ಕುವೈತ್ ಮಸೂದೆ‌: 50 ಸಾವಿರ ಕನ್ನಡಿಗರ ಉದ್ಯೋಗಕ್ಕೆ ಕುತ್ತು!

By Kannadaprabha News  |  First Published Jul 7, 2020, 7:14 AM IST

ಕುವೈತ್‌: 50 ಸಾವಿರ ಕನ್ನಡಿಗರ ಉದ್ಯೋಗಕ್ಕೆ ಕುತ್ತು| ವಲಸಿಗರ ಪ್ರಮಾಣ ಇಳಿಸಲು ಕುವೈತ್‌ ಮಸೂದೆ| ಭಾರತದ 8 ಲಕ್ಷ ಜನಕ್ಕೆ ಉದ್ಯೋಗ ಅಭದ್ರತೆ


ಸಂದೀಪ್‌ ವಾಗ್ಲೆ

ಮಂಗಳೂರು(ಜು.07): ಕೊರೋನಾ ಸಂಕಷ್ಟದ ಕಾರಣಕ್ಕಾಗಿ ಗಲ್‌್ಫ ದೇಶಗಳಲ್ಲಿದ್ದ ಸಾವಿರಾರು ಕನ್ನಡಿಗರು ಉದ್ಯೋಗ ಕಳೆದುಕೊಂಡು ತಾಯ್ನೆಲಕ್ಕೆ ಹಿಂದುರುಗುತ್ತಿರುವ ಸಂದರ್ಭದಲ್ಲಿಯೇ ಕುವೈತ್‌ನಲ್ಲಿರುವ 50 ಸಾವಿರಕ್ಕೂ ಅಧಿಕ ಕನ್ನಡಿಗರು ಇದೀಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಕುವೈಟ್‌ ಇದೀಗ ತನ್ನಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಉದ್ಯೋಗಿಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಲು ಉದ್ದೇಶಿಸಿದೆ. ಕುವೈತ್‌ನ ರಾಷ್ಟ್ರೀಯ ಅಸೆಂಬ್ಲಿಯ ಕಾನೂನು ಮತ್ತು ಶಾಸಕಾಂಗ ಸಮಿತಿಯು ಈ ಕುರಿತ ಕರಡು ಮಸೂದೆಗೆ ಅನುಮೋದನೆ ನೀಡಿದ್ದು, ಇದು ಜಾರಿಯಾದರೆ ಕುವೈಟಿಗರ ಜನಸಂಖ್ಯೆಯ ಶೇ.15ರಷ್ಟುಭಾರತೀಯರು ಮಾತ್ರ ಅಲ್ಲಿರಲು ಸಾಧ್ಯ.

Latest Videos

undefined

ಈ ಕರಡು ಮಸೂದೆಯಲ್ಲಿ ಒಂದೊಂದು ದೇಶಕ್ಕೆ ಒಂದೊಂದು ಕೋಟಾ ನೀಡಲಾಗಿದ್ದು ಭಾರತಕ್ಕೆ ಶೇ.15 ನಿಗದಿಗೊಳಿಸಿದೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ದಾಖಲೆಗಳ ಪ್ರಕಾರ ಅಲ್ಲಿ ಉದ್ಯೋಗ ಮಾಡಿಕೊಂಡಿರುವ ಭಾರತೀಯರ ಸಂಖ್ಯೆ 9.5 ಲಕ್ಷ. ಅಂದರೆ ಬರೋಬ್ಬರಿ 7.40 ಲಕ್ಷಕ್ಕೂ ಅಧಿಕ ಭಾರತೀಯರು ಉದ್ಯೋಗ ಕಳೆದುಕೊಳ್ಳುವುದಂತೂ ನಿಶ್ಚಿತ ಎನ್ನಲಾಗಿದೆ.

ಹೊಸ ಮಸೂದೆ ಶಾಕ್‌: 8 ಲಕ್ಷ ಭಾರತೀಯರು ಕುವೈತ್‌ನಿಂದ ಹೊರಕ್ಕೆ?

ಅವರಲ್ಲಿ ಏನಿಲ್ಲವೆಂದರೂ 50 ಸಾವಿರದಷ್ಟುಕನ್ನಡಿಗರಿದ್ದಾರೆ. ಟೆಕ್ನೀಶಿಯನ್‌ಗಳು ಇತ್ಯಾದಿ ಕೌಶಲ್ಯಾಧಾರಿತ ಉದ್ಯೋಗದಲ್ಲಿ ಅತಿ ಹೆಚ್ಚು ಮಂದಿ ತೊಡಗಿಕೊಂಡಿದ್ದು, ಸೇಲ್ಸ್‌, ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಲ್ಲೂ ಸಾವಿರಾರು ಮಂದಿ ಉದ್ಯೋಗ ಮಾಡಿಕೊಂಡಿದ್ದಾರೆ. ಭಾರತೀಯ ವೈದ್ಯರು, ಎಂಜಿನಿಯರ್‌ಗಳು ಕೂಡ ದೊಡ್ಡ ಸಂಖ್ಯೆಯಲ್ಲೇ ಇದ್ದಾರೆ. ಮಸೂದೆಯ ತೂಗುಗತ್ತಿ ಈಗ ಇವರೆಲ್ಲರ ಮೇಲೆ ಬಿದ್ದಿದ್ದು, ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಉದ್ಯೋಗಾಕಾಂಕ್ಷಿಗಳಿಗೆ ಬಿಗ್ ಶಾಕ್: ಕಲ್ಯಾಣ ಕರ್ನಾಟಕದ ಎಲ್ಲಾ ನೇಮಕಾತಿ ಭರ್ತಿಗೆ ತಡೆ

ರಾಜ್ಯಕ್ಕೆ ಮರಳಿದ್ದು 500 ಮಂದಿ ಮಾತ್ರ:

ಕೊರೋನಾದಿಂದಾಗಿ ಕುವೈಟ್‌ನಲ್ಲಿ ಉದ್ಯೋಗವಿಲ್ಲದೆ ಸಂಕಷ್ಟದಲ್ಲಿದ್ದ ಸುಮಾರು 85 ಸಾವಿರಕ್ಕೂ ಅಧಿಕ ಭಾರತೀಯರು ಈಗಾಗಲೇ ವಾಪಸ್‌ ತಾಯ್ನಾಡಿಗೆ ಮರಳಿದ್ದಾರೆ. ಕರ್ನಾಟಕಕ್ಕೆ ಕೇವಲ ಮೂರು ವಿಮಾನಗಳು ಮಾತ್ರ ಬಂದಿದ್ದು, ಸುಮಾರು 500ರಷ್ಟುಮಂದಿಯಷ್ಟೆಆಗಮಿಸಿದ್ದಾರೆ. ಇನ್ನೂ ಸಾವಿರಾರು ಮಂದಿ ಆಗಮಿಸುವ ನಿರೀಕ್ಷೆಯಿದೆ. ಕೊರೋನಾ ಸಂಕಷ್ಟಮುಗಿದ ಬಳಿಕ ವಾಪಸ್‌ ಅಲ್ಲಿಗೆ ತೆರಳುವ ಆಸೆಯಲ್ಲಿದ್ದಾರೆ. ಮಸೂದೆ ಜಾರಿಯಾದರೆ ವಾಪಸ್‌ ಹೋಗುವುದಂತೂ ದೂರದ ಮಾತಾಗಿದೆ.

click me!