ಟ್ರಂಪ್‌ ಸೇವಿಸಿದ್ದ ಭಾರತದ ಮಾತ್ರೆ ಇನ್ನು ಕೊರೋನಾ ರೋಗಿಗಳಿಗೆ ವಿತರಣೆ ಇಲ್ಲ!

By Suvarna NewsFirst Published Jul 6, 2020, 4:39 PM IST
Highlights

ಟ್ರಂಪ್‌ ಸೇವಿಸಿದ್ದ ಭಾರತದ ಮಾತ್ರೆ ಇನ್ನು ಕೊರೋನಾ ರೋಗಿಗಳಿಗೆ ವಿತರಣೆ ಇಲ್ಲ| ಪ್ರಯೋಗ ಸ್ಥಗಿತಗೊಳಿಸಿದ ಡಬ್ಲ್ಯುಎಚ್‌ಒ|  ಅದ್ಭುತ ಔಷಧ ಎಂದು ಬಣ್ಣಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಸೇವಿಸಿದ್ದ ಮಲೇರಿಯಾ ಮಾತ್ರೆ

ಜಿನೆವಾ(ಜು.06): ಭಾರತದಲ್ಲಿ ಅಧಿಕವಾಗಿ ಉತ್ಪಾದನೆಯಾಗುವ, ಅದ್ಭುತ ಔಷಧ ಎಂದು ಬಣ್ಣಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಸೇವಿಸಿದ್ದ ಮಲೇರಿಯಾ ಮಾತ್ರೆಯಾದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಅನ್ನು ಕೊರೋನಾ ರೋಗಿಗಳ ಮೇಲೆ ಪ್ರಯೋಗಿಸುವುದನ್ನು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ನಿಲ್ಲಿಸಿದೆ. ಇವುಗಳನ್ನು ಕೊರೋನಾ ಸೋಂಕಿತರಿಗೆ ನೀಡಿದರೂ ಮರಣ ಪ್ರಮಾಣ ಕಡಿಮೆ ಆಗದ ಹಿನ್ನೆಲೆಯಲ್ಲಿ ಪ್ರಯೋಗವನ್ನು ಸ್ಥಗಿತಗೊಳಿಸಿದೆ.

'ಕೊರೋನಾ ಬಾರದಿರಲಿ ಎಂದು ಭಾರತ ಕೊಟ್ಟ ಮಲೇರಿಯಾ ಮಾತ್ರೆ ನುಂಗುತ್ತಿದ್ದೇನೆ'

‘ಹೈಡ್ರೋಕ್ಸಿಕ್ಲೋರೋಕ್ವಿನ್‌ ಹಾಗೂ ಎಚ್‌ಐವಿ ಔಷಧವಾದ ಲಾಪಿನಾವಿರ್‌/ರಿಟೊನಾವಿರ್‌ಗಳನ್ನು ಕೊರೋನಾ ರೋಗಿಗಳ ಮೇಲೆ ಪ್ರಯೋಗಿಸಿದಾಗ ಮರಣ ಪ್ರಮಾಣವೇನೂ ತಗ್ಗಿಲ್ಲ. ಹೀಗಾಗಿ ಆರೋಗ್ಯ ಸಂಸ್ಥೆಯ ಔಷಧ ಉಸ್ತುವಾರಿ ಸಮಿತಿ ಮಾಡಿದ ಶಿಫಾರಸಿನ ಅನ್ವಯ ಈ ಔಷಧಗಳ ಪರೀಕ್ಷಾರ್ಥ ಬಳಕೆಯನ್ನು ನಿಲ್ಲಿಸಲಾಗಿದೆ’ ಎಂದು ಡಬ್ಲ್ಯುಎಚ್‌ಒ ಪ್ರಕಟಣೆ ತಿಳಿಸಿದೆ. ಆದರೆ ಕೊರೋನಾಗೆ ಔಷಧ ಕಂಡುಹಿಡಿಯಲು ನಡೆದಿರುವ ಆರೋಗ್ಯ ಸಂಸ್ಥೆಯ ಯತ್ನಗಳ ಮೇಲೇನೂ ಇದು ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮೋದಿ ಕಳುಹಿಸಿದ ಮಾತ್ರೆ ಸೇವಿಸಿ ಹುಷಾರಾಗಿದ್ದಾರೆ ಟ್ರಂಪ್: ಶ್ವೇತ ಭವನ

ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆಯನ್ನು ಭಾರತದಲ್ಲಿ ಮಲೇರಿಯಾ ನಿಗ್ರಹಕ್ಕೆ ಬಳಸಲಾಗುತ್ತಿದೆ. ಇದನ್ನು ಕೊರೋನಾ ರೋಗಿಗಳ ಮೇಲೆ ಬಳಸಿದಾಗ ಸಕಾರಾತ್ಮಕ ಫಲಿತಾಂಶ ಕಂಡುಬಂದಿತ್ತು ಎನ್ನಲಾಗಿತ್ತು. ಹೀಗಾಗಿಯೇ ಭಾರತದಿಂದ ಭಾರೀ ಪ್ರಮಾಣದಲ್ಲಿ ಈ ಮಾತ್ರೆಗಳನ್ನು ಅಮೆರಿಕ ಖರೀದಿಸಿತ್ತು.

click me!