ಅಮೆರಿಕ ಎಚ್ಚರಿಕೆ ಬೆನ್ನಲ್ಲೇ ಕಾಬೂಲ್‌ನಲ್ಲಿ ಬಾಂಬ್ ಸ್ಫೋಟದ ಶಬ್ದ; ಮತ್ತೆ ಉಗ್ರರ ದಾಳಿ ಶಂಕೆ!

By Suvarna NewsFirst Published Aug 29, 2021, 7:02 PM IST
Highlights
  • ಮುಂದಿನ 36 ಗಂಟೆಯಲ್ಲಿ ಕಾಬೂಲ್‌ ಮೇಲೆ ಉಗ್ರರ ದಾಳಿ ಎಚ್ಚರಿಕೆ ನೀಡಿದ್ದ ಅಮೆರಿಕ
  • ಎಚ್ಚರಿಕೆ ಬೆನ್ನಲ್ಲೇ ಇಂದು ಸಂಜೆ ಕಾಬೂಲ್‌ನಲ್ಲಿ ಭಾರಿ ಬಾಂಬ್ ಸ್ಫೋಟದ ಶಬ್ದ
  • ಸ್ಥಳೀಯ ಮಾಧ್ಯಮಗಳು ಸ್ಫೋಟದ ಕುರಿತು ವರದಿ ಪ್ರಸಾರ, ಉಗ್ರರ ದಾಳಿ ಶಂಕೆ

ಕಾಬೂಲ್(ಆ.29): ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಜೊತೆ ಐಸಿಸ್ ಕೆ ಉಗ್ರರ ದಾಳಿಗೆ ಅಮಾಯಕ ಜನ ಬಲಿಯಾಗುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಗೇಟ್ ಬಳಿ ಐಸಿಸ್ ಕೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ 169 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಬೆನ್ನಲ್ಲೇ ಅಮೆರಿಕ ಮತ್ತೊಂದು ದಾಳಿ ಕುರಿತು ಎಚ್ಚರಿಕೆ ನೀಡಿತ್ತು. ಇಂದು(ಆ.29) ಮತ್ತೊಂದು ಬಾಂಬ್ ಸ್ಫೋಟದ ಶಬ್ದ ಕೇಳಿಸಿದೆ.

ಕಾಬೂಲ್ ಏರ್‌ಪೋರ್ಟ್‌ ಮೇಲೆ ಮತ್ತೆ ದಾಳಿ?: ಮುಂದಿನ 36 ಗಂಟೆ ಡೇಂಜರಸ್!

ಕಾಬೂಲ್ ನಗರದಲ್ಲಿ ಭಾರಿ ಬಾಂಬ್ ಸ್ಫೋಟದ ಶಬ್ದ ಕೇಳಿಸಿದೆ. ಆಫ್ಘಾನಿಸ್ತಾನದಲ್ಲಿರುವ ಅಮೆರಿಕ ಸೇನೆ ವಾಪಸಾಗುತ್ತಿದೆ. ಇತ್ತ ಆಫ್ಘಾನಿಸ್ತಾನದ ಸೇನೆ ಕಾರ್ಯನಿರ್ವಹಿಸುತ್ತಿಲ್ಲ. ತಾಲಿಬಾನ್ ಉಗ್ರರು ಸ್ಥಳಕ್ಕೆ ತೆರಳಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳು ಬಾಂಬ್ ಸ್ಫೋಟದ ಕುರಿತು ವರದಿ ಪ್ರಸಾರ ಮಾಡಿದೆ.

ಬಾಂಬ್ ಸ್ಫೋಟದ ಭಾರಿ ಶಬ್ದ ಕಾಬೂಲ್ ನಗರದಲ್ಲಿ ಕೇಳಿಸಿದೆ. ಕೆಲ ಕಟ್ಟಗಳು ಕಂಪಿಸಿದೆ. ಈ ಸ್ಫೋಟ ಎಲ್ಲಿ ಸಂಭವಿಸಿದೆ. ಪರಿಣಾಮ ಏನು? ಇದು ಉಗ್ರರು ನಡೆಸಿದ ಬಾಂಬ್ ಸ್ಫೋಟವೇ ಅನ್ನೋ ಕುರಿತು ಯಾವುದೇ ಅಧೀಕೃತ ಮಾಹಿತಿಗಳು ಲಭ್ಯವಾಗಿಲ್ಲ. 

ಎಟಿ​ಎಂನಲ್ಲಿ ಹಣ​ವಿಲ್ಲ, ಸಂಬ​ಳವೂ ಇಲ್ಲ: ಅಫ್ಘನ್ನರ ಗೋಳು!

ಅಮೆರಿಕ ಗುಪ್ತಚರ ಇಲಾಖೆ ಆಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮುಂದಿನ 36 ಗಂಟೆಯಲ್ಲಿ ಮತ್ತೆ ದಾಳಿಯ ಸಾಧ್ಯೆತಯನ್ನು ಬಹಿರಂಗಪಡಿಸಿತ್ತು. ಇಷ್ಟೇ ಅಲ್ಲ ಅಮರಿಕ ನಿವಾಸಿಗಳು ತಕ್ಷಣವೇ ಆಫ್ಘಾನಿಸ್ತಾನ ತೊರೆಯಬೇಕು ಎಂದು ಸೂಚಿಸಿತ್ತು. ಈ ಎಚ್ಚರಿಕೆ ಬೆನ್ನಲ್ಲೇ ಇದೀಗ ಬಾಂಬ್ ದಾಳಿಯಾಗಿರುವ ಸಾಧ್ಯತೆ ಇದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಐಸಿಸ್ ಕೆ ಉಗ್ರರು ನಡೆಸಿದ ಆತ್ಮಾಹುತಿ ದಾಳಿಗೆ 169 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 13 ಅಮೆರಿಕ ಯೋಧರು ಸೇರಿದ್ದಾರೆ. ಇದಕ್ಕೆ ಅಮೆರಿಕ ಐಸಿಸ್ ಕೆ ಉಗ್ರರ ಮೇಲೆ ಡ್ರೋನ್ ದಾಳಿ ನಡೆಸಿ ಪ್ರತೀಕಾರ ನಡೆಸಿತ್ತು.

ಆಗಸ್ಟ್ 15ರಂದು ತಾಲಿಬಾನ್ ಉಗ್ರರು ಕಾಬೂಲ್ ಕೈವಶ ಮಾಡಿಕೊಂಡರು. ಅಂದಿನಿಂದ ಆಫ್ಘಾನಿಸ್ತಾನ ಜನತೆ ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ. ಅಮೆರಿಕ ಮಿಲಿಟರಿ ವಿಮಾನ ಓಡೋಡಿ ಹತ್ತಿದ ಘಟನೆಗಳು ಇನ್ನೂ ಮಾಸಿಲ್ಲ.

ಕಾಬೂಲ್‌ನಲ್ಲೀಗ ವಿಮಾನಗಳದ್ದೇ ಭಾರೀ ಸದ್ದು: ತೆರವು ಕಾರ್ಯಾಚರಣೆಗೆ ಹೈಸ್ಪೀಡ್‌!

ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಇದೀಗ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿದ್ದಾರೆ. ಇವರೆಲ್ಲರು ಅಫ್ಘಾನಿಸ್ತಾನ ತೊರೆಯಲು ಹಾತೊರೆಯುತ್ತಿದ್ದಾರೆ. ಇದೇ ಅಮಾಯಕರ ಮೇಲೆ ಐಸಿಸ್ ಕೆ ಆತ್ಮಾಹುತಿ ದಾಳಿ ನಡೆಸಿತ್ತು.

click me!