ವೃದ್ಧೆಯ ಪರ್ಸ್‌ ಎಗ್ಗರಿಸಿದ ಕಳ್ಳನಿಗೆ ಬಿತ್ತು ಸಖತ್‌ ಗೂಸಾ... ಇಂಟರ್‌ನೆಟ್‌ನಲ್ಲಿ ಹೀರೋ ಆದ ಯುವಕ

Published : Dec 22, 2021, 07:26 PM IST
ವೃದ್ಧೆಯ ಪರ್ಸ್‌ ಎಗ್ಗರಿಸಿದ ಕಳ್ಳನಿಗೆ ಬಿತ್ತು ಸಖತ್‌ ಗೂಸಾ... ಇಂಟರ್‌ನೆಟ್‌ನಲ್ಲಿ ಹೀರೋ ಆದ ಯುವಕ

ಸಾರಾಂಶ

  87 ವರ್ಷದ ವೃದ್ಧೆಯ ಪರ್ಸ್‌ ಎಗರಿಸಿದ ಖದೀಮ ಕಳ್ಳನ ಹಿಂಬಾಲಿಸಿ  ಹಿಡಿದ  27 ರ ಯುವಕ ಯುವಕನ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ  

ನ್ಯೂಯಾರ್ಕ್‌(ಡಿ. 22): ಅಮೆರಿಕಾದ ಒಹಿಯೋದಲ್ಲಿ ಕಳ್ಳನೊಬ್ಬ ವಯಸ್ಸಾದ ಮಹಿಳೆಯ ಪರ್ಸ್ ಅನ್ನು ಕಸಿದುಕೊಂಡು ಓಡಲು ಯತ್ನಿಸಿದಾಗ ಅವನನ್ನು ತಡೆದ 27 ವರ್ಷದ ವ್ಯಕ್ತಿಯೊಬ್ಬ ಆತನಿಗೆ ಸರಿಯಾಗಿ ಗೂಸಾ ನೀಡಿ ವೃದ್ಧೆಯ ಪರ್ಸ್‌ನ್ನು ವಾಪಸ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ. ಈತನ ಕಾರ್ಯವನ್ನು ಶ್ಲಾಘಿಸಿ ಪೊಲೀಸರು ಯುವಕನನ್ನು ಸನ್ಮಾನಿಸಿದ್ದಾರೆ. ತುಂಬಾ ಜನ ಹಠಾತ್‌ ಕಳ್ಳತನ ಅಥವಾ ದರೋಡೆಯಾದಾಗ ಏನು ಮಾಡುವುದು ಎಂದೇ ತಿಳಿಯದೇ ಶಾಕ್‌ಗೊಳಗಾಗಿ  ನಿಂತಲ್ಲೇ  ನಿಂತು ಬಿಡುತ್ತಾರೆ. ಆದರೆ ಈ ಯುವಕ ಜಾಣ್ಮೆ ಮೆರೆದು ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ವೃದ್ಧೆಗೆ ಸಹಾಯ ಮಾಡಿದ್ದಕ್ಕಾಗಿ ಈ ಯುವಕನನ್ನು ಸ್ಥಳೀಯ ಪೊಲೀಸರು ಹೀರೋ ಎಂದು ಶ್ಲಾಘಿಸಿ ಸನ್ಮಾನಿಸಿದ್ದಾರೆ. 

ಈ ತಿಂಗಳ ಆರಂಭದಲ್ಲಿ  87 ವರ್ಷದ ಪ್ಯಾಟ್ ಗೊಯಿನ್ಸ್ (Pat Goins) ಎಂಬ ವಯೋವೃದ್ಧೆಯೊಬ್ಬರು ಕ್ರೋಗರ್ (Kroger) ಹೆಸರಿನ ಕಿರಾಣಿ ಅಂಗಡಿಯೊಂದರಲ್ಲಿ ಶಾಪಿಂಗ್‌ ಮಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ  ಆಕೆಯ ಪರ್ಸ್  ಕಸಿದು ಹೊರಗೆ ಓಡಿ ಬಂದಿದ್ದಾನೆ. ಈ ವೇಳೆ ವೃದ್ಧ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಈ ವೇಳೆ 27 ವರ್ಷದ  ದೇಶಾನ್ ಪ್ರೆಸ್ಲಿ (Deshawn Pressley) ಎಂಬ ಯುವಕ ಕಳ್ಳನನ್ನು ಹಿಂಬಾಲಿಸಿ ನೆಲಕ್ಕೆ ಕೆಡವಿ ಸರಿಯಾಗಿ ಎರಡು ಬಾರಿಸಿ ಪರ್ಸನ್ನು ವಾಪಸ್‌ ವೃದ್ಧೆಯ ಕೈ ಸೇರುವಂತೆ ಮಾಡಿದ್ದಾನೆ. 

 

ಪ್ರೆಸ್ಲಿಯು ದರೋಡೆಕೋರನನ್ನು ತ್ವರಿತವಾಗಿ ಹಿಡಿದು ಆತನಿಗೆ ಸರಿಯಾಗಿ ಬಾರಿಸಿ ಪೊಲೀಸರು ಬರುವವರೆಗೂ ಆತನನ್ನು ಹಿಡಿದುಕೊಂಡಿರುವ ವಿಡಿಯೋ ಸ್ಥಳೀಯ ಸಿಸಿಟಿವಿ (CCTV) ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಇತ್ತ ಕಳ್ಳತನಗೈದ ಆರೋಪಿಯನ್ನು 58 ವರ್ಷದ ಡೆರೆಕ್ ವಾಘನ್ ( Derek Vaughn)ಎಂದು ಗುರುತಿಸಲಾಗಿದೆ. ಆರೋಪಿ ಡೆರೆಕ್ ವಾಘನ್ ಮೇಲೆ ದರೋಡೆ, ಮೂರನೇ ಹಂತದ ಅಪರಾಧ ಮತ್ತು ಕಳ್ಳತನ ಮಾಡಿದ ಆರೋಪವಿದೆ. ಇಂತಹ ಆರೋಪಿಯನ್ನು ಹಿಡಿದ ವೃದ್ಧ ಮಹಿಳೆಗೆ ನೆರವಾದ ಪ್ರೆಸ್ಲಿಗೆ ಪೊಲೀಸರು ನಾಗರಿಕ ಪ್ರಶಸ್ತಿ ನೀಡಿದ್ದಾರೆ. 

 

ಪ್ರೆಸ್ಲಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದ ವೇಳೆ ಪ್ಯಾಟ್ ಗೊಯಿನ್ಸ್ ಅವರು ಕೂಡ ಬಂದು ತನಗೆ ಸಹಾಯ ಮಾಡಿದ್ದಕ್ಕಾಗಿ ಆತನನ್ನು ಬಾಚಿ ತಬ್ಬಿಕೊಂಡರು. ಹಿರಿಯ ಮಹಿಳೆ ಹಾಗೂ ಯುವ ತರುಣನ ನಡುವಿನ ಈ ಮಧುರ ಅನುಬಂಧ ನೆಟ್ಟಿಗರ ಮನ ಸೆಳೆದಿದೆ. ಪ್ರೆಸ್ಲಿಗೆ ಈ ಗೌರವ ಸಿಕ್ಕಿರುವುದಕ್ಕೆ ನನಗೆ ತುಂಬಾ ಖುಷಿ ಆಗಿದೆ ಏಕೆಂದರೆ ಆತನ್ನ ನನ್ನ ಪಾಲಿನ ಹೀರೋ ಎಂದು ಗೊಯಿನ್ಸ್‌ ಮಾಧ್ಯಮಗಳಿಗೆ ಹೇಳಿದ್ದಾರೆ. ಅಲ್ಲದೇ ಈ ಸ್ನೇಹವನ್ನು ಮುಂದುವರಿಸುವ ಸಲುವಾಗಿ ಅವರು ಪ್ರೆಸ್ಲಿಗೆ ಔತಣಕೂಟ ಏರ್ಪಡಿಸಲು ದಿನಾಂಕ ನಿಗದಿಪಡಿಸುವುದಾಗಿ ಹೇಳಿದ್ದಾರೆ.

Life Threatening to Woman: ಪಟಾಕಿ ಗನ್‌ ತೋರಿಸಿ ಸರ ಕದ್ದವನ ಬಂಧನ

ದರೋಡೆಗೆ ಪ್ರಯತ್ನಿಸುವ ಕೆಲವೇ ಕ್ಷಣಗಳ ಮೊದಲು ಗೋಯಿನ್ಸ್‌ನೊಂದಿಗೆ ಸಂಭಾಷಣೆಯನ್ನು ಪ್ರಾರಂಭಿಸಿದಾಗ ಪ್ರೆಸ್ಲಿ ತಮ್ಮ 1 ವರ್ಷದ ಮಗಳ ಜೊತೆಯಲ್ಲಿದ್ದರು. ನಂತರ ಇಬ್ಬರೂ ಪ್ರತ್ಯೇಕ ಚೆಕ್‌ಔಟ್ ಲೈನ್‌ಗಳಿಗೆ ಹೋದಾಗ, ಶಂಕಿತ ವ್ಯಕ್ತಿ ಪರ್ಸ್ ಅನ್ನು ಕದಿಯಲು ಪ್ರಯತ್ನಿಸಿದ್ದಾನೆ ಎಂದು ಪ್ರೆಸ್ಲಿ ಹೇಳಿದರು. ಈ ವೇಳೆ ಗೊಯಿನ್ಸ್‌ ಕಿರುಚುವುದು ಮತ್ತು ಕೂಗುವುದನ್ನು ನಾನು ಕೇಳಿದೆ. ಈ ವೇಳೆ ನಾನೊಬ್ಬ ನಾಗರಿಕನಾಗಿ ಮಾಡಬೇಕಾದದನ್ನು ಮಾಡಿದ್ದೇನೆ. 
ತನ್ನ ತಾಯಿಯ ಮರಣದ ನಂತರ ತನ್ನನ್ನು ಬೆಳೆಸಿದ ಅಜ್ಜಿ, ಇತರರಿಗೆ ಸಹಾಯ ಮಾಡುವ ಮೌಲ್ಯಗಳನ್ನು ತನ್ನಲ್ಲಿ ತುಂಬಿದ್ದಾಳೆ ಎಂದು ಪ್ರೆಸ್ಲಿ ಹೇಳಿದರು. ಸಮಯಪ್ರಜ್ಞೆ ಮೆರೆದು ತ್ವರಿತವಾಗಿ ವೃದ್ಧೆಗೆ ಸಹಾಯ ಮಾಡಿದ್ದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರೆಸ್ಲಿಯನ್ನು ಪ್ರಶಂಸಿಸಿದ್ದಾರೆ.

Police with People : ಮಾಲೀಕರ ಮುಖದಲ್ಲಿ ಸಂತಸ ಉತ್ತರ ಕನ್ನಡ ಪೊಲೀಸರ ಮಹತ್ಕಾರ್ಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!