ಪಾಕ್ ಸೂಚನೆ ಬೆನ್ನಲ್ಲೇ ವರಸೆ ಬದಲಿಸಿದ ತಾಲಿಬಾನ್: ಕಾಶ್ಮೀರ ಮುಸ್ಲಿಮರಿಗೆ ಉಗ್ರರ ಬೆಂಬಲ!

By Suvarna NewsFirst Published Sep 3, 2021, 5:10 PM IST
Highlights
  • ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚಿಸುವ ಸರ್ಕಸ್
  • ಭಾರತ ವಿರುದ್ಧ ಯಾವುದೇ ಚಟುವಟಿಕೆ ಇಲ್ಲ ಎಂದಿದ್ದ ತಾಲಿಬಾನ್
  • ಕಾಶ್ಮೀರ ಸಮಸ್ಯೆಗೆ ತಲೆಹಾಕಲ್ಲ ಎಂದು ಇದೀಗ ವರಸೆ ಬದಲಿಸಿದ ತಾಲಿಬಾನ್
  • ಪಾಕಿಸ್ತಾನ ಸೂಚನೆ ಬೆನ್ನಲ್ಲೇ ತಾಲಿಬಾನ್ ಉಗ್ರರ ಯೂ ಟರ್ನ್

ಕಾಬೂಲ್(ಸೆ.03): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸರ್ಕಾರ ರಚಿಸುವ ಸರ್ಕಸ್ ನಡೆಸುತ್ತಿದ್ದಾರೆ. ಇದು ಬದಲಾದ ತಾಲಿಬಾನ್, ಶಾಂತಿ ಹಾಗೂ ಅಭಿವೃದ್ಧಿ ಮಂತ್ರ ಎಂದು ಹಲವರಿಗೆ ಮಂಕೂ ಬೂದಿ ಎರಚಿಸುವ ತಾಲಿಬಾನ್ ಉಗ್ರರು ಕ್ಷಣ ಕ್ಷಣಕ್ಕೂ ತಮ್ಮ ನಿಲುವು ಬದಲಿಸುತ್ತಿದ್ದಾರೆ. ಭಾರತ ತಂಟೆಗೆ ಬರುವುದಿಲ್ಲ, ಕಾಶ್ಮೀರಕ್ಕೆ ತಲೆಹಾಕುವುದಿಲ್ಲ ಎಂದಿದ್ದ ತಾಲಿಬಾನ್ ಉಗ್ರರು ಇದೀಗ ತಮ್ಮ ವರಸೆ ಬದಲಿಸಿದ್ದಾರೆ. ಕಾಶ್ಮೀರ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ ಎಂದು ತಾಲಿಬಾನ್ ಉಗ್ರರು ಹೇಳಿದ್ದಾರೆ.

ಆಫ್ಘನ್‌ ತಾಲಿಬಾನ್‌ ವಶದ ಹಿಂದೆ ಪಾಕಿಸ್ತಾನ ಕೈವಾಡ: ಬಯಲಾಯ್ತು ಸಂಚು!

ಬಿಬಿಸಿ ಉರ್ದು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಾಲಿಬಾನ್ ಮಾಧ್ಯಮ ವಕ್ತಾರ ಸುಹೈಲ್ ಶಾಹೀನ್ ಭಾರತದ ಆತಂಕರಿಕ ವಿಚಾರಕ್ಕೆ ಕೈಹಾಕಿದ್ದಾನೆ. ಕಾಶ್ಮೀರದಲ್ಲಿರುವ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ. ದೇಶದ ಯಾವುದೇ ಮೂಲೆಯಲ್ಲಿರುವ ಮುಸ್ಲಿಮರ ಹಕ್ಕುಗಳಿಗಾಗಿ ತಾಲಿಬಾನ್ ಹೋರಾಟ ನಡೆಸಲಿದೆ ಎಂದು ಶಾಹೀನ್ ಎಚ್ಚರಿಕೆ ನೀಡಿದ್ದಾನೆ.

ಮುಸ್ಲಿಮರು ಯಾವುದೇ ದೇಶದಲ್ಲಿರಲಿ, ಅವರಿಗೆ ಸಮಾನವಾದ ಹಕ್ಕು ಸಿಗಬೇಕು. ಅದಕ್ಕೆ ಯಾವ ಕಾನೂನು ಕೂಡ ಅಡ್ಡಿಯಾಗಬಾರದು. ಕಾಶ್ಮೀರದ ಮುಸ್ಲಿಮರ ಪರ ತಾಲಿಬಾನ್ ನಿಲ್ಲಲಿದೆ. ಎಲ್ಲಾ ಸಹಕಾರ ನೀಡಲಿದೆ ಎಂದು ಶಾಹೀನಾ ಹೇಳಿದ್ದಾನೆ.  ಈ ಮೂಲಕ ಶಾಂತವಾಗಿರುವ ಕಾಶ್ಮೀರದಲ್ಲಿ ವಿದ್ವಂಸಕ ಕೃತ್ಯ ಎಸಗುವ ಹಾಗೂ ಯುವಕರನ್ನು ಬಳಸಿಕೊಂಡು ಪ್ರಭಾವ ಬೀರುವ ಪ್ರಯತ್ನಕ್ಕೆ ತಾಲಿಬಾನ್ ಉಗ್ರರು ಕೈಹಾಕುವ ಸಾಧ್ಯತೆಯನ್ನು ಹೇಳಿದ್ದಾನೆ.

200 ಅಮೆರಿಕನ್ನರು, ಸಾವಿರಾರು ಆಫ್ಘನ್ನರ ಬಿಟ್ಟು ಹೊರಟ ಅಮೆರಿಕ!

ಕಾಬೂಲ್ ಕೈವಶ ಮಾಡಿದ ತಾಲಿಬಾನ್ ಉಗ್ರರು, ಭಾರತದ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿತ್ತು. ಭಾರತದ ವಿರುದ್ಧ ದ್ವೇಷ ಇಲ್ಲ. ಇನ್ನು ಕಾಶ್ಮೀರ ಭಾರತದ ಆತಂರಿಕ ವಿಚಾರ. ಭಾರತ ಹಾಗೂ  ಪಾಕಿಸ್ತಾನ ಈ ಕುರಿತು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ತಾಲಿಬಾನ್ ಮಧ್ಯಪ್ರವೇಶಿಸುವುದಿಲ್ಲ ಎಂದಿತ್ತು. 

ಇತ್ತೀಚೆಗೆ ದೋಹಾದಲ್ಲಿ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ತಾಲಿಬಾನ್ ಪ್ರತಿನಿಧಿಗಳ ಜೊತೆ ಸಭೆ ನಡೆಸಿದ್ದರು. ತಾಲಿಬಾನ್ ಆಹ್ವಾನದ ಮೇರೆ ಸಭೆ ನಡೆಸಿದ ದೀಪಕ್, ಭಾರತ ವಿರುದ್ಧ ಯಾವುದೇ ಚಟುವಟಿಕೆ, ಭಾರತ ವಿರೋಧಿ ಚಟುವಟಿಕಿಗೆ ಆಫ್ಘಾನಿಸ್ತಾನ ನೆಲ ಬಳಕೆ ಹಾಗೂ  ಉಗ್ರರ ಬಳಸಿ ಭಾರತದ ಮೇಲೆ ಯಾವುದೇ ಚಟವಟಿಕೆ ನಡೆಸಬಾರದು ಎಂದಿತ್ತು. ಈ ಎಲ್ಲಾ ಸೂಚನೆಗಳಿಗೆ ತಾಲಿಬಾನ್ ಸಕರಾತ್ಮಕವಾಗಿ ಸ್ಪಂದಿಸಿತ್ತು. 

ಶರಣಾಗಿ, ಇಲ್ಲ ಸಾಯಲು ಸಿದ್ಧರಾಗಿ: ಅಮೆರಿಕ ಬೆಂಬಲಿಸಿದವರ ಮನೆಗೆ ಬೆದರಿಕೆ ಪತ್ರ!

ಇದೀಗ ದಿಢೀರ್ ತಾಲಿಬಾನ್ ಉಲ್ಡಾ ಹೊಡೆಯಲು ಪಾಕಿಸ್ತಾನ ಐಎಸ್ಐ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಆರ್ಟಿಕಲ್ 370 ರದ್ದು, ಪ್ರತ್ಯೇಕತಾವಾದಿಗಳಿಗೆ ಜೈಲೂಟ, ಅವರ ಆದಾಯದ ಮೂಲ ಕಡಿತಗೊಂಡ ಬಳಿಕ ಕಣಿವೆ ರಾಜ್ಯದಲ್ಲಿ ಪಾಕಿಸ್ತಾನ ಪೋಷಿತ ನಾಟಕ ನಡೆಯುತ್ತಿಲ್ಲ. ಇದರಿಂದ ಕುಪಿತಗೊಂಡಿರುವ ಪಾಕಿಸ್ತಾನ, ತಾಲಿಬಾನ್ ಬಳಸಿ ಕಾಶ್ಮೀರದಲ್ಲಿ ಪ್ರಾಬಲ್ಯ ಸಾಧಿಸುವ ಯತ್ನದಲ್ಲಿದೆ.

ಆಫ್ಘಾನಿಸ್ತಾನ ಕೈವಶ ಮಾಡಲು ತಾಲಿಬಾನ್‌ಗೆ ಪಾಕಿಸ್ತಾನ ನೆರವು ನೀಡಿರುವುದು ಈಗಾಗಲೇ ಬಹಿರಂಗವಾಗಿದೆ. ತಾಲಿಬಾನ್ ಕಾಶ್ಮೀರ ವಿಚಾರದಲ್ಲಿ ತೆಗೆದುಕೊಂಡಿರುವ ನಿಲುವು ಬದಲಿಸಬೇಕು ಎಂದು ಪಾಕಿಸ್ತಾನ ಐಎಸ್ಐ ತಾಕೀತು ಮಾಡಿದೆ. ಇಲ್ಲವಾದಲ್ಲಿ ಬೆಂಬಲ ವಾಪಸ್ ಪಡೆಯುವ ಕುರಿತು ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ತಾಲಿಬಾನ್ ಯೂ ಟರ್ನ್ ಹೊಡೆದಿದೆ ಅನ್ನೋ ಅನುಮಾನಗಳು ಬಲವಾಗತೊಡಗಿದೆ.

click me!