ಶತಕೋಟಿಯಷ್ಟು ಸೊಳ್ಳೆಗಳ ಬಿಡಲು ಮುಂದಾದ ಅಮೆರಿಕಾ ಕಂಪನಿ

Published : Apr 10, 2022, 11:06 PM IST
ಶತಕೋಟಿಯಷ್ಟು ಸೊಳ್ಳೆಗಳ ಬಿಡಲು ಮುಂದಾದ ಅಮೆರಿಕಾ ಕಂಪನಿ

ಸಾರಾಂಶ

ಅನುವಂಶೀಯವಾಗಿ ಮಾರ್ಪಡಿಸಿದ  ಶತಕೋಟಿಯಷ್ಟು ಸೊಳ್ಳೆ ಆಕ್ರಮಣಕಾರಿ ಜಾತಿಯ ಸೊಳ್ಳೆಗಳ ಜನಸಂಖ್ಯೆ ಕಡಿಮೆ ಮಾಡಲು ಕ್ರಮ  

ಅಮೆರಿಕಾದ (America) ಕ್ಯಾಲಿಫೋರ್ನಿಯಾ ರಾಜ್ಯದಾದ್ಯಂತ ಅನುವಂಶೀಯವಾಗಿ ಮಾರ್ಪಡಿಸಲ್ಪಟ್ಟ ಸೊಳ್ಳೆಗಳು ಶೀಘ್ರದಲ್ಲೇ ಝೇಂಕರಿಸಲಿವೆ. ಆದರೆ ಇದಕ್ಕೆ ಕಾರಣ ನೈಸರ್ಗಿಕ ವಿದ್ಯಮಾನ ಅಲ್ಲ. ಅಮೆರಿಕಾದಲ್ಲಿ ಕಂಪನಿಯೊಂದು ಅನುವಂಶೀಯವಾಗಿ ಮಾರ್ಪಡಿಸಿದ  ಶತಕೋಟಿಯಷ್ಟು ಸೊಳ್ಳೆಗಳನ್ನು ಬಿಡುಗಡೆ ಮಾಡಲು  ಯೋಜನೆ ರೂಪಿಸಿದೆ. ಯುಕೆ ಮೂಲದ ಕಂಪನಿಯೊಂದು ಬೆಚ್ಚನೆಯ ವಾತಾವರಣದಲ್ಲಿ ಆಕ್ರಮಣಕಾರಿ ಜಾತಿಯ ಸೊಳ್ಳೆಗಳ ಜನಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದ ಸಲುವಾಗಿ ಅನುವಂಶೀಯವಾಗಿ ಬದಲಾದ ರಕ್ತ ಹೀರುವ ಗಂಡು ಸೊಳ್ಳೆಗಳ ಬೃಹತ್ ಹೊರೆಯನ್ನು ಬಿಡುಗಡೆ ಮಾಡಲು ಯೋಜಿಸಿದೆ. 

ಯುಕೆ ಮೂಲದ ಕಂಪನಿಯು ಆಕ್ಸಿಟೆಕ್ ಪ್ರಯೋಗಾಲಯದಲ್ಲಿ ಗಂಡು ಸೊಳ್ಳೆಗಳನ್ನು ಸೃಷ್ಟಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅವುಗಳನ್ನು ವಿಶೇಷ ಪ್ರೋಟೀನ್‌ನೊಂದಿಗೆ ಅಭಿವೃದ್ಧಿಪಡಿಸಲಾಗಿದೆ, ಇವು ಕಚ್ಚದ ಗಂಡು ಸಂತತಿಯನ್ನು ಮಾತ್ರ ಉಂಟು ಮಾಡುತ್ತದೆ. ಅನೇಕ ದೇಶಗಳಲ್ಲಿ ಜಿಕಾ, ಚಿಕೂನ್‌ಗುನ್ಯಾ ಮತ್ತು ಹಳದಿ ಜ್ವರದಂತಹ ರೋಗಗಳನ್ನು ಹರಡುವ ಅಪಾಯಕಾರಿ ಆಕ್ರಮಣಕಾರಿ ಜಾತಿಯ ಈಡಿಸ್ ಈಜಿಪ್ಟಿ ಸೊಳ್ಳೆಗಳನ್ನು ನಾಶ ಪಡಿಸುವುದು ಈ ಯೋಜನೆಯ ಗುರಿಯಾಗಿದೆ.

Summer Tips : ಸೊಳ್ಳೆ ನಿಮ್ಮನೆ ಕಡೆ ತಿರುಗಿಯೂ ನೋಡ್ಬಾರದು ಅಂದ್ರೆ ಹೀಗೆ ಮಾಡಿ

ಅನುವಂಶೀಯವಾಗಿ ಮಾರ್ಪಡಿಸಿದ ಸೊಳ್ಳೆಗಳನ್ನು ಕಾಡಿಗೆ ಬಿಡುವುದು ಈ ಯೋಜನೆಯಾಗಿದೆ, ಇದು ಆಕ್ರಮಣಕಾರಿ ಪ್ರಭೇದಗಳ ಹೆಣ್ಣು ಸಂತತಿ ಸಾಯುವ ಮೊದಲು ಅವುಗಳೊಂದಿಗೆ ಸಂತಾನೋತ್ಪತ್ತಿ ಮಾಡುತ್ತದೆ. ಇದು ಆಕ್ರಮಣಕಾರಿ ಸೊಳ್ಳೆಗಳ ಒಟ್ಟಾರೆ ಜನಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಅಮೆರಿಕಾದ ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (EPA) (US Environmental Protection Agency) ಯಿಂದ ಈ ಯೋಜನೆಗೆ ಅನುಮೋದನೆ ನೀಡಲಾಯಿತು ಆದರೆ ಕಂಪನಿಯು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸುವ ಮೊದಲು ಇನ್ನೂ ಕೆಲವು ಅಡಚಣೆಗಳನ್ನು ನಿವಾರಿಸಬೇಕಾಗಿದೆ. 

ವರದಿಗಳ ಪ್ರಕಾರ, ಈ ಯೋಜನೆಗೆ ನಿವಾಸಿಗಳಿಂದ ಪ್ರತಿರೋಧ ಎದುರಾಗಿದೆ. ಜೊತೆಗೆ ಕೆಲವು ವಿಜ್ಞಾನಿಗಳು ಸಹ ಯೋಜನೆಯ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಈ ಪ್ರಯೋಗಗಳನ್ನು ಏಕೆ ಮಾಡಲಾಗುತ್ತಿದೆ ಎಂಬುದರ ಕುರಿತು ಹೆಚ್ಚು ಪಾರದರ್ಶಕತೆಯ ಅಗತ್ಯವಿದೆ. ನಾವು ಅದರ ಅಪಾಯಗಳು ಮತ್ತು ಪ್ರಯೋಜನಗಳನ್ನು ಹೇಗೆ ತೂಗುತ್ತಿದ್ದೇವೆ ಎಂದು ಜೈವಿಕ ನೀತಿಶಾಸ್ತ್ರಜ್ಞರು ಪ್ರಶ್ನಿಸಿದ್ದಾಗಿ LA ಟೈಮ್ಸ್‌ಗೆ ವರದಿ ಮಾಡಿದೆ.

ಮಲೇರಿಯಾಕ್ಕೆ ಕಾರಣವಾಗುವ ಸೊಳ್ಳೆಗಳನ್ನು ಗುರುತಿಸುವುದು ಈಗ ಸುಲಭ !

ಈ ಯೋಜನೆ ಆತಂಕಕಾರಿಯಾಗಿದೆ. ಈ ಬಗ್ಗೆ ನಿವಾಸಿಗಳೊಂದಿಗೆ ಸಮಾಲೋಚನೆ ಮಾಡಿಲ್ಲ ಮತ್ತು ಅವರು ಇದರ ಭಾಗವಾಗಲು ಒಪ್ಪಿಗೆ ನೀಡಿಲ್ಲ ಎಂದು ಕ್ಯಾಲಿಫೋರ್ನಿಯಾದ (California) ನಿವಾಸಿಯೊಬ್ಬರು ಹೇಳಿದ್ದಾರೆ. ಯೋಜನೆಯು ಈಗ ಕ್ಯಾಲಿಫೋರ್ನಿಯಾದ ಕೀಟನಾಶಕ ನಿಯಂತ್ರಣ ಇಲಾಖೆಯಿಂದ (department of pesticide regulation) ಅನುಮತಿಗಾಗಿ ಕಾಯುತ್ತಿದೆ. ಈ ಸೊಳ್ಳೆಯು ಯುಎಸ್‌ನಾದ್ಯಂತ ಹೆಚ್ಚುತ್ತಿರುವ ಆರೋಗ್ಯ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು, ನಾವು ಈ ತಂತ್ರಜ್ಞಾನವನ್ನು ಲಭ್ಯವಾಗುವಂತೆ ಮಾಡಲು ಕೆಲಸ ಮಾಡುತ್ತಿದ್ದೇವೆ ಎಂದು ಆಕ್ಸಿಟೆಕ್‌ನ ಸಿಇಒ ಗ್ರೇ ಫ್ರಾಂಡ್‌ಸೆನ್ (Grey Frandsen) ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬೇಸಿಗೆ (Summer) ಶುರುವಾಗಿದೆ. ಈ ಸಮಯದಲ್ಲಿ ಎಲ್ಲೆಡೆ ಸೊಳ್ಳೆಗಳಿಂದ ಉಂಟಾಗುವ ರೋಗಗಳು ಹರಡಲು ಆರಂಭವಾಗುತ್ತದೆ. ಅದರಲ್ಲೂ ಮಲೇರಿಯಾ (Malaria) ಹೆಚ್ಚಿನವರಲ್ಲಿ ಕಂಡು ಬರುವ ಕಾಯಿಲೆ (Disease) ಎಷ್ಟೋ ಸಂದರ್ಭಗಳಲ್ಲಿ ಜೀವಕ್ಕೇ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಗ್ಲಾಸ್ಗೋ ವಿಶ್ವವಿದ್ಯಾಲಯ: ಮಲೇರಿಯಾಕ್ಕೆ ಕಾರಣವಾಗುವ ವಯಸ್ಸಾದ ಸೊಳ್ಳೆಗಳನ್ನು ಗುರುತಿಸಲು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಸೊಳ್ಳೆಗಳು ಮಲೇರಿಯಾ ಮತ್ತು ಇತರ ಮಾರಣಾಂತಿಕ ಕಾಯಿಲೆಗಳನ್ನು ಹರಡುತ್ತವೆ. ಪ್ರಪಂಚದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಆಫ್ರಿಕಾ, ಏಷ್ಯಾ ದಕ್ಷಿಣ ಮತ್ತು ಅಮೆರಿಕಾದಲ್ಲಿ ಸಾವಿರಾರು ಮಿಲಿಯನ್ ಜನರು ಸೊಳ್ಳೆಯಿಂದ ಹರಡುವ ರೋಗಗಳಿಂದ ಬಳಲುತ್ತಿದ್ದಾರೆ ಮತ್ತು ಅವರಲ್ಲಿ ಹೆಚ್ಚಿನವರು ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು. ಇಂತಹ ಪರಿಸ್ಥಿತಿಯಲ್ಲಿ ಮಲೇರಿಯಾ ಹರಡುವಿಕೆ ಕೊನೆಗೊಂಡರೆ ಜಗತ್ತು ಹೆಚ್ಚು ಆರೋಗ್ಯಕರವಾಗಿರಲು ಸಾಧ್ಯವಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಾರ್ಕ್‌ನಲ್ಲಿ ವಾಕಿಂಗ್ ಹೋದಾಗ ತುಪುಕ್ ಎಂದು ಉಗುಳಿದ ವೃದ್ಧನಿಗೆ 26 ಸಾವಿರ ರೂ ದಂಡ
ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ