ಕಾಬೂಲ್(ಆ.19): ತಾಲಿಬಾನ್ ಉಗ್ರರ ಕೈಯಲ್ಲಿ ಆಫ್ಘಾನಿಸ್ತಾನ ನರಳಾಡುತ್ತಿದೆ. ಸರ್ಕಾರವನ್ನು ಹಿಮ್ಮೆಟ್ಟಿಸಿ ಆಫ್ಘಾನಿಸ್ತಾನವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದಾದ ಬೆನ್ನಲ್ಲೇ ತಾಲಿಬಾನ್ ಮಹತ್ವದ ನಿರ್ಧಾರ ಘೋಷಿಸಿದೆ. ಭಾರತದ ಜೊತೆಗಿನ ರಫ್ತು ಹಾಗೂ ಆಮದು ವಹಿವಾಟು ತಾತ್ಕಾಲಿಕ ಸ್ಥಗಿತಗೊಳಿಸಿದೆ.
ಆಫ್ಘಾನಿಸ್ತಾನ ಸ್ವಾತಂತ್ರ್ಯ ದಿನಾಚರಣೆ; ಧ್ವಜ ಹಿಡಿದವರ ಮೇಲೆ ತಾಲಿಬಾನ್ ಗುಂಡಿನ ದಾಳಿ!
undefined
ಭಾರತದಿಂದ ಆಮದು ಹಾಗೂ ರಫ್ತು ವಹಿವಾಟು ಪಾಕಿಸ್ತಾನದ ಮೂಲಕ ನಡೆಯುತ್ತಿತ್ತು. ಸದ್ಯ ಆಫ್ಘಾನಿಸ್ತಾನ ಸಹಜ ಸ್ಥಿತಿ ಬರವುವವರೆಗೂ ವಹಿವಾಟು ಸ್ಥಗಿತಗೊಳಿಸಲಾಗುತ್ತಿದೆ ಎಂದು ತಾಲಿಬಾನ್ ಹೇಳಿದೆ. ಪಾಕಿಸ್ತಾನ ಜೊತೆಗಿನ ಎಲ್ಲಾ ವಹಿವಾಟುಗಳನ್ನು ಸ್ಥಗಿತಗೊಳಿಸಿದೆ. ಹೀಗಾಗಿ ಭಾರತದ ವಹಿವಾಟು ಕೂಡ ಸ್ಥಗಿತಗೊಂಡಿದೆ ಎಂದು ತಾಲಿಬಾನ್ ಹೇಳಿದೆ.
ತಾಲಿಬಾನ್ ಧ್ವಜ ಬೇಡ, ಆಫ್ಘಾನ್ ಧ್ವಜ ಬೇಕು ಎಂದು ಪ್ರತಿಭಟಿಸಿದವರ ಮೇಲೆ ಗುಂಡಿನ ಸುರಿಮಳೆ!
ಭಾರತದಿಂದ ಸಕ್ಕರೆ, ಔಷಧ, ಉಡುಪು, ಚಹಾ, ಕಾಫಿ, ಮಸಾಲೆ ಸೇರಿದಂತೆ ಹಲವು ಸಾಂಬಾರ ಪದಾರ್ಥಗಳನ್ನು ಆಫ್ಘಾನಿಸ್ತಾನ ಆಮದು ಮಾಡಿಕೊಳ್ಳುತ್ತಿತ್ತು. ಆಫ್ಘಾನಿಸ್ತಾನ ಭಾರತಕ್ಕೆ ಒಣ ಹಣ್ಣುಗಳನ್ನು ರಫ್ತು ಮಾಡುತಿತ್ತು. ಇದೀಗ ಈ ವಹಿವಾಟುಗಳು ಸ್ಥಗಿತಗೊಂಡಿದೆ. ಪಾಕಿಸ್ತಾನ ಜೊತೆಗಿನ ವಹಿವಾಟು ಸ್ಥಗಿತಗೊಂಡಿರುವ ಕಾರಣ ಈ ಎಲ್ಲಾ ವಹಿವಾಟು ಸ್ಥಗಿತಗೊಂಡಿದೆ.
ಆಫ್ಘನ್ನರಿಗೆ ಭಾರತ ಆಸರೆ: ಧರ್ಮಾತೀತವಾಗಿ ತುರ್ತು ವೀಸಾ, ಕೇಂದ್ರದ ಮಾನವೀಯ ನಡೆ!
ಆಫ್ಘಾನಿಸ್ತಾನ ವ್ಯಾಪಾರ ಪಾಲುದಾರಿಕೆಯಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಇನ್ನು ಆಫ್ಘಾನಿಸ್ತಾನದ ಅಭಿವೃದ್ಧಿಯಲ್ಲಿ ಭಾರತದ ಕೊಡುಗೆ ಹೆಚ್ಚಿದೆ. ಮೂಲಭೂತ ಸೌಕರ್ಯ ಸೇರಿದಂತೆ ಗಣನೀಯ ಪ್ರಮಾಣದ ಹಣ ಹೂಡಿಕೆ ಮಾಡಿದೆ. ಭಾರತ, ಆಫ್ಘಾನಿಸ್ತಾನಕ್ಕೆ ಸುಮಾರು 835 ಮಿಲಿಯನ್ ಡಾಲರ್ ನಷ್ಟು ಮೊತ್ತದ ವಸ್ತುಗಳನ್ನು ರಫ್ತು ಮಾಡುತ್ತಿದೆ. ಇನ್ನು 510 ಮಿಲಯನ್ ಡಾಲರ್ ಮೊತ್ತದ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ.
ಇದೀಗ ತಾಲಿಬಾನ್ ಸೃಷ್ಟಿಸಿದ ಅರಾಜಕತೆಯಿಂದ ಈ ವಹಿವಾಟುಗಳು ಸ್ಥಗಿತಗೊಂಡಿದೆ. ಇದು ತಾತ್ಕಾಲಿಕ ಸ್ಥಗಿತವಾಗಿದ್ದು, ಶೀಘ್ರದಲ್ಲೇ ಎಲ್ಲಾ ರಾಷ್ಟ್ರಗಳ ಜೊತೆಗಿನ ವಹಿವಾಟು ಹಿಂದಿನಂತೆ ನಡೆಯಲಿದೆ ಎಂದು ತಾಲಿಬಾನ್ ಹೇಳಿದೆ. ಆದರೆ ತಾಲಿಬಾನ್ ಮಾತನ್ನು ಯಾರು ನಂಬುವ ಪರಿಸ್ಥಿತಿಯಲ್ಲಿಲ್ಲ.