
ಕಾಬೂಲ್(ಆ.29): ತಾಲಿಬಾನಿಗಳು ಅಷ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ದೇಶದಲ್ಲಿ ಸೂಕ್ತ ಆಡಳಿತವಿಲ್ಲದೇ ಭಾರೀ ಹಾಹಾಕಾರ ಸೃಷ್ಟಿಯಾಗುತ್ತಿದೆ. ಅತ್ತ ಎಟಿಎಂ, ಬ್ಯಾಂಕ್ಗಳಲ್ಲಿ ಹಣವೂ ಸಿಗದೇ ಇತ್ತ ಸರಿಯಾಗಿ ಸಂಬಳವೂ ಸಿಗದೇ ಸಾವಿರಾರು ಜನರು ಪರದಾಡುತ್ತಿದ್ದಾರೆ.
"
ತಾಲಿಬಾನ್ ಆಳ್ವಿಕೆ ಆರಂಭವಾದ ನಂತರ ಮುಚ್ಚಿದ್ದ ಬ್ಯಾಂಕ್ಗಳು 3 ದಿನದ ಹಿಂದೆ ತೆರೆದಿವೆ. ಹೀಗಾಗಿ ಹಣ ಸಿಗಬಹುದು ಎಂಬ ಆಸೆಯಿಂದ ಬಂದಿದ್ದ ಜನರಿಗೆ ನಿರಾಸೆ ಕಾದಿದೆ. ಜನರು ಹಣಕ್ಕಾಗಿ ಸಾಲುಗಟ್ಟಿನಿಂತರೂ, ಯಂತ್ರಗಳಲ್ಲಿ ದುಡ್ಡು ಖಾಲಿ ಆಗಿ ಹಣ ಸಿಗಲಿಲ್ಲ. ಇದೇ ವೇಳೆ, ಹೆಚ್ಚಿನ ಜನರಿಗೆ ಹಣ ಒದಗಿಸಬೇಕು ಎಂಬ ಉದ್ದೇಶದಿಂದ ಎಟಿಎಂನಲ್ಲಿ ಹಣ ತೆಗೆಯುವುದಕ್ಕೆ ಮಿತಿ ಹೇರಲಾಗಿದೆ. ಆದ್ದರಿಂದ ಜನರು ಬ್ಯಾಂಕುಗಳ ಮುಂದೆ ಜನ ಪ್ರತಿಭಟನೆ ಆರಂಭಿಸಿದ್ದಾರೆ.
ಇದೇ ವೇಳೆ, ಕಳೆದ 3ರಿಂದ 6 ತಿಂಗಳವರೆಗೆ ತಮಗೆ ಸಂಬಳ ದೊರೆತಿಲ್ಲ ಎಂದು ಸರ್ಕಾರಿ ನೌಕರರು ಆರೋಪಿಸಿದ್ದಾರೆ. ಇದು ದೇಶದ ದುಃಸ್ಥಿತಿಯ ದ್ಯೋತಕವಾಗಿದೆ.
ಇತ್ತೀಚೆಗೆ ತಾಲಿಬಾನ್ ಆಡಳಿತ ಶುರು ಮಾಡಿದ ನಂತರ ದೇಶದ ವ್ಯವಸ್ಥೆ ಕುಸಿದುಬಿದ್ದಿದ್ದು, ಆಹಾರ ಪೂರೈಕೆ ಕೂಡ ವ್ಯತ್ಯಾಸವಾಗಿತ್ತು. ಇದಲ್ಲದೇ, ದೇಶದಲ್ಲಿ ಭೀಕರ ಬರಗಾಲ ಸೃಷ್ಟಿಆಗಬಹುದು ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ಮುಂದಿನ ಪರಿಸ್ಥಿತಿ ಇನ್ನಷ್ಟುಭೀಕರವಾಗುವ ಆತಂಕ ಎದುರಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ