
ಲಾಹೋರ್ (ಜು.18): ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ತನ್ನ ಪೂರ್ವಜರ ಮನೆಯನ್ನು ನೋಡಬೇಕೆಂಬ 90 ವರ್ಷದ ಭಾರತೀಯ ಮಹಿಳೆಯ ಬಹುವರ್ಷಗಳ ಕೋರಿಕೆ ಈಡೇರುವ ಕ್ಷಣ ಕೊನೆಗೂ ಬಂದಿದೆ. ರೀನಾ ಛಿಬ್ಬರ್ ವರ್ಮಾ ಎಂಬ 90 ವರ್ಷದ ವೃದ್ಧೆಗೆ ಪಾಕಿಸ್ತಾನ ವೀಸಾ ನೀಡಿದ್ದು, ಆಕೆ ಶನಿವಾರ ವಾಘಾ-ಅಟ್ಟಾರಿ ಗಡಿ ದಾಟಿ ಪಾಕಿಸ್ತಾನಕ್ಕೆ ಪ್ರವೇಶಿಸಿದ್ದಾರೆ.
ದೇಶ ವಿಭಜನೆಯಾದ ಬಳಿಕ ಸುಮಾರು 75 ವರ್ಷಗಳ ಬಳಿಕ ವರ್ಮಾ ತನ್ನ ಪೂರ್ವಜರ ಮನೆಯನ್ನು ನೋಡಲು ತೆರಳಿದ್ದಾರೆ. ರಾವಲ್ಪಿಂಡಿಯಲ್ಲಿರುವ ದೇವಿ ಕಾಲೇಜ್ ರಸ್ತೆಯಲ್ಲಿ ವಾಸವಾಗಿದ್ದ ವರ್ಮಾ ದೇಶ ವಿಭಜನೆ ಬಳಿಕ ಭಾರತಕ್ಕೆ ಬಂದಿದ್ದರು. ಸದ್ಯ ಪುಣೆ ನಿವಾಸಿಯಾಗಿರುವ ಇವರು, ಪಾಕಿಸ್ತಾನದಲ್ಲಿ ಕಳೆದ ತಮ್ಮ ಬಾಲ್ಯದ ದಿನಗಳನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದರು.
ಶ್ರೀಲಂಕಾದ ಹಾದಿಯಲ್ಲಿ ಪಾಕಿಸ್ತಾನ ಸೇರಿ 12 ರಾಷ್ಟ್ರಗಳು; ಜಗತ್ತನ್ನೇ ಆವರಿಸುತ್ತಿದೆ ಆರ್ಥಿಕ ಬಿಕ್ಕಟ್ಟಿನ ಕರಿನೆರಳು!
‘ತಮ್ಮ ಸಹೋದರರಿಗೆ ಹಲವಾರು ಮುಸ್ಲಿಂ ಗೆಳೆಯರಿದ್ದರು. ವಿಭಜನೆಯ ಮೊದಲು ಹಿಂದೂ ಮುಸ್ಲಿಂ ಎನ್ನುವ ಭೇದಭಾವ ಇರಲಿಲ್ಲ. ವಿಭಜನೆ ನಂತರ ಪಾಕಿಸ್ತಾನದ ವೀಸಾ ಸಿಗುವುದೇ ಕಷ್ಟವಾಗಿದೆ’ ಎಂದು ವೃದ್ಧೆ ಬೇಸರ ವ್ಯಕ್ತಪಡಿಸಿದ್ದರು. ಈ ವಿಡಿಯೋ ನೋಡಿ ಪಾಕಿಸ್ತಾದ ಯುವಕ ಹೈದರ್ ಎಂಬಾತ ಆಕೆಯ ಪೂರ್ವಜರ ಮನೆಯ ಚಿತ್ರಗಳನ್ನು ಕಳುಹಿಸಿದ್ದ. ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಸಚಿವೆ ಹೀನಾ ರಬ್ಬಾನಿ ಅವರಿಗೆ ಟ್ಯಾಗ್ ಪೂರ್ವಜರ ಮನೆ ಭೇಟಿಗೆ ವರ್ಮಾ ಅನುಮತಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಸದ್ಭಾವನಾ ಸೂಚಕವಾಗಿ ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಆಕೆಗೆ 3 ತಿಂಗಳ ವೀಸಾ ಒದಗಿಸಿದೆ.
ಪಾಕ್ ಗೂಢಚಾರಿ ಪತ್ರಕರ್ತನ ಜತೆ ಅನ್ಸಾರಿ ಫೋಟೋ!
ಪೋಲಿಯೋ ನಿರ್ವಹಣೆ ವೈಫಲ್ಯ: ಪೋಲಿಯೋ ನಿರ್ಮೂಲನೆಯಲ್ಲಿ ಪಾಕಿಸ್ತಾನ ಮತ್ತೊಮ್ಮೆ ತನ್ನ ವೈಫಲ್ಯವನ್ನು ತೋರಿದ್ದು, ಪ್ರಸಕ್ತ ವರ್ಷ 12 ಹೊಸ ಪ್ರಕರಣಗಳು ವರದಿಯಾಗಿವೆ. ಬುಡಕಟ್ಟು ಪ್ರದೇಶವಾದ ಉತ್ತರ ಮತ್ತು ದಕ್ಷಿಣ ವಜೀರಿಸ್ತಾನದಲ್ಲಿ ಈ ವರ್ಷ 12 ಪೋಲಿಯೊ ಪ್ರಕರಣಗಳು ದಾಖಲಾಗಿವೆ. ಪೋಲಿಯೋ ಲಸಿಕೆ ಕುರಿತು ಇರುವ ವದಂತಿಗಳಿಂದಾಗಿ ಬುಡಕಟ್ಟು ಪ್ರದೇಶಗಳಲ್ಲಿ ಜನರು ಲಸಿಕೆ ಪಡೆಯುತ್ತಿಲ್ಲ. ಲಸಿಕೆ ನೀಡುವವರ ಮೇಲೆ ದಾಳಿಯ ಪ್ರಕರಣ ಸಾಮಾನ್ಯ. ಹೀಗಾಗಿ ಪ್ರತಿ ವರ್ಷ ದೇಶದಲ್ಲಿ ಹೊಸ ಪೋಲಿಯೋ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ