
ಕಾಬೂಲ್ (ಆ.27): ಪಾಕಿಸ್ತಾನ ನಮಗೆ ಎರಡನೇ ಮನೆ ಇದ್ದ ಹಾಗೆ. ಧಾರ್ಮಿಕವಾಗಿಯೂ ನಾವು ಪಾಕ್ ಜೊತೆ ಬಾಂಧವ್ಯ ಹೊಂದಿದ್ದೇವೆ ಎಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಹೇಳಿದ್ದಾನೆ.
ನಾವು ಪಾಕ್‌ನೊಂದಿಗೆ ಗಡಿ ಹಂಚಿಕೊಂಡಿದ್ದೇವೆ. ಇನ್ನು ಧರ್ಮದ ಆಧಾರದಲ್ಲಿ ನೋಡುವುದಾದರೆ ನಾವು ಸಾಂಪ್ರದಾಯಿಕವಾಗಿ ಬೆಸೆದುಕೊಂಡಿದ್ದೇವೆ. ಎರಡೂ ದೇಶಗಳ ಜನರು ಪರಸ್ಪರ ಜೊತೆಯಾಗುತ್ತಾರೆ.
ಮಹಿಳೆ ಹೊರಬಂದರೆ ಸುರಕ್ಷಿತಳಲ್ಲ, ಸತ್ಯ ಒಪ್ಪಿಕೊಂಡ ತಾಲಿಬಾನ್‌ಗಳಿಂದ ವರ್ಕ್ ಫ್ರಮ್ ಹೋಮ್‌ಗೆ ಸೂಚನೆ!
ಹೀಗಾಗಿ ಪಾಕ್ ಜೊತೆ ನಾವು ನಮ್ಮ ಸಂಬಂಧವನ್ನು ಇನ್ನಷ್ಟುಬಲಗೊಳಿಸಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ‘ಭಾರತ-ಪಾಕಿಸ್ತಾನ ಪರಸ್ಪರ ಮಾತುಕತೆಯ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಬೆಳೆಸುವ ಅಗತ್ಯವಿದೆ. ಇದಕ್ಕಾಗಿ ನಾವು ಪ್ರಯತ್ನಿಸುತ್ತೇವೆ. ಅಷ್ಘಾನಿಸತಾನವನ್ನು ತಾಲಿಬಾನ್ ವಶಪಡಿಸಿದ್ದರಲ್ಲಿ ಪಾಕ್ ಪಾತ್ರವಿಲ್ಲ ಎಂದಿದ್ದಾನೆ.
ನಮಗೆ ಎಲ್ಲಾ ಅಫ್ಘಾನಿಗಳನ್ನೊಳಗೊಂಡ ಇಸ್ಲಾಂ ಆಧಾರಿತ ಸರಕಾರ ರಚಿಸಬೇಕಾಗಿದೆ. ಅಮೇರಿಕಾ ಸೇನೆ ದೇಶ ತೊರೆಯುವ ಮೊದಲು ಸರಕಾರ ರಚಿಸಲಿದ್ದೇವೆ. ಆಫ್ಘನ್‌ನ ಎಲ್ಲಾ ಪ್ರದೇಶಗಳ ನಮ್ಮ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ