ಬ್ಯಾಂಕಾಕ್‌ನಲ್ಲಿ ಭೂಕಂಪ ಉಂಟಾದ ಸಮಯದಲ್ಲಿ ಈಜುಕೊಳದಲ್ಲಿ ಮೈಮರೆತಿದ್ದ ಪ್ರೇಮಿಗಳು ಜಸ್ಟ್ ಎಸ್ಕೇಪ್ ಆಗಿರುವ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಈ ಬಾರಿ ಸೂರ್ಯಗ್ರಹಣದ ಸಮಯದಲ್ಲಿಯೇ ಬಂದಿರುವ ಅಮವಾಸ್ಯೆಯ ಪ್ರಭಾವ ಪ್ರಪಂಚದ ವಿವಿಧ ದೇಶಗಳಲ್ಲಿ ಭಾರಿ ಅನಾಹುತ ಸೃಷ್ಟಿಸುತ್ತದೆ ಎಂದು ಇದಾಗಲೇ ಭವಿಷ್ಯ ನುಡಿಯಲಾಗಿತ್ತು. ಫಾಲ್ಗುಣ ಮಾಸದ ಈ ಅಮವಾಸ್ಯೆಯನ್ನು ಶನಿಶ್ಚರಿ ಅಮಾವಾಸ್ಯೆ ಅಥವಾ ಶನಿ ಅಮಾವಾಸ್ಯೆ ಎಂದೂ ಕರೆಯಲಾಗುತ್ತದೆ. ಈ ಅಮವಾಸ್ಯೆಯ ಮೇಲೆ ಶನಿ ದೇವನ ಪ್ರಭಾವವು ಹೆಚ್ಚಾಗಿರುತ್ತದೆ. ಆದ್ದರಿಂದ ಮೂರು ದಿನಗಳ ವರೆಗೆ ಭಾರಿ ಅನಾಹುತಗಳು ಸಂಭವಿಸುತ್ತವೆ ಎಂದು ಹೇಳಿದ್ದ ನಡುವೆಯೇ, ಮ್ಯಾನ್ಮಾರ್, ಥೈಯ್ಲೆಂಡ್ ದೇಶಗಳಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಅಪ್ಘಾನಿಸ್ತಾನದಲ್ಲಿಯೂ ಇಂದು ಇದು ಪ್ರಭಾವ ಬೀರಿದೆ. ಮ್ಯಾನ್ಮಾರ್, ಥೈಯ್ಲೆಂಡ್ ದೇಶಗಳಲ್ಲಿ ಕೆಲವು ಕಡೆ, ಹೆಣದ ರಾಶಿಯೇ ಕಾಣಿಸುತ್ತಿದೆ. ಬಾಂಗ್ಲಾದೇಶದಲ್ಲಿ ಅದರಲ್ಲೂ ವಿಶೇಷವಾಗಿ ಢಾಕಾ, ಚಟ್ಟೋಗ್ರಾಮ್‌ನಲ್ಲಿ ಮತ್ತು ಚೀನಾದಲ್ಲಿಯೂ ಕಂಪನ ಸಂಭವಿಸಿವೆ. ಹಲವಾರು ಐತಿಹಾಸಿಕ ಕಟ್ಟಡ ಮತ್ತು ಸೇತುವೆಗಳು ಕುಸಿದವು.
ಭೂಕಂಪನದ ಭಯಾನಕ ಎನ್ನುವ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದಾಗಲೇ ಕಟ್ಟಡ ಕುಸಿತದ ವಿಡಿಯೋಗಳನ್ನು ನೀವು ನೋಡಿರಬಹುದು. ಮ್ಯಾನ್ಮಾರ್‌ನಲ್ಲಿ ಒಂದು ಕಡೆ ಕೊನೆಯ ಮಹಡಿಯಲ್ಲಿದ್ದ ಸ್ವಿಮ್ಮಿಂಗ್ ಫೂಲ್ನಿಂದ ನೀರು ಚಿಮ್ಮಿ ಕೆಳಗೆ ಹರಿಯುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಇದರ ನಡುವೆಯೇ, ಭೂಕಂಪದ ಅರಿವೇ ಇಲ್ಲದ ಪ್ರೇಮಿಗಳು ಸ್ವಿಮ್ಮಿಂಗ್ ಫೂಲ್ನಲ್ಲಿ ಮೈಮರೆತು ರೊಮಾನ್ಸ್ ಮಾಡುತ್ತಿದ್ದ ಸಂದರ್ಭದಲ್ಲಿ ಈಜುಕೊಳ ಅಲುಗಾಡಿದ್ದರಿಂದ ಏನೋ ಅನಾಹುತ ಸಂಭವಿಸುತ್ತಿದೆ ಎಂದು ಅವರಿಗೆ ತಿಳಿಯಲು ಸ್ವಲ್ಪ ಹೊತ್ತು ಬೇಕಾದರೂ, ಕೊನೆಗೆ ಜಸ್ಟ್ ಎಸ್ಕೇಪ್ ಆಗಿದ್ದಾರೆ. ಅವರು ಅಲ್ಲಿಂದ ಕಾಲು ಕಿತ್ತ ಸ್ವಲ್ಪ ಹೊತ್ತಿನಲ್ಲಿಯೇ ಈಜುಕೊಳದ ನೀರು, ಅಲ್ಲಿರುವ ದಿಂಬುಗಳೆಲ್ಲಾ ಚಿಮ್ಮಿ ರಸ್ತೆಗೆ ಬಿದ್ದಿವೆ. ಇದರ ವಿಡಿಯೋ ಅನ್ನು ರಿದಮ್ ಕನ್ನಡ ಎಫ್ಬಿಯಲ್ಲಿ ಶೇರ್ ಮಾಡಲಾಗಿದೆ.
ಮ್ಯಾನ್ಮಾರ್ ಭೂಕಂಪ: ತಲೆ ಸುತ್ತಿದಂತಾಯಿತು, ಕನ್ನಡಿಗನ ಅನುಭವ
ಇನ್ನು ಭೂಕಂಪದ ಕುರಿತು ಹೇಳುವುವದಾದರೆ, ಒಂದು ಸಾವಿರಕ್ಕೂ ಅಧಿಕ ಜನರು ಜೀವ ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಇದು ಶವ ಸಿಕ್ಕವರ ಸಂಖ್ಯೆಯಷ್ಟೇ. ಆದರೆ ಇನ್ನೂ ಹಲವರ ಶವ ಪತ್ತೆಯಾಗಬೇಕಿದೆ. ಒಂದು ಭೂಕಂಪದಿಂದ ನಲುಗಿಹೋಗಿರುವ ದೇಶದ ಜನತೆಗೆ ಇಂದು ಮತ್ತೆ ಭೂಕಂಪವಾಗಿದೆ. ಮ್ಯಾನ್ಮಾರ್‌ನಲ್ಲಿ 4.7 ತೀವ್ರತೆಯ ಭೂಕಂಪ ಸಂಭವಿಸಿದೆ. ನಿನ್ನೆ, ಥಾಯ್ಲೆಂಡ್ ನವ್ವಿಯಲ್ಲಿ ಸಂಭವಿಸಿದ್ದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ತೀವ್ರತೆ ಪ್ರಮಾಣ 7.7ರಷ್ಟು ದಾಖಲಾಗಿತ್ತು. ನಿಮಿಷಗಳ ನಂತರ ಅದೇ ಪ್ರದೇಶದಲ್ಲಿ 6.4 ತೀವ್ರತೆಯ ನಂತರದ ಕಂಪನ ಸಂಭವಿಸಿದೆ.
ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಕಟ್ಟಡವು ಕುಸಿದಿದ್ದು ಅದರಡಿಯಲ್ಲಿ ಹಲವು ಕಾರ್ಮಿಕರು ಸಿಲುಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಾಗಲೇ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಇನ್ನು ಭಾರತ ಭೂಕಂಪ ಪೀಡಿತ ಮ್ಯಾನ್ಮಾರ್‌ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ 80 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ತುಕಡಿಯನ್ನು ನಿಯೋಜಿಸಲು ನಿರ್ಧರಿಸಿದೆ. ಇದಾಗಲೇ ‘ಆಪರೇಷನ್ ಬ್ರಹ್ಮ’ ಅಡಿಯಲ್ಲಿ ಭಾರತ ನೇಪಾಳಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಳುಹಿಸಿದೆ. 80 ಎನ್‌ಡಿಆರ್‌ಎಫ್ ಸಿಬ್ಬಂದಿಯ ತಂಡವನ್ನು ಮ್ಯಾನ್ಮಾರ್‌ಗೆ ಕಳುಹಿಸಿದೆ.