ತಾಲಿಬಾನ್‌ ಕೈಗೆ ಪಾಕ್‌ ಅಣ್ವಸ್ತ್ರ : ಅಮೆರಿಕ ಕಳವಳ

By Kannadaprabha NewsFirst Published Aug 27, 2021, 6:28 AM IST
Highlights
  • ಅಷ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬರುತ್ತಿರುವ ತಾಲಿಬಾನ್‌ ಉಗ್ರರ ಪಡೆ
  •  ಪಕ್ಕದ ಸ್ನೇಹಿತ ರಾಷ್ಟ್ರವಾದ ಪಾಕಿಸ್ತಾನದ ಅಣ್ವಸ್ತ್ರಗಳು ದೊರೆತರೆ ಏನಾಗಬಹುದು ಎಂದು ಅಮೆರಿಕದ ಸಂಸದರು ಕಳವಳ

ವಾಷಿಂಗ್ಟನ್‌ (ಆ.27): ಅಷ್ಘಾನಿಸ್ತಾನದಲ್ಲಿ ಅಧಿಕಾರಕ್ಕೆ ಬರುತ್ತಿರುವ ತಾಲಿಬಾನ್‌ ಉಗ್ರರಿಗೆ ಪಕ್ಕದ ಸ್ನೇಹಿತ ರಾಷ್ಟ್ರವಾದ ಪಾಕಿಸ್ತಾನದ ಅಣ್ವಸ್ತ್ರಗಳು ದೊರೆತರೆ ಏನಾಗಬಹುದು ಎಂದು ಅಮೆರಿಕದ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ. ಜೊತೆಗೆ, ತಾಲಿಬಾನಿಗಳಿಗೆ ದೊರೆತಿರುವ ಅಮೆರಿಕದ ಸೇನಾಪಡೆಗಳ ಶಸ್ತ್ರಾಸ್ತ್ರಗಳನ್ನು ಹಿಂದಕ್ಕೆ ಪಡೆಯಬೇಕು ಎಂದೂ ಆಗ್ರಹಿಸಿದ್ದಾರೆ.

ಈ ಕುರಿತು ಸಂಸತ್ತಿನ ಉಭಯ ಸದನಗಳ 68 ಸದಸ್ಯರು ಅಧ್ಯಕ್ಷ ಜೋ ಬೈಡೆನ್‌ ಅವರಿಗೆ ಪತ್ರ ಬರೆದಿದ್ದು, ತಾಲಿಬಾನ್‌ ಉಗ್ರರ ಕೈಗೆ ಪಾಕಿಸ್ತಾನದ ಅಣ್ವಸ್ತ್ರ ಸಿಗದಂತೆ ನೋಡಿಕೊಳ್ಳಲು ನಿಮ್ಮ ಯೋಜನೆ ಏನು? ಅಷ್ಘಾನಿಸ್ತಾನದಿಂದ ಅಮೆರಿಕವು ಸೇನಾಪಡೆ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿ ಉಂಟಾಗಿರುವ ಸಂಕೀರ್ಣ ಪರಿಸ್ಥಿತಿಯ ಕುರಿತು ನೀವು ಉತ್ತರಿಸಬೇಕು.

ಅಫ್ಘನ್‌ನಲ್ಲಿ ಆತ್ಮಾಹುತಿ ದಾಳಿ, ಆರಗ ಜ್ಞಾನೇಂದ್ರ ಹೇಳಿಕೆ ನೀವೇ ಕೇಳಿ!

 ತಾಲಿಬಾನ್‌ ಉಗ್ರರು ಅಷ್ಘಾನಿಸ್ತಾನದ ಗಡಿಗಳಲ್ಲಿ ಸೇನೆ ನಿಯೋಜಿಸಿದರೆ ನೀವು ಆ ಭಾಗದ ದೇಶಗಳ ಜೊತೆ ಕೈಜೋಡಿಸಿ ಉಗ್ರರ ವಿರುದ್ಧ ಹೋರಾಡುತ್ತೀರಾ? ತಾಲಿಬಾನ್‌ ಆಡಳಿತದಲ್ಲಿ ಅಷ್ಘಾನಿಸ್ತಾನಕ್ಕೆ ಯಾವತ್ತೂ ಅಣ್ವಸ್ತ್ರ ಸಿಗದಂತೆ ನೋಡಿಕೊಳ್ಳಲು ಏನಾದರೂ ಯೋಜನೆ ನಿಮ್ಮಲ್ಲಿದೆಯೇ? ಈಗಾಗಲೇ ತಾಲಿಬಾನಿಗಳ ಕೈಗೆ ಸಿಕ್ಕಿರುವ ಅಮೆರಿಕದ ಸೇನಾಪಡೆಗಳ ಶಸ್ತ್ರಾಸ್ತ್ರಗಳನ್ನು ಹಿಂದಕ್ಕೆ ಪಡೆಯಲು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.

click me!