
ಸೀಟ್ ಬಳಿಯೇ ಮೂತ್ರ ಮಾಡಿದ ಮಹಿಳೆ
ವಾಷಿಂಗ್ಟನ್: ಮಹಿಳೆಯನ್ನು ಎರಡು ತಾಸು ಶೌಚಾಲಯ ಬಳಸಲು ನಿರಾಕರಿಸಿದ ಕಾರಣ ಆಕೆ ವಿಮಾನದ ಸೀಟ್ ಬಳಿಯೇ ಮೂತ್ರ ಮಾಡಿದ ಘಟನೆ ಅಮೆರಿಕದ ಸ್ಪಿರಿಟ್ ಏರ್‌ಲೈನ್ಸ್‌ನಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ಗಗನಸಖಿ ನಡೆಗೆ ಎಲ್ಲೆಡೆ ಆಕ್ರೋಶ ಹೊರಹೊಮ್ಮಿದೆ. ಮಹಿಳೆ ತಮಗೆ ಶೌಚಾಲಯ ಬಳಸಬೇಕೆಂದು ಎದ್ದು ನಡೆದಾಗ ವಿಮಾನದ ಗಗನಸಖಿಯರು ಸತತ 2 ತಾಸು ಬಳಸಲು ಬಿಡಲಿಲ್ಲ. ಇದರಿಂದ ತೀವ್ರವಾಗಿ ಮಹಿಳೆ ಸೀಟ್ ಸಮೀಪವೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಘಟನೆಯನ್ನು ಸಿಬ್ಬಂದಿಯೊಬ್ಬರು ವಿಡಿಯೋ ಮಾಡಿದ್ದು, ಅಸಂಬದ್ಧ ಮಾತುಗಳನ್ನು ಆಡಿದ್ದಾರೆ. ಆ ಮಾತುಗಳು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಟ್ವೀಟರ್‌ಗೆ ಸೆಡ್ಡು ಹೊಡೆಯಲು ಬಿಡುಗಡೆ ಆಗಿದ್ದ ಥ್ರೆಡ್ ಫೇಲ್
ನವದೆಹಲಿ: ಚುಟುಕು ಸಂದೇಶ ತಾಣ ಟ್ವೀಟರ್‌ಗೆ ಸಡ್ಡು ಹೊಡೆಯಲು ಮೆಟಾ ಮುಖ್ಯಸ್ಥ ಮಾರ್ಕ್ ಝಕರ್‌ಬರ್ಗ್ ಹೊರ ತಂದ ‘ಥ್ರೆಡ್’ ಆ್ಯಪ್ ಬಳಕೆ ಮಾಡುವವರ ಸಮಯದಲ್ಲಿ ಭಾರಿ ಇಳಿಕೆಯಾಗಿದೆ. ಬಿಡುಗಡೆ ದಿನ 10 ಕೋಟಿ ಗ್ರಾಹಕರನ್ನು ಕಂಡ ಥ್ರೆಡ್, ದಿನಕಳೆದಂತೆ ಬಳಕೆದಾರರಲ್ಲಿ ಇಳಿಕೆ ಕಂಡಿದೆ. ಇದರಲ್ಲಿ ಶೇ.50ರಷ್ಟು ಜನ ಮೊದಲಿಗೆ 20 ನಿಮಿಷ ಥ್ರೆಡ್ ಬಳಸುತ್ತಿದ್ದವರು, ಈಗ ಕೇವಲ 10 ನಿಮಿಷಕ್ಕೆ ಕಡಿತಗೊಳಿಸಿದ್ದಾರೆ. ಶೇ.20ರಷ್ಟುಗ್ರಾಹಕರು ಖಾತೆ ತೆರೆದು ಹೋದ ಬಳಿಕ ಮತ್ತೆ ಬಳಕೆ ಮಾಡಿಲ್ಲ ಎಂದು ವರದಿಯೊಂದು ಹೇಳಿದೆ. ಇದರೊಂದಿಗೆ ಟ್ವೀಟರ್‌ಗೆ ಬದಲಿಯಾಗಿ ಬಂದ ಮಾಸ್ಟಡೋನ್, ಬ್ಲೂಸ್ಕೈ ಆ್ಯಪ್‌ಗಳು ಕಳೆಗುಂದಿದೆ.
ಅರ್ಜೆಂಟ್ ಅಂದ್ಕೊಂಡು ವಂದೇ ಭಾರತ್ ಏರಿದ ವ್ಯಕ್ತಿಗೆ ಆಗಿದ್ದು 6 ಸಾವಿರ ರೂಪಾಯಿ ನಷ್ಟ!
ಅಲ್ಪಸಂಖ್ಯಾತರಿಗೆ 1 ಲಕ್ಷ ಆರ್ಥಿಕ ನೆರವಿತ್ತ ಕೆಸಿಆರ್
ಹೈದರಾಬಾದ್: ಚುನಾವಣೆ ಹೊಸ್ತಿಲಲ್ಲಿರುವ ತೆಲಂಗಾಣದಲ್ಲಿ ಅಲ್ಪಸಂಖ್ಯಾತರಿಗೆ ಶೇ.100ರಷ್ಟುಸಹಾಯಧನದೊಂದಿಗೆ 1 ಲಕ್ಷ ರು. ಆರ್ಥಿಕ ನೆರವು ನೀಡುವುದಾಗಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಘೋಷಿಸಿದ್ದಾರೆ. ಇದು ಅಲ್ಪಸಂಖ್ಯಾತರ ಆರ್ಥಿಕ ಸ್ವಾವಲಂಬನೆಯ ದೃಷ್ಟಿಯಲ್ಲಿ ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ಸರ್ಕಾರರ ಪ್ರಕಟಣೆ ತಿಳಿಸಿದೆ. ‘ಜಾತಿ, ಧರ್ಮವನ್ನು ಲೆಕ್ಕಿಸದೇ ಎಲ್ಲಾ ವರ್ಗಗಳಲ್ಲಿನ ಬಡತನವನ್ನು ತೊಡೆದು ಹಾಕಲು ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಕೆಸಿಆರ್ ಹೇಳಿದ್ದಾರೆ. ಈ ಆದೇಶದ ಪ್ರಕಾರ ಒಂದು ಕುಟುಂಬದಲ್ಲಿ ಒಬ್ಬರಿಗೆ ಒಮ್ಮೆ ಮಾತ್ರ ಈ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಇದಕ್ಕಾಗಿ ಅರ್ಜಿದಾರರಿಗೆ 21 ವರ್ಷದಿಂದ 55 ವರ್ಷದ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ 1.5 ಲಕ್ಷ ರು. ಹಾಗೂ ನಗರ ಪ್ರದೇಶದಲ್ಲಿ 2 ಲಕ್ಷ ರು. ಮೀರಬಾರದು ಎಂದು ತಿಳಿಸಲಾಗಿದೆ.
ಬಳಕೆದಾರರ ಚಟುವಟಿಕೆಗೆ ಮಿತಿ ಹೇರಿದ ಥ್ರೆಡ್ಸ್; ಮತ್ತೊಮ್ಮೆ ವಾಗ್ದಾಳಿ ನಡೆಸಿದ ಎಲಾನ್ ಮಸ್ಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ