ಗುಹೆಯೊಂದರಲ್ಲಿ 6 ಸಾವಿರ ವರ್ಷಗಳಷ್ಟು ಹಳೆಯ ಶೂ ಪತ್ತೆ

By Suvarna News  |  First Published Oct 1, 2023, 1:39 PM IST

ಸ್ಪೇನ್‌ನ ಬಾವಲಿ ಗುಹೆಯಲ್ಲಿ 6 ಸಾವಿರ ವರ್ಷಗಳು ಹಳೆಯ ಶೂಗಳು ಪತ್ತೆಯಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  ಸ್ಪೇನ್‌ನಲ್ಲಿ ನಡೆದ ಸಂಶೋಧನೆ ವೇಳೆ ಈ ಶೂಗಳು ಪತ್ತೆಯಾಗಿವೆ.


ಸ್ಪೇನ್‌: ಸ್ಪೇನ್‌ನ ಬಾವಲಿ ಗುಹೆಯಲ್ಲಿ 6 ಸಾವಿರ ವರ್ಷಗಳು ಹಳೆಯ ಶೂಗಳು ಪತ್ತೆಯಾಗಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  ಸ್ಪೇನ್‌ನಲ್ಲಿ ನಡೆದ ಸಂಶೋಧನೆ ವೇಳೆ ಈ ಶೂಗಳು ಪತ್ತೆಯಾಗಿವೆ.  ಹುಲ್ಲುಗಳು ಮತ್ತು ಚರ್ಮ, ಸುಣ್ಣ, ಸೆಣಬು ಬಳಸಿ ನಿರ್ಮಿಸಲಾಗಿದ್ದು, ಇದೊಂದು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಶೂ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸ್ಪೇನ್‌ನ ಬಾವಲಿ ಗುಹೆ ಅಥವಾ ಬ್ಯಾಟ್ ಕೇವ್‌ (bat cave)ಯಲ್ಲಿ ಯುರೋಪಿನ ಅತ್ಯಂತ ಹಳೆಯ ಜೋಡಿ ಶೂ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದು,  ಈ ಬಗ್ಗೆ ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಅಧ್ಯಯನ ವರದಿಯೊಂದು ಪ್ರಕಟವಾಗಿದೆ.  ಈ ವರದಿಯ ಪ್ರಕಾರ, ಹುಲ್ಲಿನಿಂದ ನೇಯ್ದ ಜೋಡಿ ಶೂವೊಂದು ಪತ್ತೆಯಾಗಿದೆ.  ಇದು 6 ಸಾವಿರ ವರ್ಷದಷ್ಟು ಹಳೆಯದಾಗಿದ್ದು, 19ನೇ ಶತಮಾನದಲ್ಲಿ ಗಣಿಗಾರಿಕೆಯಿಂದ ಸೃಷ್ಟಿಯಾದ ಆಂಡಲೂಸಿಯಾದಲ್ಲಿರುವ ಬಾವಲಿ ಗುಹೆಯಲ್ಲಿ ಇದು ಪತ್ತೆಯಾಗಿದೆ.  ಬಾರ್ಸಿಲೋನಾದ ಸ್ವಾಯತ್ತ ವಿಶ್ವವಿದ್ಯಾಲಯ ಮತ್ತು ಸ್ಪೇನ್‌ನ ಅಲ್ಕಾಲಾ ವಿಶ್ವವಿದ್ಯಾಲಯದ ಸಂಶೋಧಕರು ಈ ಗುಹೆಯಲ್ಲಿ  ಬಾಸ್ಕೆಟ್ ಮತ್ತು ಕೆಲ ಉಪಕರಣಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ. 

ಕಬಿನಿಯಲ್ಲಿ ಕ್ಯಾಮರಾ ಕಣ್ಣಿಗೆ ಸೆರೆಯಾದ ಕರಿಯ... ಕರಿಚಿರತೆಯ ಸುಂದರ ಫೋಟೋಗಳು

Tap to resize

Latest Videos

ಈ ವಸ್ತುಗಳು ಇದುವರೆಗೆ ದಕ್ಷಿಣ ಯುರೋಪ್‌ನಲ್ಲಿ ಕಂಡು ಬಂದ ಸಂರಕ್ಷಿಸಲ್ಪಟ್ಟ ಅತ್ಯಂತ ಹಳೆಯ  ವಸ್ತುಗಳು ಎಂದು ಈ ಅಧ್ಯಯನ ವರದಿಯ ಲೇಖಕಿ ಮಾರಿಯಾ ಹೆರೆರೊ ಒಟಲ್ ಹೇಳಿದ್ದಾರೆ.  ಇದರಲ್ಲಿ ಅಳವಡಿಸಲಾಗಿರುವ ತಾಂತ್ರಿಕ ವೈವಿಧ್ಯತೆ  ಹಾಗೂ  ಮತ್ತು ಅಳವಡಿಸಲಾಗಿರುವ ಕಚ್ಚಾ ವಸ್ತುಗಳು ನಮ್ಮ ಪೂರ್ವಜರ ಸಮುದಾಯದ ಕೌಶಲ್ಯಗಳನ್ನು ಎತ್ತಿ ತೋರಿಸುತ್ತಿದೆ ಎಂದು ಅವರು ವಿವರಿಸಿದ್ದಾರೆ. 

ಅಧ್ಯಯನದ ಪ್ರಕಾರ, ಪ್ರಾಚೀನ ಪಾದರಕ್ಷೆಗಳನ್ನು  1857 ರಲ್ಲಿ ಮೊದಲು ಕಂಡುಹಿಡಿಯಲಾಯಿತು,  ಸ್ಪೇನ್‌ನ ಗಣಿಕಾರರು ಈ ಗುಹೆಯನ್ನು  ಲೂಟಿ ಮಾಡಿದ್ದರು. ಆದರೂ 1970ರ ದಶಕದಲ್ಲಿ  ಈ ಕಲಾಕೃತಿಗಳನ್ನು ವಿಶ್ಲೇಷಿಸಿದಾಗ ಇವು ಇತ್ತಿಚಿನ ವಿಶ್ಲೇಷಣೆಗಿಂತ 1 ಸಾವಿರ ವರ್ಷಗಳಷ್ಟು ಹಳೆಯವು ಎಂಬುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. ದಿನಾಂಕ ತಂತ್ರಜ್ಞಾನದಲ್ಲಿ ಬಹಳಷ್ಟು ಮುಂದುವರಿಕೆ ಆಗಿದ್ದು, ಇದರಿಂದ ಮೊದಲು ಎಣಿಸಿದ ಇದರ ಸಮಯಕ್ಕಿಂತಲೂ 2 ಸಾವಿರ ವರ್ಷದಷ್ಟು ಇವು ಹಳೆಯವು. ಗುಹೆಯಲ್ಲಿನ  ಕಡಿಮೆ ತೇವಾಂಶ ಮತ್ತು ತಂಪಾದ ಗಾಳಿಯು ಕಲಾಕೃತಿಗಳನ್ನು ಅಸಾಮಾನ್ಯವಾಗಿ ಉತ್ತಮವಾಗಿ ಸಂರಕ್ಷಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ. ಸೆಟ್‌ನಲ್ಲಿರುವ ಕೆಲವು ಕಲಾಕೃತಿಗಳು 9,000 ವರ್ಷಗಳ ಹಿಂದಿನವು ಎಂದು ಅವರು  ಹೇಳಿದ್ದಾರೆ.

 ಕೇರಳ: ಸಹಪಾಠಿಗಳ ಫೋಟೋ ಅಶ್ಲೀಲ ಎಡಿಟ್ ಮಾಡಿ ಜಾಲತಾಣಕ್ಕೆ ಅಪ್ಲೋಡ್ ಮಾಡ್ತಿದ್ದ ಬಾಲಕ

click me!