ತನ್ನ ಬೆರಳು ಕಚ್ಚಿದ ಇಲಿಯನ್ನು ಹಿಡಿದ ಯುವತಿಯೊಬ್ಬಳು ಸೇಡು ತೀರಿಸಿಕೊಳ್ಳುವುದಕ್ಕಾಗಿ ತಿರುಗಿಸಿ ಅದಕ್ಕೆ ಕಚ್ಚಿದ ಘಟನೆ ನಡೆದಿದೆ. ಈ ವಿಚಾರ ಈಗ ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.
ನಾಯಿ ಕಚ್ಚಿದ್ರೆ ನಾವು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡಿತೇವೆಯೇ ಹೊರತು ನಾಯಿಗೆ ವಾಪಸ್ ಕಚ್ಚುವುದಕ್ಕೆ ಹೋಗುವುದಿಲ್ಲ. ಆ ರೀತಿ ಮಾಡಿದರೆ ಅದು ನಮಗೇ ಆಪತ್ತು. ಆದರೆ ಚೀನಾದಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ, ತನ್ನ ಬೆರಳು ಕಚ್ಚಿದ ಇಲಿಯನ್ನು ಹಿಡಿದ ಯುವತಿಯೊಬ್ಬಳು ಸೇಡು ತೀರಿಸಿಕೊಳ್ಳುವುದಕ್ಕಾಗಿ ತಿರುಗಿಸಿ ಅದಕ್ಕೆ ಕಚ್ಚಿದ ಘಟನೆ ನಡೆದಿದೆ. ಈ ವಿಚಾರ ಈಗ ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಕಳೆದ ತಿಂಗಳ 21ರಂದು ಈ ಘಟನೆ ನಡೆದಿದೆ. 18 ವರ್ಷದ ತರುಣಿಯ ಬೆರಳನ್ನು ಇಲಿಯೊಂದು ಕಚ್ಚಿ ಗಾಯಗೊಳಿಸಿದೆ. ಆಕೆ ಅಧ್ಯಯನ ನಡೆಸುತ್ತಿದ್ದ ವಿಶ್ವವಿದ್ಯಾಲಯದ ಆವರಣದಲ್ಲಿರು ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಇದರಿಂದ ಆಕ್ರೋಶಗೊಂಡ ಯುವತಿ ಇಲಿಯನ್ನು ದೂರ ಓಡಿಸುವ ಬದಲು ಅದನ್ನು ಜೀವಂತ ಹಿಡಿಯಲು ಯತ್ನಿಸಿದ್ದಳು. ಅಲ್ಲದೇ ಇಲಿಯನ್ನು ಹಿಡಿಯಲು ಯಶಸ್ವಿಯೂ ಆದ ಆಕೆ ಬಳಿಕ ಅದರ ತಲೆಯನ್ನು ಕಚ್ಚಿದ್ದಾಳೆ. ಇದರಿಂದ ಇಲಿಯ ತಲೆಯಲ್ಲಿ ಯುವತಿಯ ಹಲ್ಲಿನ ಗುರುತುಗಳಾಗಿದ್ದು, ಈಕೆ ಈ ಕೃತ್ಯವೆಸಗಿದ ಸ್ವಲ್ಪ ಹೊತ್ತಿನಲ್ಲೇ ಇಲಿ ಸತ್ತು ಹೋಗಿದೆ. ಆಕೆ ಇಲಿಯ ತಲೆಯನ್ನು ಬಿಗಿಯಾಗಿ ಕಚ್ಚಿ ಹಿಡಿದಿದ್ದರಿಂದ ಉಸಿರುಕಟ್ಟಿಯೇ ಅದು ಸಾವನ್ನಪ್ಪಿದೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಹೀಗೆ ಇಲಿಯ ಮೇಲೆ ಸೇಡು ತೀರಿಸಿಕೊಳ್ಳಲು ಹೋದ ಆಕೆಯ ತುಟಿಗಳಿಗೂ ಗಾಯಗಳಾಗಿದೆಯಂತೆ. ಹುಲಿಯನ್ನು ಕಚ್ಚಿ ಹಿಡಿದ ಪರಿಣಾಮ ಆಕೆಯ ಬಾಯಿಗೂ ಗಾಯವಾಗಿದ್ದು, ನಂತರ ಇದಕ್ಕಾಗಿ ಆಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ತೆಗೆದುಕೊಂಡಿದ್ದು, ಆರೋಗ್ಯವಾಗಿದ್ದಾಳೆ ಎಂದು ತಿಳಿದು ಬಂದಿದೆ. ಆದರೆ ಘಟನೆಯ ಬಳಿಕ ಯುವತಿಗೆ ತಾನು ಮಾಡಿದ ಈ ವಿಚಿತ್ರ ಕೃತ್ಯದ ಬಗ್ಗೆ ಹೇಸಿಗೆ ಎನಿಸಿದ್ದು, ಆಕೆಗೆ ಮುಖ ತೋರಿಸಲು ನಾಚಿಕೆಯಾಗುತ್ತಿದೆ ಎಂದು ಆಕೆಯ ರೂಮ್‌ಮೇಟ್ ಹೇಳಿದ್ದಾಗಿ ಚೀನಾ ಮಾಧ್ಯಮ ವರದಿ ಮಾಡಿದೆ.
ಆಸ್ಪತ್ರೆ ಶವಾಗಾರದಲ್ಲಿ ಇಲಿಗಳ ದಾಳಿಯಿಂದ ವಿರೂಪಗೊಂಡ ಸರ್ಕಾರಿ ಅಧಿಕಾರಿ ಮೃತದೇಹ: ಕುಟುಂಬಸ್ಥರ ಆಕ್ರೋಶ
ಇನ್ನು ಈಕೆಗೆ ಚಿಕಿತ್ಸೆ ನೀಡಿದ ವೈದ್ಯರು ಈ ರೀತಿಯ ಪ್ರಕರಣವನ್ನು ತನ್ನ ಜೀವಮಾನದಲ್ಲಿ ಎಂದೂ ಕಂಡಿದ್ದೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಈಕೆಯ ಕೇಸ್ ಫೈಲ್ ಅನ್ನು ಹೇಗೆ ಬರೆಯಬೇಕು ಎಂದು ವೈದ್ಯರಿಗೆ ಯೋಚಿಸಲು ಬಹಳ ಸಮಯ ಹಿಡಿಯಿತಂತೆ. ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಯುವತಿಯ ಈ ಕೃತ್ಯದ ಬಗ್ಗೆ ಹಾಸ್ಯವನ್ನು ಸೃಷ್ಟಿಸಿದ್ದು, ಕೆಲವರು ಇನ್ನು ಮುಂದೆ ತಮ್ಮ ಮನೆಯಲ್ಲಿ ಇಲಿ ಸಮಸ್ಯೆ ಉಂಟಾದರೆ ಆಕೆಯನ್ನೇ ಕರೆಬೇಕೆಂದುಕೊಂಡಿದ್ದೇವೆ ಎಂದು ಕಾಮೆಂಟ್ ಮಾಡುತ್ತಿದ್ದರಂತೆ. ಮತ್ತೆ ಕೆಲವರು ಆಕೆಯನ್ನು 2023ರ ಅತೀದೊಡ್ಡ ಡೇರ್ ಡೆವಿಲ್(ಸಾಹಸಿ) ಎಂದು ಘೋಷಿಸುವುದಾಗಿ ಹೇಳಿ ಕಾಮೆಂಟ್ ಮಾಡಿದ್ದಾರೆ . ಹಾಗೆಯೇ ಇನ್ನೊಬ್ಬರು ತಮ್ಮ ಅಕ್ಕಿಯ ಕಣಜ (ಗೋದಾಮು)ವಿಗೆ ಒಮ್ಮೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.
ಆದರೆ ಆಕೆ ವಾಸವಿರುವ ಹಾಸ್ಟೆಲ್ ಆಡಳಿತವೂ ಈ ರೀತಿ ಕೃತ್ಯಗಳು ರೋಗಕ್ಕೆ ದಾರಿ ಮಾಡುವುದರಿಂದ ಈ ರೀತಿ ಮಾಡದಂತೆ ತನ್ನ ವಿದ್ಯಾರ್ಥಿಗಳಿಗೆ ಸೂಚಿಸಿದೆ.
ರೋಗ ತಡೆಗಟ್ಟುವಿಕೆ ಹಾಗೂ ನಿಯಂತ್ರಣ ಕೇಂದ್ರದ ಮಾಹಿತಿ ಪ್ರಕಾರ ಇಲಿಗಳು ರೋಗಗಳನ್ನು ಹರಡುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇಲಿಗಳ ಕಡಿತ ಅಥವಾ ಅವುಗಳ ಮಲಮೂತ್ರಗಳ ಸಂಪರ್ಕದಿಂದಲೂ ಮನುಷ್ಯರಿಗೆ ರೋಗ ಅದಷ್ಟು ಬೇಗ ಹರಡುತ್ತದೆ. ಹೀಗಾಗಿ ತಿನ್ನುವ ಆಹಾರದ ಮೇಲೆ ಹಣ್ಣು ತರಕಾರಿಗಳ ಮೇಲೆ ಇಲಿಗಳು ಓಡಾಡದಂತೆ ಜಾಗರೂಕವಾಗಿ ವರ್ತಿಸಬೇಕಿದೆ.
ಬಾಯಲ್ಲಿ ಚೀಟಿ ಹಿಡಿದು ಶಿವಣ್ಣನ ಕೈಗೆ ಇತ್ತ ಇಲಿ: ಮೆಸೇಜ್ ನೋಡಿ ಕುಣಿದಾಡಿದ ಸೆಂಚುರಿ ಸ್ಟಾರ್ ಫ್ಯಾನ್ಸ್!