ಸ್ಪುಟ್ನಿಕ್ ಲಸಿಕೆ ಬಳಸಿದ ರಾಜ್ಯದಲ್ಲಿ ಹೊಸ ಕೊರೋನಾ ಕೇಸ್ ಇಲ್ಲ..!

By Suvarna NewsFirst Published May 12, 2021, 4:07 PM IST
Highlights
  • ಸ್ಪುಟ್ನಿಕ್ ಲಸಿಕೆ ಬಳಸಿದ ಯುರೋಪ್ ರಾಜ್ಯದಲ್ಲಿ ಝೀರೋ ಕೊರೋನಾ ಕೇಸ್
  • ಏ.27ರಿಂದ ಶೂನ್ಯ ಕೊರೋನಾ ಸಾವು

ಕೊರೋನಾ ಲಸಿಕೆಗಳ ಪರಿಣಾಮದ ತೀವ್ರತೆ ಬಗ್ಗೆ ಈಗಾಗಲೇ ಬಹಳಷ್ಟು ಚರ್ಚೆಯಾಗುತ್ತಿದೆ. ಕೊವ್ಯಾಕ್ಸೀನ್, ಕೊವಿಶೀಲ್ಡ್, ಸ್ಪುಟ್ನಿಕ್, ಅಸ್ಟ್ರಾಜೆನೆಕಾಗಳನ್ನು ಈಗಾಗಲೇ ಬಹಳಷ್ಟು ಜನ ಪಡೆದಾಗಿದೆ.

ಆದರೆ ಇವುಗಳ ಪರಿಣಾಮ ಬಹಳಷ್ಟು ಭಿನ್ನವಾಗಿದೆ. ಪ್ರತಿ ಲಸಿಕೆಯ ಸಾಧ್ಯತೆ, ರೋಗ ಎದುರಿಸುವ ಶಕ್ತಿಯಲ್ಲಿ ವ್ಯತ್ಯಾಸವಿರುತ್ತದೆ. ಇದೀಗ ಸ್ಪುಟ್ನಿಕ್ ಬಹಳ ಪರಿಣಾಮಕಾರಿ ಎಂಬ ಸುದ್ದಿ ಕೇಳಿ ಬಂದಿದೆ.

ಸ್ವತಃ ಸ್ಪುಟ್ನಿಕ್ ಅಧಿಕೃತ ಟ್ವೀಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಸ್ಪುಟ್ನಿಕ್ ಯುರೋಪ್‌ನ ಸ್ಯಾನ್ ಮ್ಯಾರಿನೋವನ್ನು ಕೊರೊನಾ ಮುಕ್ತ ರಾಜ್ಯವಾಗಿಸಿದೆ ಎಂದಿದೆ ಕಂಪನಿ.

ರಷ್ಯಾದಿಂದ ಭಾರತ ತಲುಪಿತು 1.5 ಲಕ್ಷ ಡೋಸ್ ಸ್ಪಟ್ನಿಕ್ ಲಸಿಕೆ!

ಯುರೋಪ್ ನ ಸ್ಯಾನ್ ಮ್ಯಾರಿನೋ ಕೋವಿಡ್ ಮುಕ್ತ ರಾಜ್ಯ. ಮೇ 4 ರಿಂದ ಈ ತನಕ ಶೂನ್ಯ ಕೇಸ್ ದಾಖಲಾಗಿದೆ. ಎಪ್ರಿಲ್ 27 ರಿಂದ ಒಂದೇ ಒಂದು ಕೊರೋನಾ ಸಾವು ಸಂಭವಿಸಿಲ್ಲ ಎಂದು ಕಂಪನಿ ಟ್ವೀಟ್ ಮಾಡಿದೆ.

O Sputnik V ajudou San Marino a se tornar o primeiro estado da Europa a derrotar COVID-19:
-0 infeções desde 05/04
-0 casos de morte desde 04/27
-250x redução de casos em 2 meses após do uso da Sputnik V
-44x menos casos de agora do que a média de 7 dias na UE per capita pic.twitter.com/rOck9dyspQ

— Sputnik V (@sputnikvaccine)

ಇದಕ್ಕೆಲ್ಲ ಕಾರಣ ಸ್ಪುಟ್ನಿಕ್ ವಿ ಲಸಿಕೆಯ ಮಹಿಮೆ. ಎರಡೂವರೆ ತಿಂಗಳಿಂದ ಲಸಿಕೆ ನೀಡಲಾಗುತ್ತಿದೆ. ಸದ್ಯ ಒಂದೇ ಒಂದು ಕೇಸ್ ಸಹ ದಾಖಲಾಗಿಲ್ಲ ಅಂತ ಸ್ಪುಟ್ನಿಕ್ ವಿ ಸಂಸ್ಥೆ ಹೇಳಿಕೊಂಡಿದೆ'.

click me!