
ವಿಶ್ವಸಂಸ್ಥೆ(ಜೂ.27): 2019ರ ಅ.31ರಂದು ಬ್ರೆಜಿಲ್‌ನಲ್ಲಿ ಬಡಿದಿದ್ದ 700 ಕಿ.ಮೀ. ದೂರದವರೆಗೆ ಚಾಚಿದ್ದ ಮಿಂಚು ‘ವಿಶ್ವದ ಅತಿ ದೀರ್ಘದೂರದ ಮಿಂಚು’ ಎಂಬ ದಾಖಲೆಗೆ ಪಾತ್ರವಾಗಿದೆ. ಇದನ್ನು ಕರ್ನಾಟಕಕ್ಕೆ ಹೋಲಿಸಿ ಹೇಳುವುದಾದರೆ ಅಂದಾಜು ಬೆಂಗಳೂರಿನಿಂದ ಬೀದರ್‌ವರೆಗಿನ ದೂರದಷ್ಟು. ಈ ಮಿಂಚು ಕಂಡಿದ್ದು ಕೇವಲ 1 ಸೆಕೆಂಡಿನಷ್ಟು.
ಮಳೆಗಾಲದಲ್ಲೂ ಸುಡು ಸುಡು ಬಿಸಿಲು: ಕೈ ಕೊಟ್ಟ ಮುಂಗಾರು, ಕಂಗಾಲಾದ ರೈತರು!
ಈ ಹಿಂದೆ 2007ರ ಜೂನ್‌ನಲ್ಲಿ ಅಮೆರಿಕದ ಓಕ್ಲಾಹಾಮಾದಲ್ಲಿ 321 ಕಿ.ಮೀ. ದೂರದಷ್ಟುಮಿಂಚು ಚಾಚಿತ್ತು. ಇದೇ ವೇಳೆ, 2019ರ ಮಾಚ್‌ರ್ 4ರಂದು ಉತ್ತರ ಅರ್ಜೆಂಟೀನಾದಲ್ಲಿ ಅರ್ಜೆಂಟೀನಾದಲ್ಲಿ 16.73 ಸೆಕೆಂಡುಗಳಷ್ಟುಅವಧಿಯವರೆಗೆ ಕಾಣಿಸಿದ ಮಿಂಚು ವಿಶ್ವದ ಅತಿ ‘ದೀರ್ಘಾವಧಿ’ಯ ಮಿಂಚು ಎಂಬ ದಾಖಲೆ ಬರೆದಿದೆ.
ವಿಶ್ವಸಂಸ್ಥೆಯ ‘ವಿಶ್ವ ಹವಾಮಾನ ಸಂಸ್ಥೆ’ಯು ಈ ದಾಖಲೆಯ ಮಿಂಚುಗಳನ್ನು ಗುರುತಿಸಿದೆ. ದಕ್ಷಿಣ ಫ್ರಾನ್ಸ್‌ನಲ್ಲಿ 2012ರ ಆಗಸ್ಟ್‌ನಲ್ಲಿ 7.74 ಸೆಕೆಂಡಿನಷ್ಟುಒಂದೇ ಮಿಂಚು ಕಾಣಿಸಿತ್ತು. ಇದು ಈವರೆಗಿನ ದಾಖಲೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ