Whisky Auction 32 ವರ್ಷ ಹಳೆಯ, 311 ಲೀಟರ್, ವಿಶ್ವದ ಅತೀ ದೊಡ್ಡ ವಿಸ್ಕಿ ಮೇ.25ಕ್ಕೆ ಹರಾಜು!

Published : May 02, 2022, 05:28 PM IST
Whisky Auction 32 ವರ್ಷ ಹಳೆಯ, 311 ಲೀಟರ್, ವಿಶ್ವದ ಅತೀ ದೊಡ್ಡ ವಿಸ್ಕಿ ಮೇ.25ಕ್ಕೆ ಹರಾಜು!

ಸಾರಾಂಶ

ವಿಶ್ವದ ಅತೀ ದೊಡ್ಡ ಸ್ಕಾಚ್ ವಿಸ್ಕಿ ಬಾಟಲ್ 5.11 ಅಡಿ ಎತ್ತರದ ಬಾಟಲ್, 311 ಲೀಟರ್ ವಿಸ್ಕಿ 14 ಕೋಟಿ ರೂ ದಾಖಲೆ ಮುರಿಯಲು ಅಖಾಡ ರೆಡಿ

ಲಂಡನ್(ಮೇ.02): ಇದು ವಿಶ್ವದ ಅತೀ ದೊಡ್ಡ ವಿಸ್ಕಿ ಬಾಟಲ್, ಬರೋಬ್ಬರಿ 5.11 ಅಡಿ ಎತ್ತರವಿರುವು ಈ ವಿಸ್ಕಿ ಬಾಟಲಿಯಲ್ಲಿ ಬರೋಬ್ಬರಿ 311 ಲೀಟರ್ ಸ್ಕಾಚ್ ವಿಸ್ಕಿ ತುಂಬಲಾಗಿದೆ. 32 ವರ್ಷಗಳ ಹಳೆಯ ವಿಸ್ಕಿ ಇದಾಗಿದೆ. ಇದೀಗ ಈ ಅಪರೂಪದ, ವಿಶ್ವದ ಅತೀ ದೊಡ್ಡ ಸ್ಕಾಚ್ ವಿಸ್ಕಿ ಬಾಟಲ್ ಹರಾಜಿಗೆ ಇಡಲಾಗಿದೆ. ಮೇ. 25 ರಂದು ಘಟಾನುಘಟಿಗಳು ಈ ಬಾಟಲ್ ಬಿಡ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಯುನೈಟೆಡ್ ಕಿಂಗ್ಡಮ್ ಎಡಿನ್‌ಬರ್ಗ್‌ನಲ್ಲಿ ಈ ವಿಸ್ಕಿ ಹರಾಜಿಗೆ ಇಡಲಾಗಿದೆ. ಈಗಾಗಲೇ ಆನ್‌ಲೈನ್ ಮೂಲಕ ನೋಂದಣಿ ಕಾರ್ಯ ನಡೆಯುತ್ತಿದೆ. ಮೇ.25 ರಂದು ಹರಾಜು ನಡೆಯಲಿದೆ. ಈಗಾಗಲೇ ಹಲವರು ನೋಂದಣಿ ಮಾಡಿಕೊಂಡಿದ್ದಾರೆ. ವಿಶ್ವದ ಯಾವುದೇ ಪ್ರದೇಶದಿಂದ ಈ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆಯಲಿದೆ. ಇಷ್ಟೇ ಅಲ್ಲ ಇಡೀ ಜಗತ್ತೇ ಇದೀಗ ಈ ವಿಸ್ಕಿ ಹರಾಜಿಗಾಗಿ ಕಾದುಕುಳಿತಿದೆ.

ವಿಸ್ಕಿಯನ್ನು ಐಸ್ ಹಾಕಿ ಕುಡಿಯಬಾರದು ಅಂತಾರಲ್ಲ ಯಾಕೆ ?

311 ಲೀಟರ್ ವಿಸ್ಕಿ ಅಂದರೆ 750 ಎಂಎಲ್ ನ 444 ಬಾಟಲ್‌ಗೆ ಸಮ. 32 ವರ್ಷ ಹಳೆಯ ಈ ವಿಸ್ಕಿಯನ್ನು ದಿನಕ್ಕೊಂದು ಪೆಗ್ ಹಾಕಿದರೆ ಮುಂದಿನ 32 ವರ್ಷ ಸವಿಯಬಹುದು. ಹರಾಜಿನಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಈ ಅತೀ ದೊಡ್ಡ ಸ್ಕಾಚ್ ವಿಸ್ಕಿ ಮುರಿಯಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ನೀಜವಾಗುವು ಸಾಧ್ಯತೆ ಇದೆ. 

ಈಗಾಗಲೇ ಅತೀ ದುಬಾರಿ ವಿಸ್ಕಿ ಹರಾಜು ದಾಖಲೆಯೊಂದು ನಿರ್ಮಾಣವಾಗಿದೆ.  ಈ ಹಿಂದೆ ನಡೆದ ಅಪರೂಪದ ಹಾಗೂ ಅತೀ ಹಳೆಯ ವಿಸ್ಕಿ 1.9 ಮಿಲಿಯನ್ ಅಮೆರಿಕನ್ ಡಾಲರ್, ಇಂದಿನ ರೂಪಾಯಿಗಳಲ್ಲಿ ಸರಿಸುಮಾರು 14 ಕೋಟಿ ರೂಪಾಯಿಗೆ ಹರಾಜಾಗಿತ್ತು. ಇದೀಗ ತಜ್ಞರ ಪ್ರಕಾರ ವಿಶ್ವದ ಅತೀ ದೊಡ್ಡ ಸ್ಕಾಚ್ ವಿಸ್ಕಿ ಈ ದಾಖಲೆಯನ್ನು ಮುರಿಯಲಿದೆ. ಸರಿಸುಮಾರು 15 ರಿಂದ 20 ಕೋಟಿ ರೂಪಾಯಿಗೆ ಈ ವಿಸ್ಕಿ ಹರಾಜಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅತೀ ದೊಡ್ಡ ವಿಸಿ ಹರಾಜಿನಿಂದ ಬಂದ ಹಣದಲ್ಲಿ ಶೇಕಡಾ 25 ರಷ್ಟು ಹಣವನ್ನು ಚಾರಿಟಿಗೆ ನೀಡಲಾಗುವುದು ಎಂದು ಘೋಷಿಸಲಾಗಿದೆ. ಈ ಸ್ಕಾಚ್ ವಿಸ್ಕಿ ಬಾಟಲ್‌ಗೆ ದಿ ಇಂಟ್ರೆಪಿಡ್ ಎಂದು ಹೆಸರಿಡಲಾಗಿದೆ. ಈ ವಿಸ್ಕಿ ಮೃದುವಾಗಿದೆ. ಬ್ಲೆಂಡೆಡ್ ಸ್ಕಾಚ್ ಒಟ್ಟಾರೆ ಉತ್ತಮ ರುಚಿ ಹೊಂದಿದೆ ಎಂದು ಆಯೋಜಕರು ಹೇಳಿದ್ದಾರೆ.

Good News: ಮದ್ಯ ಪ್ರಿಯರೇ ಇಲ್ ಕೇಳಿ, ಸ್ಕಾಚ್ ವಿಸ್ಕಿ ಮೇಲೆ ಶೇ.50 ಸುಂಕ ಕಟ್!

ಬಿಯರ್‌ ಬ್ರ್ಯಾಂಡ್‌ನಲ್ಲಿ ಧೋನಿ ಹಣ ಹೂಡಿಕೆ
ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್‌ ಕಿಂಗ್‌್ಸ ಮಾಜಿ ನಾಯಕ ಎಂ.ಎಸ್‌.ಧೋನಿ ‘ಕಾಪ್ಟರ್‌ 7’ ಹೆಸರಿನ ಬಿಯರ್‌ ಮಾರುಕಟ್ಟೆಗೆ ತಂದಿದ್ದಾರೆ. ಅಕಾರ್ಡ್‌ ಸಂಸ್ಥೆ ಜೊತೆ ಕೈಜೋಡಿಸಿರುವ ಧೋನಿ, ಬಿಯರ್‌ ವ್ಯಾಪಾರದಲ್ಲಿ ಪಾಲುದಾರಿಕೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಕಾಪ್ಟರ್‌ 7 ಬ್ರ್ಯಾಂಡ್‌ ಬಿಯರ್‌ಗಳು ಈಗಾಗಲೇ ಬೆಂಗಳೂರು, ಮುಂಬೈ, ಗೋವಾ, ಪಂಜಾಬ್‌, ಜಾರ್ಖಂಡ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಚೆನ್ನೈನಲ್ಲಿ ಅಧಿಕೃತವಾಗಿ ಬಿಡುಗಡೆಗೊಳ್ಳಲಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು