ಅಪ್ಘಾನ್‌ ಮೂಲದ ಭಾರತೀಯ ಉದ್ಯಮಿಯನ್ನು ಅಪಹರಿಸಿದ ತಾಲಿಬಾನ್!

Published : Sep 15, 2021, 02:37 PM ISTUpdated : Sep 15, 2021, 02:49 PM IST
ಅಪ್ಘಾನ್‌ ಮೂಲದ ಭಾರತೀಯ ಉದ್ಯಮಿಯನ್ನು ಅಪಹರಿಸಿದ ತಾಲಿಬಾನ್!

ಸಾರಾಂಶ

* ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ * ಉದ್ಯಮಿಯನ್ನು ಅಪಹರಸಿಇದ ಉಗ್ರರು * ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯಸ್ಥಿಕೆಗೆ ಬೇಡಿಕೆ * ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ * ಉದ್ಯಮಿಯನ್ನು ಅಪಹರಸಿಇದ ಉಗ್ರರು * ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯಸ್ಥಿಕೆಗೆ ಬೇಡಿಕೆ

ಕಾಬುಲ್(ಸೆ.15): ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಮತ್ತು ಅರಾಜಕತೆ ದಿನೇ ದಿನೇ ಹೆಚ್ಚುತ್ತಿದೆ. ರಾಜಧಾನಿ ಕಾಬೂಲ್‌ನಲ್ಲಿರುವ ಅಫ್ಘಾನ್ ಮೂಲದ ಭಾರತೀಯ ಪ್ರಜೆಯನ್ನು ಆತನ ಶಾಪ್‌ ಬಳಿ ತಾಲಿಬಾನಿಯರು ಕಿಡ್ನಾಪ್‌ ಮಾಡಿದ್ದಾರೆ. ಗನ್ ತೋರಿಸಿ ಮಾಡಿದ ಈ ಅಪಹರಣದ ಹಿಂದೆ ತಾಲಿಬಾನಿಗಳ ಕೈವಾಡವಿದೆ ಎಂದು ಹೇಳಲಾಗಿದೆ.

ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮಧ್ಯಸ್ಥಿಕೆಗೆ ಬೇಡಿಕೆ

ಇಂಡಿಯನ್ ವರ್ಲ್ಡ್‌ ಫೋರಂ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಮಾತನಾಡುತ್ತಾ ಈ ವಿಷಯದಲ್ಲಿ ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಿದ್ದೇವೆ ಎಂದಿದ್ದಾರೆ.

ಆಗಿದ್ದೇನು?

ಅಫ್ಘಾನ್ ಮೂಲದ ಭಾರತೀಯ ಪ್ರಜೆ ಬನ್ಸಾರಿ ಲಾಲ್ ಅರೆಂಡೆ (50) ಅವರನ್ನು ಸೋಮವಾರ ಬೆಳಿಗ್ಗೆ 8 ಗಂಟೆಗೆ ಕಾಬೂಲ್‌ನಲ್ಲಿರುವ ಆತನ ಶಾಪ್‌ ಬಳಿ ಅಪಹರಿಸಲಾಗಿದೆ ಎಂದು ಆಫ್ಘನ್ ಹಿಂದೂ-ಸಿಖ್ ಸಮುದಾಯ ಮಾಹಿತಿ ನೀಡಿದೆ ಎಂದು ಚಾಂಡೋಕ್ ಹೇಳಿದ್ದಾರೆ.

ಕಿಡ್ನಾಪ್‌ ಆದ ವ್ಯಕ್ತಿ ಫಾರ್ಮಾ ಉದ್ಯಮಿ

ಬನ್ಸಾರಿ ಲಾಲ್ ಔಷಧೀಯ ಉತ್ಪನ್ನಗಳ ಉದ್ಯಮಿಯಾಗಿದ್ದಾರೆ. ಈ ಘಟನೆಯ ಸಮಯದಲ್ಲಿ, ಅವನು ತನ್ನ ಅಂಗಡಿಯಲ್ಲಿ ತನ್ನ ಉದ್ಯೋಗಿಗಳೊಂದಿಗೆ ವ್ಯವಹರಿಸುತ್ತಿದ್ದನು. ಬನ್ಸಾರಿ ಲಾಲ್ ತನ್ನ ಉದ್ಯೋಗಿಗಳೊಂದಿಗೆ ಅಪಹರಿಸಲ್ಪಟ್ಟನು, ಆದರೆ ಉದ್ಯೋಗಿಗಳು ಹೇಗೋ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹೀಗಿರುವಾಗ ಅಪಹರಣಕಾರರು ಅವನನ್ನು ನಿರ್ದಯವಾಗಿ ಥಳಿಸಿದ್ದಾರೆ. ಬನ್ಸಾರಿ ಲಾಲ್ ಅವರ ಕುಟುಂಬ ದೆಹಲಿ ನಿವಾಸಿಯಾಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರತದ ನೆರೆಹೊರೆಯಲ್ಲಿ ಯುದ್ಧದ ಭೀತಿ, ರಷ್ಯಾ-ಚೀನಾ ಪರ; ಯುಎಸ್‌ನಿಂದ B-52 ಬಾಂಬರ್‌ ಹಾರಾಟ!
ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ