ಅಮೆರಿಕಾದ ಅಲಾಸ್ಕಾದಲ್ಲಿ ತಾಯಿ ಕಡವೆಯೊಂದು ತನ್ನ ಮರಿಗಳ ಫೋಟೋ ತೆಗೆಯಲು ಬಂದ ವ್ಯಕ್ತಿಯೊಬ್ಬನ ಜೀವ ತೆಗೆದಿದೆ.
ಅಲಾಸ್ಕಾ: ಮಕ್ಕಳು ಎಂದ ಮೇಲೆ ಅದು ಮನುಷ್ಯರಾದರು ಅಷ್ಟೇ ಪ್ರಾಣಿಗಳಾದರೂ ಅಷ್ಟೇ ತಮ್ಮ ಜೀವಕ್ಕಿಂತ ಹೆಚ್ಚಾಗಿ ತಮ್ಮ ಕರುಳ ಕುಡಿಗಳನ್ನು ಜೋಪಾನವಾಗಿ ಕಾಪಾಡುತ್ತಾರೆ. ತಮ್ಮ ಮರಿಗಳಿಗೆ ಅಪಾಯವಾಗುತ್ತಿದೆ ಎಂದು ಗೊತ್ತಾದರೆ ಪ್ರಾಣಿಗಳಂತು ಮುಂದಿದ್ದವರ ಜೀವ ತೆಗೆಯುವುದಕ್ಕೂ ಹಿಂದೂ ಮುಂದೂ ನೋಡುವುದಿಲ್ಲ, ಅದೇ ರೀತಿ ಅಮೆರಿಕಾದ ಅಲಾಸ್ಕಾದಲ್ಲಿ ತಾಯಿ ಕಡವೆಯೊಂದು ತನ್ನ ಮರಿಗಳ ಫೋಟೋ ತೆಗೆಯಲು ಬಂದ ವ್ಯಕ್ತಿಯೊಬ್ಬನ ಜೀವ ತೆಗೆದಿದೆ.
ಮೂಸೆ ಎಂದು ಕರೆಯಲ್ಪಡುವ ಅಮೆರಿಕನ್ ಕಡವೆ ತನ್ನ ಮರಿಗಳ ಫೋಟೋ ತೆಗೆಯಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ತಿವಿದು ಕೊಂದೇ ಬಿಟ್ಟಿದೆ. 70 ವರ್ಷದ ಡಾಲೆ ಚೋರ್ಮನ್ ಕಡವೆ ದಾಳಿಯಿಂದ ಸಾವಿಗೀಡಾದ ವ್ಯಕ್ತಿ. ಅವರು ಅಲಸ್ಕಾದ ಹೊಮರ್‌ನಲ್ಲಿ ಮೂಸೆಯೊಂದರ(ಕಡವೆ) ಎರಡು ನವಜಾತ ಮರಿಗಳ ಫೋಟೋ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಇದರಿಂದ ಮರಿಗಳಿಗೆ ಅಪಾಯವಾಗುವುದೇನೋ ಎಂದು ಭಯಗೊಂಡ ಕಡವೆ ಅವರ ಮೇಲೆ ದಾಳಿ ಮಾಡಿ ಸಾಯಿಸಿಯೇ ಬಿಟ್ಟಿದೆ.
undefined
ಚಾಮರಾಜನಗರ: ಕಡವೆ ಬೇಟೆಗೆ ಕಾಡಿಗೆ ನುಗ್ಗಿದ್ದ ಬೇಟೆಗಾರರ ತಂಡ, ಅರಣ್ಯದಲ್ಲಿ ನಡೀತು ಗುಂಡಿನ ಚಕಮಕಿ
ದಾಳಿ ನಡೆಯುವ ವೇಳೆ ಚೋರ್ಮನ್ ಜೊತೆ ಇನ್ನೊಬ್ಬ ವ್ಯಕ್ತಿಯೂ ಕೂಡ ಇದ್ದು, ಅವರು ಮೂಸೆ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗಂಭೀರ ಗಾಗೊಂಡ ಚೋರ್ಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಲಸ್ಕಾದ ಸಾರ್ವಜನಿಕ ಸುರಕ್ಷತಾ ವಿಭಾಗದ ವಕ್ತಾರ ಆಸ್ಟಿನ್ ಮ್ಯಾಕ್ಡೇನಿಯಲ್ ಮಾಹಿತಿ ನೀಡಿದ್ದಾರೆ. ಕಡವೆ ಮರಿಗಳನ್ನು ನೋಡುವುದಕ್ಕಾಗಿ ಪೊದೆಯೊಂದರ ಬಳಿ ಚೋರ್ಮನ್ ಹಾಗೂ ಮತ್ತೊಬ್ಬ ವ್ಯಕ್ತಿ ಹೋದಾಗ ಮೂಸೆ ಹಠಾತ್ ಆಗಿ ದಾಳಿ ಮಾಡಿದೆ. ಪರಿಣಾಮ ಡೇಲ್ ಚೋರ್ಮನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸಣ್ಣ ಮರಿಗಳಿರುವ ಸಮಯದಲ್ಲಿ ಕಡವೆ ಅಥವಾ ಯಾವುದೇ ಕಾಡು ಪ್ರಾಣಿಗಳಿಂದ ನಿರ್ದಿಷ್ಠ ಅಂತರವನ್ನು ಕಾಯ್ದುಕೊಳ್ಳಬೇಕು. ಆದರೆ ಮೂಸೆಗಳು ಹೇಗೆ ದಾಳಿ ಮಾಡುತ್ತವೆ ಎಂಬುದನ್ನು ನಿರೀಕ್ಷೆ ಮಾಡಲಾಗುವುದಿಲ್ಲ, ಅವು ಮರಿಗಳ ರಕ್ಷಣೆಗಾಗಿ ಏನೂ ಬೇಕಾದರೂ ಮಾಡಲು ಸಿದ್ಧವಿರುತ್ತವೆ ಎಂದು ಆಸ್ಟಿನ್ ಮ್ಯಾಕ್ಡೇನಿಯಲ್ ಹೇಳಿದ್ದಾರೆ.
ಕಾಡು ರಕ್ಷಿಸುತ್ತೇವೆಂದು ಬಂದ ಎನ್‌ಜಿಒ ಸದಸ್ಯರೇ ಕಡವೆ ಬೇಟೆಯಾಡಿ ಮಾಂಸ ತಿಂದ್ರು