ ಹಾರಿಸಲು ಉನ್ನತ ತಾಂತ್ರಿಕತೆ ಬೇಕಾದ ಕಾರಣ ಉಗ್ರರಿಗೆ ಕಾಪ್ಟರ್ ಅನ್ನು ಮೇಲೆ ಹಾರಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!
‘ಯುಎಚ್ 60 ವಿಶೇಷತೆ: ಇಬ್ಬರು ಪೈಲಟ್ ಸೇರಿದಂತೆ 4 ಜನರು ಕೂರಲು ಸಾಧ್ಯವಿರುವ ಎರಡು ಇಂಜಿನ್ ಹೊಂದಿರುವ ಬ್ಲಾಕ್‌ಹಾಕ್ ಯುದ್ಧಗಳಲ್ಲಿ ಮುಂಚೂಣಿಯಲ್ಲಿ ಬಳಸಲ್ಪಡುವ ಹೆಲಿಕಾಪ್ಟರ್. 1,200 ಕಿಲೋಗ್ರಾಂ ತೂಕದ ಯುದ್ಧ ಸಾಮಾಗ್ರಿಗಳನ್ನು ಹೊತ್ತು ಈ ಹೆಲಿಕಾಪ್ಟರ್ 4 ಸಾವಿರ ಅಡಿ ಎತ್ತರದವೆರೆಗೆ ಹಾರಬಲ್ಲದು. ಇದರಲ್ಲಿ ಎರಡು ಎಂ240 ಮಷಿನ್‌ಗನ್ ಅಳವಡಿಸಲಾಗಿದೆ. ಈ ಹೆಲಿಕಾಪ್ಟರ್ ಮೇಲೆ ದಾಳಿ ನಡೆಸಲು ಯತ್ನಿಸಿದರೆ ಅದನ್ನು ಶೀಘ್ರವಾಗಿ ಗುರುತಿಸುವಂತಹ ರೆಡಾರ್ ವ್ಯವಸ್ಥೆ ಅಳವಡಿಸಲಾಗಿದೆ. ಇದರಲ್ಲಿ ಅಳವಡಿಸಿರುವ ಕ್ಷಿಪಣಿ 320 ಮೀ ದೂರದಲ್ಲಿರುವ ಗುರಿಯನ್ನು ನಿಖರವಾಗಿ ಹೊಡೆದುರುಳಿಸಬಲ್ಲದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ