66000 ಭಾರತೀಯರಿಗೆ 2022ರಲ್ಲಿ ಅಮೆರಿಕದ ಪೌರತ್ವ: ಸರದಿಯಲ್ಲಿಇನ್ನೂ 2.9 ಲಕ್ಷ ಜನ

By Kannadaprabha NewsFirst Published Apr 23, 2024, 10:46 AM IST
Highlights

2022ನೇ ಸಾಲಿನಲ್ಲಿ ಭಾರತೀಯ ಮೂಲದ 65,960 ಮಂದಿಗೆ ಅಮೆರಿಕ ಪೌರತ್ವದ ಹಕ್ಕು ಸಿಕ್ಕಿದೆ. ಈ ಮೂಲಕ ಅಮೆರಿಕದ ಪೌರತ್ವ ಪಡೆದವರಲ್ಲಿ ಮೆಕ್ಸಿಕೋ (1,28,878) ಬಳಿಕ ಎರಡನೇ ಸ್ಥಾನದಲ್ಲಿ ಭಾರತ ಇದೆ ಎಂದು ಸಿಆರ್‌ಎಸ್‌ ವರದಿ ತಿಳಿಸಿದೆ. 

ವಾಷಿಂಗ್ಟನ್‌: 2022ನೇ ಸಾಲಿನಲ್ಲಿ ಭಾರತೀಯ ಮೂಲದ 65,960 ಮಂದಿಗೆ ಅಮೆರಿಕ ಪೌರತ್ವದ ಹಕ್ಕು ಸಿಕ್ಕಿದೆ. ಈ ಮೂಲಕ ಅಮೆರಿಕದ ಪೌರತ್ವ ಪಡೆದವರಲ್ಲಿ ಮೆಕ್ಸಿಕೋ (1,28,878) ಬಳಿಕ ಎರಡನೇ ಸ್ಥಾನದಲ್ಲಿದೆ ಎಂದು ಸಿಆರ್‌ಎಸ್‌ ವರದಿ ತಿಳಿಸಿದೆ. 2022ರಲ್ಲಿ ಅಮೆರಿಕ ಸರ್ಕಾರ ಒಟ್ಟು 9,69,380 ವಿದೇಶಿಯರಿಗೆ ಪೌರತ್ವ ನೀಡಿದೆ. ಈ ಪೈಕಿ ಮೆಕ್ಸಿಕೋ, ಭಾರತ, ಫಿಲಿಪ್ಪೀನ್ಸ್‌, ಕ್ಯೂಬಾ, ಡೊಮಿನಿಕಾ ರಿಪಬ್ಲಿಕ್‌, ವಿಯೆಟ್ನಾಂ ಮತ್ತು ಚೀನಾ ದೇಶದ ನಾಗರಿಕರು ಕ್ರಮವಾಗಿ ಟಾಪ್‌ ಸ್ಥಾನದಲ್ಲಿದ್ದಾರೆ.

ಇದರ ಜೊತೆಗೆ 2023ರಲ್ಲಿ 28,31,330 ಭಾರತೀಯ ಮೂಲದ ಪೋಷಕರಿಗೆ ನವಜಾತ ಶಿಶುಗಳು ಜನಿಸಿದ್ದು, ಸ್ವಾಭಾವಿಕವಾಗಿ ಅಮೆರಿಕದ ಪ್ರಜೆಗಳಾಗಿವೆ. ಈ ಸಾಲಿನಲ್ಲಿ ಮೆಕ್ಸಿಕೋ ಮೊದಲ ಸಾಲಿನಲ್ಲಿದ್ದು, ಭಾರತ ಎರಡನೇ ಹಾಗೂ ಚೀನಾ ಮೂರನೇ ಸ್ಥಾನದಲ್ಲಿದೆ. ಅಲ್ಲದೆ 2023ಕ್ಕೆ ಅನ್ವಯವಾಗುವಂತೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಪೈಕಿ ಇನ್ನೂ 2.9 ಲಕ್ಷ ಮಂದಿ ಪೌರತ್ವಕ್ಕಾಗಿ ಕಾಯುತ್ತಿದ್ದಾರೆ ಎಂದೂ ವರದಿ ತಿಳಿಸಿದೆ.

ದೇಶ ವಿಭಜನೆ ಆಗಲೇ ಇಲ್ಲ ಎಂಬಂತೆ ವಿಶ್ವ ಪ್ರತಿಕ್ರಿಯಿಸುತ್ತಿದೆ, ಅಮೆರಿಕದ ಸಿಎಎ ಹೇಳಿಕೆಗೆ ಜೈಶಂಕರ್ ತಿರುಗೇಟು

ಪೌರತ್ವ ಕಾಯ್ದೆ ದೇಶದ ಮುಸ್ಲಿಮರ ಪೌರತ್ವ ಕಿತ್ತುಕೊಳ್ಳುತ್ತಾ..?

 

click me!