Bill Gates Covid 19 Tweets: ಒಮಿಕ್ರೋನ್‌ ಶೀಘ್ರದಲ್ಲೇ ಎಲ್ಲ ದೇಶಗಳಿಗೂ ಹರಡಲಿದೆ, ನಿರ್ಲ್ಯಕ್ಷಿಸಬೇಡಿ!

By Suvarna NewsFirst Published Dec 22, 2021, 11:06 AM IST
Highlights

*ಒಮಿಕ್ರೋನ್‌ ಭೀತಿ: ಬಿಲ್ ಗೇಟ್ಸ ಟೂರ್‌ ಪ್ಲ್ಯಾನ್‌ ರದ್ದು
*ಸರಣಿ ಟ್ವೀಟ್‌ ಮೂಲಕ ಕೊರೋನಾ ಬಗ್ಗೆ ಮಾಹಿತಿ
*ಅಮೆರಿಕದಲ್ಲಿ ಒಮಿಕ್ರೋನ್ ಸ್ಫೋಟ ಬೆನ್ನಲ್ಲೇ ಟ್ವೀಟ್?

ವಾಷಿಂಗ್ಟನ್ (ಡಿ. 22): ದಿನ ಕಳೆದಂತೆ ವಿಶ್ವದಾದ್ಯಂತ ಒಮಿಕ್ರಾನ್‌ ಪ್ರಕರಣಗಳು (Omicron Variant) ಹೆಚ್ಚುತ್ತಿವೆ. ಕೊರೋನಾ ಪಾಸಿಟಿವಿಟಿ ದರ ಹೆಚ್ಚಾಗುತ್ತಿದೆ. ಈ ಬೆನ್ನಲ್ಲೇ ಹಲವು ದೇಶಗಳು ಈಗಾಗಲೇ ನಿರ್ಬಂಧಗಳನ್ನು ಜಾರಿ ಮಾಡಿವೆ. ಭಾರತದಲ್ಲೂ 200ಕ್ಕೂ ಹೆಚ್ಚು ಒಮಿಕ್ರೋನ್‌ ಪ್ರಕರಣಗಳು ದಾಖಲಾಗಿವೆ. ಈ ಮಧ್ಯೆ ಒಮಿಕ್ರೋನ್‌ ಭೀತಿಯಿಂದಾಗಿ ತಮ್ಮೆಲ್ಲಾ ಟೂರ್‌ ಪ್ಯ್ಲಾನ್‌ಗಳನ್ನು ರದ್ದುಗೊಳಿಸಿರುವುದಾಗಿ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್‌ ಗೇಟ್ಸ (Bill Gates) ಹೇಳಿದ್ದಾರೆ. ಜತೆಗೆ ಇತಿಹಾಸದಲ್ಲೆ ಅತಿ ವೇಗವಾಗಿ ಹರಡುತ್ತಿರುವ ವೈರಸ್‌ ಇದಾಗಿದೆ, ಹಾಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಡಿಸೆಂಬರ್‌ 21 ರಂದು ಸರಣಿ ಟ್ವೀಟ್‌ (Tweets) ಮಾಡಿರುವ ಬಿಲ್‌ ಗೇಟ್ಸ್‌, ಅವರ ಆಪ್ತರು ಕೂಡ  ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಸಾಂಕ್ರಾಮಿಕ ರೋಗದಿಂದಾಗಿ ಅತಿ ಕೆಟ್ಟ ಸಮಯನ್ನು ನಾವು ನೋಡಬೇಕಾಗಬಹುದು  ಎಂದು ಹೇಳಿದ್ದಾರೆ. ಗೇಟ್ಸ್ ಅವರ ಟ್ವೀಟ್‌ಗಳು ಓಮಿಕ್ರಾನ್ ರೂಪಾಂತರದ ಅಪಾಯವನ್ನು ಒತ್ತಿಹೇಳುತ್ತಿವೆ, ನಿರ್ದಿಷ್ಟವಾಗಿ ಅದರ ಮರುಸೋಂಕಿಗೆ ಸಂಬಂಧಿಸಿದಂತೆ ಬಿಲ್‌ ತಿಳಿಸಿದ್ದಾರೆ, ಹಾಗೆಯೇ ಈ ಹೊಸ ರೂಪಾಂತರಿ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲದಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. 

ಅಮೆರಿಕದಲ್ಲಿ ಒಮಿಕ್ರೋನ್ ಸ್ಫೋಟ ಬೆನ್ನಲ್ಲೇ ಟ್ವೀಟ್?

ದಕ್ಷಿಣ ಆಫ್ರಿಕಾ  ಮತ್ತು ಬ್ರಿಟನ್‌ನಲ್ಲಿ ಭಾರೀ ಹಾವಳಿ ಸೃಷ್ಟಿಸಿರುವ ರೂಪಾಂತರಿ ಒಮಿಕ್ರೋನ್‌ ವೈರಸ್‌ ಅಮೆರಿಕದಲ್ಲೂ  ಸ್ಫೋಟಗೊಂಡಿದೆ. ಕಳೆದ ವಾರ ದೇಶಾದ್ಯಂತ ಪತ್ತೆಯಾದ ಒಟ್ಟು ಹೊಸ ಪ್ರಕರಣದಲ್ಲಿ ಶೇ.73ರಷ್ಟು‌ ಪಾಲು ಕೇವಲ ಒಮಿಕ್ರೋನ್‌ನಿಂದ ಆಗಿದ್ದು ಎಂದು ದೃಢಪಟ್ಟಿದೆ. ಈ ಬೆನ್ನಲ್ಲೆ ಬಿಲ್‌ ಗೇಟ್ಸ್‌ ಎಚ್ಚರಿಕೆ ನೀಡಿರಬಹುದು ಎಂದು ಹೇಳಲಾಗಿದೆ.

"ಈ ಸಂಕಷ್ಟದ ಸಮಯದಲ್ಲಿ ನಾವೆಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡಬೇಕು. ವಿಶೇಷವಾಗಿ ಅತ್ಯಂತ ದುರ್ಬಲರು, ಅವರು ಬೀದಿಯಲ್ಲಿರಲಿ ಅಥವಾ ಬೇರೆ ದೇಶದಲ್ಲಿ ವಾಸಿಸುತ್ತಿರಲಿ ಅಂಥವರ ಬಗ್ಗೆ ಕಾಳಜಿ ವಹಿಸಬೇಕು. ಅಂದರೆ ಮಾಸ್ಕ್ ಧರಿಸುವುದು, ಬೃಹತ್‌ ಕಾರ್ಯಕ್ರಮಗಳನ್ನು ಆಯೋಜಿಸದಿರವುದು ಮತ್ತು ಲಸಿಕೆಯನ್ನು ಪಡೆಯುವುದರ ಬಗ್ಗೆ ಗಮನಹರಿಸಬೇಕು. ಬೂಸ್ಟರ್ ಡೋಸ್ ಪಡೆಯುವುದು ಉತ್ತಮ ರಕ್ಷಣೆ ನೀಡುತ್ತದೆ‌" ಎಂದು ಬಿಲ್‌ ಹೇಳಿದ್ದಾರೆ.

 

Just when it seemed like life would return to normal, we could be entering the worst part of the pandemic. Omicron will hit home for all of us. Close friends of mine now have it, and I’ve canceled most of my holiday plans.

— Bill Gates (@BillGates)

"ಲಸಿಕೆ ಪಡೆದಿರುವ  ಜನರಲ್ಲಿ ಹೆಚ್ಚಿನ  ಪ್ರಕರಣಗಳು ಕಂಡುಬರುತ್ತಿವೆ. ಇದು  ಎಷ್ಟು ಜನರು ಲಸಿಕೆ ಪಡೆದಿದ್ದಾರೆ  ಮತ್ತು ಈ ರೂಪಾಂತರವು ಎಷ್ಟು ವೇಗವಾಗಿ ಹರಡುತ್ತಿದೆ ಎಂಬುದಕ್ಕೆ ಸಂಬಂಧಿಸಿದೆ. ಜನರು ಗಂಭೀರವಾಗಿ ಅನಾರೋಗ್ಯಕ್ಕೆ ಒಳಗಾಗುವುದನ್ನು ಅಥವಾ ಸಾಯುವುದನ್ನು ತಡೆಯಲು ಲಸಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಅದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ" ಎಂದು ಬಿಲ್‌ ಹೇಳಿದ್ದಾರೆ

ಕೋವಿಡ್‌ ಹಬ್ಬುತ್ತಿರುವ ಈ ಸಮಯದಲ್ಲಿ ಮತ್ತೊಂದು ರಜಾದಿನಕ್ಕೆ ಹೋಗುವುದು ನಿರಾಶಾದಾಯಕವಾಗಿದೆ ಎಂದು ನನಗೆ ತಿಳಿದಿದೆ. ಆದರೆ ಇದು ಶಾಶ್ವತವಾಗಿ ಈ ರೀತಿ ಇರುವುದಿಲ್ಲ. ಒಂದು ದಿನ ಸಾಂಕ್ರಾಮಿಕವು ಕೊನೆಗೊಳ್ಳುತ್ತದೆ. ನಾವು ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿದಾಗ  ಆ ಸಮಯ ಬೇಗ ಬರುತ್ತದೆ" ಎಂದು ಬಿಲ್‌ ಗೇಟ್ಸ್‌ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ:

1) Bill Gates 2021 ನನ್ನ ಜೀವನದ ಅತ್ಯಂತ ಕಷ್ಟಕರ ವರ್ಷ ಎಂದ ಮೈಕ್ರೋಸಾಫ್ಟ್‌ ಸಂಸ್ಥಾಪಕ!

2) ಮೈಕ್ರೋಸಾಫ್ಟ್ ಸಾಹುಕಾರನ ಕರಾಳ ಮುಖ: ಕೊರೋನಾ ಸೃಷ್ಟಿ? ಅರೆಸ್ಟ್ ಮಾಡುವಂತೆ ಕೂಗು!

3) Cyber Security Skilling Programme: ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರಿಗೆ ಮೈಕ್ರೋಸಾಫ್ಟ್ ತರಬೇತಿ !

click me!