
ಕಾಬೂಲ್(ಆ.29): ಆಗಸ್ಟ್ 31ರೊಳಗೆ ತನ್ನ ಸೈನಿಕರ ತೆರವು ಮಾಡುವುದಾಗಿ ಹೇಳಿದ್ದ ಅಮೆರಿಕ, ಈಗ ಈ ನಿಟ್ಟಿನಲ್ಲಿ ಕಾರ್ಯಾರಂಭ ಮಾಡಿದೆ. ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಸೇನೆ ಹಿಂತೆಗೆತ ಆರಂಭವಾಗಿದೆ ಎಂದು ಪೆಂಡಗನ್ ವಕ್ತಾರ ಜಾನ್ ಕಿರ್ಬಿ ಶುಕ್ರವಾರ ರಾತ್ರಿ ಹೇಳಿದ್ದಾರೆ.
ಈ ನಡುವೆ, ಒಂದೊಂದೇ ದೇಶಗಳು ಆಫ್ಘನ್ನಿಂದ ಕಾಲ್ತೆಗೆಯುತ್ತಿದ್ದಂತೆಯೇ ತಾಲಿಬಾನ್ ಹೆಚ್ಚು ಪಡೆಗಳನ್ನು ಕಾಬೂಲ್ ಏರ್ಪೋರ್ಟ್ ಸುತ್ತ ನಿಯೋಜಿಸಿದೆ. ವಿಮಾನ ನಿಲ್ದಾಣದಲ್ಲಿ ಮತ್ತೊಂದು ದಾಳಿ ನಡೆಯುವ ಭೀತಿಯಿಂದಾಗಿ, ಹೆಚ್ಚು ಜನಸಂದಣಿ ಏರ್ಪಡದಂತೆ ತಡೆಯಲು ಹೆಚ್ಚು ಪಡೆಗಳನ್ನು ಕಾವಲಿರಿಸಿದೆ.
ವಿಮಾನ ನಿಲ್ದಾಣಕ್ಕೆ ತೆರಳುವ ರಸ್ತೆಗಳಲ್ಲೂ ತಾಲಿಬಾನಿಗಳಿಂದ ಭಾರೀ ಭದ್ರತೆ ಏರ್ಪಡಿಸಲಾಗಿದ್ದು, ಆ.31ರ ಒಳಗಾಗಿ ಆಫ್ಘನ್ ತೊರೆದು ಇತರ ರಾಷ್ಟ್ರಗಳಿಗೆ ತೆರಳಬೇಕೆಂಬ ಜನರು ಏರ್‌ಪೋರ್ಟ್‌ಗೆ ತೆರಳುವುದೇ ದುಸ್ತರವಾಗಿ ಪರಿಣಮಿಸಿದೆ. ಇದರಿಂದಾಗಿ ಕಳೆದ 2 ವಾರಗಳಿಂದ ಇತರ ದೇಶಗಳಿಗೆ ತೆರಳುವ ವಿಶ್ವಾಸದಲ್ಲಿ ತುಂಬಿ ತುಳುಕುತ್ತಿದ್ದ ಸ್ಥಳಗಳು ಇದೀಗ ಬಿಕೋ ಎನ್ನುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ