ಅಬುಧಾಬಿಯಲ್ಲಿ 8000 ವರ್ಷ ಹಳೆಯ ವಿಶ್ವದ ಪುರಾತನ ಮುತ್ತು ಪತ್ತೆ!

By Kannadaprabha NewsFirst Published Oct 21, 2019, 2:09 PM IST
Highlights

8000 ವರ್ಷ ಹಳೆಯ ಮುತ್ತು ಅಬುಧಾಬಿಯಲ್ಲಿ ಪತ್ತೆ | ಮರ್ವಾ ದ್ವೀಪದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ ಪತ್ತೆ | ಅ.30 ರಂದು ಲೌವ್ರೆ ಅಬುಧಾಬಿಯ ಪ್ಯಾರಿಸ್‌ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು, ನೋಡಿ ಬನ್ನಿ! 

ಅಬುಧಾಬಿ (ಅ. 21): ಸಂಯುಕ್ತ ಅರಬ್‌ ಸಂಸ್ಥಾನದ ರಾಜಧಾನಿ ಅಬುಧಾಬಿಯ ಮರ್ವಾ ದ್ವೀಪದಲ್ಲಿ ಉತ್ಖನನ ನಡೆಸುತ್ತಿದ್ದ ವೇಳೆ 8000 ವರ್ಷ ಹಳೆಯ ಮುತ್ತು ಪತ್ತೆಯಾಗಿದೆ. ಅದನ್ನು ಅತ್ಯಂತ ಪ್ರಾಚೀನ ಮುತ್ತು ಎಂದು ಹೇಳಲಾಗಿದೆ.

ಜಾರ್ಖಂಡ್ ನಲ್ಲಿ ಹಾವಿನಿಂದ ಕಚ್ಚಿಸಕೊಳ್ಳುವ ವಿಶಿಷ್ಟ ಹಬ್ಬ!

ಮುತ್ತಿನ ಪದರವು ನವಶಿಲಾಯುಗದ ರಚನೆಯಂತಿದ್ದು, ಕ್ರಿ.ಪೂ. 5800-5600 ರಷ್ಟುಹಳೆಯದಾಗಿರಬಹುದು ಎಂದು ಅಂದಾಜಿಸಾಲಾಗಿದೆ ಎಂದು ಅಬುಧಾಬಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವಾಲಯ ಹೇಳಿದೆ. ನವಶಿಲಾಯುಗದ ಹಲವು ಕುಸಿದ ಕಲ್ಲಿನ ರಚನೆಗಳಿಂದ ಕೂಡಿದ ಮರ್ವಾ ದ್ವೀಪದಲ್ಲಿ ಮುತ್ತಿನ ಜತೆಗೆ ಪಿಂಗಾಣಿ, ಶೆಲ್ ಮತ್ತು ಕಲ್ಲಿನಿಂದ ಮಾಡಲಾದ ಮಣಿಗಳು ಮತ್ತು ಬಾಣಗಳೂ ಪತ್ತೆಯಾಗಿವೆ.

ಪತ್ತೆಯಾದ ಈ ಪ್ರಾಚೀನ ಮುತ್ತನ್ನು ಅ.30 ರಂದು ಲೌವ್ರೆ ಅಬುಧಾಬಿಯ ಪ್ಯಾರಿಸ್‌ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು. ಇದು ನಮ್ಮ ಇತ್ತೀಚಿನ ಆರ್ಥಿಕ ಮತ್ತು ಸಾಂಸ್ಕೃತಿಕ ಇತಿಹಾಸದ ಆಳವಾದ ಬೇರುಗಳ ಬಗ್ಗೆ ಸಾರುತ್ತಿವೆ ಎಂದು ಇಲಾಖೆಯ ಅಧ್ಯಕ್ಷ ಮೊಹಮ್ಮದ್‌ ಅಲ್ -ಮುಬಾರಕ್‌ ಹೇಳಿದ್ದಾರೆ.

click me!