ಬಿಕಿನಿ ತೊಟ್ಟರೆ ಫ್ರೀ ಗ್ಯಾಸ್: ಬಂಕ್ ಮುಂದೆ ಗಂಡಸರ ಲೈನ್!

By Web Desk  |  First Published Nov 19, 2019, 9:12 AM IST

ಬಿಕಿನಿ ಧರಿಸಿ ಬಂದವರಿಗೆ ಈ ಬಂಕ್‌ನಲ್ಲಿ ಇಂಧನ ಉಚಿತ!| ಆಫರ್ ಕೇಳಿ ಗ್ಯಾಸ್ ತುಂಬಿಸಿಕೊಳ್ಳಲು ಬಿಕಿನಿ ಧರಿಸಿ ಬಂದ ಗಂಡಸರು| ಪುರುಷರ ಅವತಾರ ಈಗ ವೈರಲ್


ಮಾಸ್ಕೋ[ನ.19]: ಹೊಸದಾಗಿ ಮಾರುಕಟ್ಟೆಗೆ ಬರುವ ಉತ್ಪನ್ನಗಳು ಗ್ರಾಹಕರ ಸೆಳೆಯಲು ಹಲವು ಆಫರ್‌ ನೀಡುತ್ತವೆ. ಆದರೆ, ರಷ್ಯಾದ ಪೆಟ್ರೋಲ್‌ ಬಂಕ್‌ವೊಂದು ಬಿಕಿನಿ ತೊಟ್ಟಗ್ರಾಹಕರಿಗೆ ಉಚಿತ ಪೆಟ್ರೋಲ್‌ ಮತ್ತು ಡೀಸೆಲ್‌ ಪೂರೈಕೆ ಮಾಡುತ್ತಿದೆ.

Tap to resize

Latest Videos

undefined

ಈ ಹಿನ್ನೆಲೆ ಬಿಕಿನಿ ಧರಿಸಿಯೇ ಬಂಕ್‌ಗೆ ಆಗಮಿಸುತ್ತಿರುವ ಗ್ರಾಹಕರು ತಮ್ಮ ವಾಹನಗಳಿಗೆ ಉಚಿತ ಇಂಧನ ಹಾಕಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಬಂಕ್‌ ಮಾಲೀಕನಿಗೆ ಏನೂ ಉಪಯೋಗವಿಲ್ಲವಾದರೂ, ಜನಪ್ರಿಯತೆಗಾಗಿ ಇಂಥ ವಿಚಿತ್ರ ಆಫರ್‌ ನೀಡಲಾಗುತ್ತಿದೆ ಎನ್ನಲಾಗಿದೆ.

ಇದರ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿವೆ.

ನವೆಂಬರ್ 19ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!