
ನ್ಯೂ ಜರ್ಸಿ(ಮೇ.12): ಪಾಸ್‌ಪೋರ್ಟ್ ವಶಕ್ಕೆ ಪಡೆದು ಕಾರ್ಮಿಕರನ್ನು ಒತ್ತಾಯಪೂರ್ವಕ ದುಡಿಸಿಕೊಂಡ, ಕೇವಲ ಶೇಕಡಾ 10 ರಷ್ಟು ವೇತನ ನೀಡಿದ ಸೇರಿದಂತೆ ಕಾರ್ಮಿಕ ಕಾನೂನು ಉಲ್ಲಂಘಿಸಿದ ಆರೋಪದ ಮೇಲೆ ಅಮೆರಿಕದ ನ್ಯೂ ಜರ್ಸಿಯಲ್ಲಿರುವ ಸ್ವಾಮಿನಾರಾಯಣ ಮಂದಿರದ ಮೇಲೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್(FBI) ದಾಳಿ ಮಾಡಿದೆ.
ಗೋಕರ್ಣ ಮಹಾಬಲೇಶ್ವರ ವಿವಾದ: ನ್ಯಾ. ಬಿ. ಎನ್. ಶ್ರೀಕೃಷ್ಣ ನೇತೃತ್ವದ ಸಮಿತಿ ರಚನೆ!.
ಭಾರತದಿಂದ ಅಮೆರಿಕದ ಸ್ವಾಮಿನಾರಾಯಣ ಮಂದಿರಕ್ಕೆ ಕರೆಸಿಕೊಂಡಿರುವ 90 ಕಾರ್ಮಿಕರನ್ನು ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳಲಾಗುತ್ತಿದೆ. ಅಮೆರಿಕ ಕಾರ್ಮಿಕರ ಕಾನೂನು ನಿಯಮ ಉಲ್ಲಂಘಿಸಿದ ಕಾರಣಕ್ಕೆ FBI ದಾಳಿ ಮಾಡಿದೆ. ಕಠಿಣ ಪರಿಸ್ಥಿತಿಗಳಲ್ಲಿ ಬದುಕಲು ಒತ್ತಾಯಿಸಲಾಗಿದೆ. ಅವರ ಪಾಸ್‌ಪೋರ್ಟ್‌ಗಳನ್ನು ವಶಪಡಿಸಲಾಗಿದೆ.ಜೊತೆಗೆ ಕಾರ್ಮಿಕರನ್ನು ಬಂಧನದಲ್ಲಿ ಇಡಲಾಗಿತ್ತು ಎಂದು ಕೆಲ ಕಾರ್ಮಿಕರು ದೂರು ಸಲ್ಲಿಸಿದ್ದರು ಎಂದು ವರದಿಯಾಗಿದೆ.
ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮತ್ತು ಯುಎಸ್ ಕಾರ್ಮಿಕ ಇಲಾಖೆ ಜಂಟಿಯಾಗಿ ಮಂದಿರದ ಮೇಲೆ ದಾಳಿ ನಡೆಸಿದೆ. ಈ ವೇಳೆ 90 ಕಾರ್ಮಿಕರನ್ನು ಸ್ಥಳದಿಂದ ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.
ಕಾರ್ಮಿಕರ ವಿಚಾರದಲ್ಲಿ 2018ರಿಂದಲೂ ಸ್ವಾಮಿನಾರಾಯಣ ಮಂದಿರದ ಆಡಳಿತ ಮಂಡಳಿ ವಿರುದ್ಧ ದೂರುಗಳು ಕೇಳಿಬರುತ್ತಲೆ ಇದೆ. ಎಲ್ಲಾ ದೂರುಗಳನ್ನು ಆಧರಿಸಿ ದಾಳಿ ಮಾಡಲಾಗಿದೆ. ಕಾಮಾಗಾರಿ, ಕಾರ್ಮಿಕರು, ಕಾರ್ಮಿಕರಿಗೆ ನೀಡಿದ ವೇತನ ಸೇರಿದಂತೆ ಹಲವು ದಾಖಲೆ ಪತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ