
ಶಾಂಘೈ(ಏ.10): ಚೀನಾದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ತೀವ್ರವಾಗಿ ಹರಡುತ್ತಿರುವ ಕೊರೋನಾ ನಿಯಂತ್ರಿಸಲು ಚೀನಾ ಹೆಣಗಾಡುತ್ತಿದೆ. ಇದಕ್ಕಾಗಿ ದಿನದಿಂದ ದಿನಕ್ಕೆ ನಿರ್ಬಂಧಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಿದೆ. ಈ ನಿಯಮ ಉಲ್ಲಂಘಿಸಿದವರ ವಿರುದ್ದ ಪೊಲೀಸರು ಅಮಾನವೀಯವಾಗಿ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಕುರಿತು ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದರ ನಡವೆ ಭಾರತದಲ್ಲಿ ಅನುಸರಿಸಲು ಮಾರ್ಗಸೂಚಿಗಳನ್ನು ಅನುಸರಿಸಿ ಅನ್ನೋ ಮಾತುಗಳು ಕೇಳಿಬಂದಿದೆ.
ನಿಯಮ ಉಲ್ಲಂಘಿಸಿದವರನ್ನು, ಕೋವಿಡ್ ಪಾಸಿವಿಟ್ ಬಂದೆ ಕಡ್ಡಾಯವಾಗಿ ಕ್ವಾರಂಟೈನ್ ಇರಲೇಬೇಕು. ಇಲ್ಲಿ ಹೋಮ್ ಕ್ವಾರಂಟೈನ್ ಅವಕಾಶವಿಲ್ಲ. ಕೋವಿಡ್ ಪಾಸಿಟಿವ್ ಕಾಣಿಸಿಕೊಂಡು ಸೋಂಕಿನ ಯಾವುದೇ ಗುಣಲಕ್ಷಣವಿಲ್ಲದೆ ಆರೋಗ್ಯವಾಗಿದ್ದರೂ ಕ್ವಾರಂಟೈನ್ ಅತ್ಯವಶ್ಯಕವಾಗಿದೆ. ಆರೋಗ್ಯವಾಗಿರುವ ಮಕ್ಕಳನ್ನು ಪಾಸಿಟಿವ್ ಹೆಸರಿನಲ್ಲಿ ಪೋಷಕರಿಂದ ಬೇರ್ಪಡಿಸಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯ ಕ್ಷೀಣಿಸುತ್ತಿದೆ. ಇತ್ತ ನಿಯಮ ಉಲ್ಲಂಘಿಸಿದ ಪೋಷಕರನ್ನು ಬೀದಿ ಬೀದಿಯಲ್ಲಿ ಶಿಕ್ಷಿಸಲಾಗುತ್ತಿದೆ.
ಒಟ್ಟಿಗೆ ಮಲಗಂಗಿಲ್ಲ, ಮುತ್ತು ಕೊಡುವಂತಿಲ್ಲ, ಅಪ್ಪಿಕೊಳ್ಳುವುದಕ್ಕೂ ಚೀನಾದಲ್ಲಿ ನಿಷೇಧ!
ಹೀಗೆ ನಿಯಮ ಉಲ್ಲಂಘಿಸಿದ ವ್ಯಕ್ತಿಯನ್ನು ಬೀದಿಯಲ್ಲೇ ಕಠೋರ ಶಿಕ್ಷೆ ನೀಡಿದ ಫೋಟೋ ಸಾಮಾಜಿಕ ಜಾಲತಾಣಧಲ್ಲಿ ವೈರಲ್ ಆಗಿದೆ. ಕೋವಿಡ್ ನಿಯಂತ್ರಣವನ್ನು ಚೀನಾ ಬಲ ಪ್ರಯೋಗದ ಮೂಲಕ ಮಾಡುತ್ತಿದೆ. ವೈಜ್ಞಾನಿಕವಾಗಿ ಮಾಡುತ್ತಿಲ್ಲ ಆನ್ನೋ ಆರೋಪಗಳು ಕೇಳಿಬರುತ್ತಿದೆ. ಕಳೆದೆರಡು ದಿನಗಳಿಂದ ಚೀನಾದ ಶಾಂಘೈ, ಜಿಲಿನ್ ಸೇರಿದಂತೆ ಹಲವು ಭಾಗಗಳಲ್ಲಿ ಗಲಭೆ, ಲೂಟಿ, ಪೊಲೀಸ್ ಹಿಂಸಾಚಾರ ಹೆಚ್ಚಾಗಿದೆ.
ಅಸಹನೀಯ ನಿರ್ಬಂಧಗಳಿಗೆ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತ ಅದೇ ಆಕ್ರೋಶವನ್ನು ಚೀನಾ ಪೊಲೀಸ್ ಬಳಕೆ ಮಾಡಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಭಾರತ ಕೋವಿಡ್ ಗೆದ್ದು ವಿಶ್ವಕ್ಕೆ ಮಾದರಿಯಾಗಿದೆ. ವೈಜ್ಞಾನಿಕವಾಗಿ ಕೋವಿಡ್ ನಿಯಂತ್ರಿಸಲು ಪ್ರಯತ್ನಿಸಿ. ಭಾರತದಲ್ಲೂ ಕಠಿಣ ನಿರ್ಬಂಧ ವಿಧಿಸಲಾಗಿತ್ತು. ಆದರೆ ಅಮಾನವೀಯ ನಡೆ ಇರಲಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ
ಲಾಕ್‌ಡೌನ್ :ಶಾಂಘೈನ ಖಾಲಿ ಬೀದಿಯಲ್ಲಿ ಗಸ್ತು ತಿರುಗುತ್ತಿರುವ ರೋಬೋ ನಾಯಿ.
ಶಾಂಘೈನಲ್ಲಿ ದಾಖಲೆ ಕೇಸು
2.6 ಕೋಟಿ ಜನಸಂಖ್ಯೆ ಹೊಂದಿರುವ ಚೀನಾದ ಅತಿದೊಡ್ಡ ನಗರ ಶಾಂಘೈನಲ್ಲಿ ಕೋವಿಡ್-19 ವೈರಸ್ ವೇಗವಾಗಿ ವ್ಯಾಪಿಸುತ್ತಿದ್ದು, ಮಂಗಳವಾರ ದಾಖಲೆಯ 17,000 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ವೈರಸ್ ನಿಗ್ರಹಕ್ಕೆ ಮತ್ತೊಂದು ಸುತ್ತಿನ ಸಾಮೂಹಿಕ ಕೊರೋನಾ ಪರೀಕ್ಷೆಯನ್ನು ಸರ್ಕಾರ ಆರಂಭಿಸಿದೆ.ಚೀನಾದಲ್ಲಿ 2020 ಫೆ.12ರಂದು 13,436 ಪ್ರಕರಣಗಳು ಪತ್ತೆಯಾಗಿದ್ದವು. ಅದೇ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಆದರೆ ಶಾಂಘೈನಲ್ಲಿ ಒಂದೇ ದಿನ 17,000 ಕೇಸ್ ಪತ್ತೆಯಾಗಿರುವುದು ಭಾರೀ ಆತಂಕ ಸೃಷ್ಟಿಸಿದ್ದು, ಪರಿಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.ನಗರದಲ್ಲಿ ಈಗಾಗಲೇ ಕಳೆದ ಎರಡು ವಾರಗಳಿಂದ ಬಿಗಿ ಲಾಕ್‌ಡೌನ್ ಘೋಷಿಸಲಾಗಿದೆ. ಮಾ.1ರಿಂದ ಈವರೆಗೆ ನಡೆಸಲಾದ ಸಾಮೂಹಿಕ ಪರೀಕ್ಷೆಯಲ್ಲಿ 94,000 ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಕೋವಿಡ್: ಶಾಂಘೈಗೆ 10000 ವೈದ್ಯಕೀಯ ಸಿಬ್ಬಂದಿ
ಚೀನಾದ ಅತಿ ದೊಡ್ಡ ನಗರ ಶಾಂಘೈನಲ್ಲಿ ವೇಗವಾಗಿ ವ್ಯಾಪಿಸುತ್ತಿರುವ ಕೊರೋನಾ ಸೋಂಕು ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಜಾರಿ ಮಾಡುತ್ತಿರುವ ಚೀನಾ ಸರ್ಕಾರ ಸೋಮವಾರ 2000 ಸೇನಾ ವೈದ್ಯಕೀಯ ಸಿಬ್ಬಂದಿ ಸೇರಿ 10,000ಕ್ಕೂ ಹೆಚ್ಚು ಆರೋಗ್ಯ ಕಾರ‍್ಯಕರ್ತರನ್ನು ರವಾನಿಸಿದೆ. ಕೋವಿಡ್ ವಿರುದ್ಧ ಶೂನ್ಯ ಸಹಿಷ್ಣುತೆ ಹೊಂದಿರುವ ಚೀನಾದಲ್ಲಿ ಬಿಎ.2 ಕೊರೋನಾ ರೂಪಾಂತರಿ ದಿನೇ ದಿನೇ ಆತಂಕ ಸೃಷ್ಟಿಸುತ್ತಿದೆ. ಸೋಮವಾರ ದೇಶದಲ್ಲಿ 13,000 ಪ್ರಕರಣಗಳು ದೃಢಪಟ್ಟಿದ್ದು, ಶಾಂಘೈ ನಗರವೊಂದರಲ್ಲೇ 9000 ಕೇಸ್ ಪತ್ತೆಯಾಗಿವೆ. ಸೋಂಕು ನಿಗ್ರಹಕ್ಕೆ ಶಾಂಘೈ ನಗರದಲ್ಲಿ ಕಳೆದ 2 ವಾರಗಳಿಂದ ಲಾಕ್‌ಡೌನ್ ಜಾರಿಯಲ್ಲಿದ್ದು, ಈ ನಡುವೆ ಸೋಮವಾರ ಬರೋಬ್ಬರಿ 2.5 ಕೋಟಿ ಮಂದಿಗೆ ಸಾಮೂಹಿಕ ಕೊರೋನಾ ಪರೀಕ್ಷೆ ನಡೆಸಲಾಗಿದೆ.
ಇನ್ನು ಶಾಂಘೈನಲ್ಲಿ ಅನೇಕ ಕಾರ್ಖಾನೆಗಳು ಮತ್ತು ಹಣಕಾಸು ಸಂಸ್ಥೆಗಳು ಸೀಮಿತ ಉದ್ಯೋಗಿಗಳನ್ನು ಬಳಸಿಕೊಂಡು ಕಾರ‍್ಯ ನಿರ್ವಹಿಸುತ್ತಿದ್ದರೂ ಲಾಕ್‌ಡೌನ್ ವಿಸ್ತರಣೆಯಿಂದ ಚೀನಾ ರಾಜಧಾನಿಯ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ