ಆಫ್ಘಾನಿಸ್ತಾನ ಬಿಕ್ಕಟ್ಟು: ವಿಮಾನದಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದು 19ರ ಯುವ ಫುಟ್ಬಾಲ್ ಪಟು!

By Suvarna News  |  First Published Aug 19, 2021, 9:23 PM IST
  • ಕಂಡು ಕೇಳರಿಯದ ಘೋರ ದುರಂತಕ್ಕೆ ಸಾಕ್ಷಿಯಾದ ಆಫ್ಘಾನಿಸ್ತಾನ
  • ಅಮೆರಿಕ ವಿಮಾನದಿಂದ ಕೆಳಕ್ಕೆ ಬಿದ್ದ ಮೂವರಲ್ಲಿ ಓರ್ವ ಫುಟ್ಬಾಲ್ ಪಟು
  • ದುರಂತ ಅಂತ್ಯ ಕಂಡ ಫುಟ್ಬಾಲ್ ಪಟು

ಕಾಬೂಲ್(ಆ.19): ಆಫ್ಘಾನಿಸ್ತಾನದಲ್ಲಿನ ಒಂದೊಂದು ಕತೆ ಕರಳು ಹಿಂಡುವಂತಿದೆ. ತಾಲಿಬಾನ್ ಉಗ್ರರ ಕೈಗೆ ಸಿಲುಕಿರುವ ಆಫ್ಘಾನಿಸ್ತಾನ ಅಮಾಯಕರು ದೇಶ ತೊರೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಹೀಗೆ ಅಮೆರಿಕ ವಿಮಾನ ಟೇಕ್ ಆಫ್ ಆಗುವವರೆಗೂ ಓಡೋಡಿ ವಿಮಾನ ಹತ್ತಿದ ಮೂವರು ಮೇಲಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದರು. ಈ ಮೂವರ ಪೈಕಿ ಓರ್ವ ವೈದ್ಯನಾಗಿದ್ದರೆ, ಮತ್ತೊರ್ವ 19ರ ಯುವ ಫುಟ್ಬಾಲ್ ಪಟು ಅನ್ನೋದು ಬಹಿರಂಗವಾಗಿದೆ.

ಆಫ್ಘಾನಿಸ್ತಾನ ಬಿಕ್ಕಟ್ಟು; ವಿಮಾನದ ರೆಕ್ಕೆ ಕೆಳಗೆ ಕುಳಿತು ಜೀವ ತೆತ್ತ ಮೂವರಲ್ಲಿ ಓರ್ವ ಡಾಕ್ಟರ್!

Tap to resize

Latest Videos

undefined

ಕಾಬೂಲ್ ಏರ್‌ಪೋರ್ಟ್‌ಗೆ ಬಂದ ಅಮೆರಿಕ ಸೇನಾ ವಿಮಾನ ಹತ್ತಲು ನೂಕು ನುಗ್ಗಲು ಏರ್ಪಟ್ಟಿತ್ತು. ವಿಮಾನ ರನ್‌ವೇನತ್ತ ತಿರುಗಿದರು ಜನ ಆಫ್ಘಾನಿಸ್ತಾನ ತೊರೆಯಲು ಹಾತೊರೆಯುತ್ತಿದ್ದರು. ಹೀಗಾಗಿ ಓಡೋಡಿ ವಿಮಾನ ಹತ್ತಿ ರೆಕ್ಕೆ ಬಳಿ ಕುಳಿತಿದ್ದರು. ಹೀಗೆ ಕುಳಿತ ಮೂವರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಇದರಲ್ಲಿ 19 ವರ್ಷದ ಫುಟ್ಬಾಲ್ ಯುವ ಪಟು ಝಾಕಿ ಅನ್ವಾರಿ.

ಯುವ ಫುಟ್ಬಾಲ್ ಪಟು ಝಾಕಿ ಅನ್ವಾರಿ ಅತ್ಯಂತ ಪ್ರತಿಭಾನ್ವಿತ ಆಟಗಾರನಾಗಿದ್ದ. ಈ ಹಿಂದೆ ಹಲುವು ಬಾರಿ ತಾಲಿಬಾನ್ ಉಗ್ರರಿಂದ ಕೂದಲೆಳೆಯುವ ಅಂತರಲ್ಲಿ ಪಾರಾಗಿದ್ದ. ತಾಲಿಬಾನ್ ಶಬ್ಧಕ್ಕೆ ಬೆಚ್ಚಿ ಬೀಳುತ್ತಿದ್ದ ಝಾಕಿ ಅನ್ವಾರಿ, ಆಫ್ಘಾನಿಸ್ತಾನ ತಾಲಿಬಾನ್ ಕೈವಶವಾಗುತ್ತಿದ್ದಂತೆ ತನ್ನ ಫುಟ್ಬಾಲ್ ಕನಸು ನೂಚ್ಚು ನೂರಾಗಲಿದೆ ಅನ್ನೋ ಆತಂಕ ಆವರಿಸಿತ್ತು.

ಆಫ್ಘಾನಿಸ್ತಾನ ಬಿಕ್ಕಟ್ಟು; ಭಾರತದ ಜೊತೆಗಿನ ರಫ್ತು, ಆಮದು ವಹಿವಾಟು ಸ್ಥಗಿತಗೊಳಿಸಿದ ತಾಲಿಬಾನ್!

ಹೀಗಾಗಿ ಝಾಕಿ ಅನ್ವಾರಿ ಅಂತಾರಾಷ್ಟ್ರೀಯ ಫುಟ್ಬಾಲ್ ಪಟುವಾಗಬೇಕು ಅನ್ನೋ ಮಹದಾಸೆಯಿಂದ ಆಫ್ಘಾನಿಸ್ತಾನ ತೊರೆಯಲು ಮುಂದಾಗಿದ್ದ. ಹೀಗಾಗಿ ಅಮೆರಿಕ ಸೇನಾ ವಿಮಾನ ಹತ್ತುವ ಪ್ರಯತ್ನ ಮಾಡಿದ್ದ. ಆದರೆ ನೂಕು ನುಗ್ಗಲಿನಿಂದ ಅನ್ವಾರಿ ವಿಮಾನ ಹತ್ತಲು ಸಾಧ್ಯವಾಗಲಿಲ್ಲ. ಕೊನೆಯದಾಗಿ ವಿಮಾನ ರೆಕ್ಕೆಯ ಬಳಿ ಕುಳಿತು ಪ್ರಯಾಣ ಆರಂಭಿಸಿದ್ದ.

ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ; ಧ್ವಜ ಹಿಡಿದವರ ಮೇಲೆ ತಾಲಿಬಾನ್ ಗುಂಡಿನ ದಾಳಿ!

ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ರೆಕ್ಕೆಯಲ್ಲಿ ಕುಳಿತಿದ್ದ ಮೂವರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. 19ರ ಫುಟ್ಬಾಲ್ ಪಟು ಈ ಮೂಲಕ ದಾರುಣ ಅಂತ್ಯಕಂಡಿದ್ದಾನೆ. ಇನ್ನು ಮತ್ತೊರ್ವ ವೈದ್ಯನಾಗಿದ್ದಾರೆ. ಮೇಲಿಂದ ಕೆಳಕ್ಕೆ ಬಿದ್ದ ವೈದ್ಯ ಕಾಬೂಲಿನಿಂದ 4 ಕಿಲೋಮೀಟರ್ ದೂರದಲ್ಲಿರುವ ವಾಲಿ ಸಾಲೇಕ್ ಸೆಕ್ಯೂರಿಟಿ ಗಾರ್ಡ್ ಮನೆ ಮೇಲೆ ಬಿದ್ದಿದ್ದಾರೆ. ವೈದ್ಯನ ದೇಹ ಛಿದ್ರ ಛಿದ್ರವಾಗಿದೆ.

click me!