ಪ್ಯಾಲೆಸ್ಟೇನ್ ವಹಿಸಿಕೊಂಡ ಸ್ವರಾ, ನೆಟ್ಟಿಗರು ಸುಮ್ಮನೆ ಬಿಡ್ತಾರ?

Published : May 12, 2021, 11:02 PM IST
ಪ್ಯಾಲೆಸ್ಟೇನ್ ವಹಿಸಿಕೊಂಡ ಸ್ವರಾ, ನೆಟ್ಟಿಗರು ಸುಮ್ಮನೆ ಬಿಡ್ತಾರ?

ಸಾರಾಂಶ

* ಇಸ್ರೇಲ್ ಮತ್ತು  ಪ್ಯಾಲೆಸ್ಟೇನ್ ಗಡಿಯಲ್ಲಿ ಸಂಘರ್ಷ * ಪ್ಯಾಲೆಸ್ಟೇನ್  ಪರವಾಗಿ ಮಾತನಾಡಿದ ಸ್ವರಾ ಭಾಸ್ಕರ್ * ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು * ನಿಮಗೆ ಯಾವ ಕಾರಣಕ್ಕೆ ಹೋರಾಟ ನಡೆಯುತ್ತಿದೆ ಎನ್ನುವುದು ಗೊತ್ತಿಲ್ಲವೆ?

ನವದೆಹಲಿ(ಮೇ 12)  ಇಸ್ರೇಲ್ ಮತ್ತು  ಪ್ಯಾಲೆಸ್ಟೇನ್ ಗಡಿಯಲ್ಲಿ ಸಂಘರ್ಷ ನಡೆಯುತ್ತಲೇ ಇದೆ.  ಪ್ಯಾಲೆಸ್ಟೇನ್ ಮನೆಗಳನ್ನು ನೆಲಸಮ ಮಾಡಲಾಗಿದೆ ಮತ್ತು ಅಲ್-ಅಕ್ಸಾ ಮಸೀದಿಯ ಮೇಲೆ ದಾಳಿಯಾಗಿದೆ ಎಂಬ ವರದಿಗಳ ನಂತರ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಇಸ್ರೇಲ್ ನ್ನು ಉಗ್ರಗಾಮಿ ದೇಶ ಎಂದು ಕರೆದಿದ್ದರು.  ಇದೇ ಕಾರಣಕ್ಕೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.

ಪ್ಯಾಲೆಸ್ಟೇನ್  ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಇಸ್ರೇಲ್ ‘ವರ್ಣಭೇದ ನೀತಿ’ ಅನುಸರಿಸುತ್ತಿದೆ ಎಂದು ನಟಿ ಆರೋಪಿಸಿದ್ದರು. ಇದ್ಕಕೆ ಪ್ರತಿಯಾಗಿ ನಟಿಯನ್ನು ಟ್ರೋಲಿಗರು ತರಾಟೆಗೆ ತೆಗೆದುಕೊಂಡು ನಿಮಗೆ ಯಾರು ಉಗ್ರರು ಎನ್ನುವುದು ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಇಸ್ರೇಲ್ ಮೇಲೆ ರಾಕೆಟ್ ದಾಳಿ; ಕೇರಳ ಮಹಿಳೆ ಸಾವು

ಈ ಹೋರಾಟಕ್ಕೆ ಇಸ್ಲಾಂ ಕಾರಣವಲ್ಲ.  ಸಾಮ್ರಾಜ್ಯಶಾಹಿ ನೀತಿ ವಿರುದ್ಧದ ಹೋರಾಟ,  ವಸಾಹತು ವಿರೋಧಿ ಮತ್ತು ವರ್ಣಭೇದ ನೀತಿ ವಿರೋಧಿ ಹೋರಾಟ ಎಂದೆಲ್ಲ ಬಣ್ಣಿಸಿದ್ದು ನಾಗರಿಕರ ಕೆಂಗಣ್ಣಿಗೆ  ಗುರಿಯಾಯಿತು.

 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಹೊತ್ತಿ ಉರಿದ ಹಾಲಿವುಡ್.. ಟೇಲರ್ ಸ್ವಿಫ್ಟ್-ಬ್ಲೇಕ್ ಲೈವ್ಲಿಗೆ 'ಮೀನ್ ಗರ್ಲ್ಸ್' ಪಟ್ಟ;ಇದೆಂಥಾ ದುರ್ಗತಿ ನೋಡಿ..!
ಭಾರತೀಯ ಮೂಲದ ಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುದೀರ್ಘ ಬಾಹ್ಯಾಕಾಶ ಸೇವೆಯಿಂದ ನಿವೃತ್ತಿ