International Children's Peace Prize ರೇಸ್‌ನಲ್ಲಿ ಈ ಬಾರಿ ಭಾರತದ 3 ಸಾಧಕರು!

By Kannadaprabha NewsFirst Published Nov 5, 2021, 10:29 AM IST
Highlights

*ಭಾರತದ ಮೂರು ಸಾಧಕರು ಮಕ್ಕಳ ಶಾಂತಿ ಪ್ರಶಸ್ತಿ ಫೈನಲ್‌ಗೆ
*ಕೇರಳದ ಅಂಗವಿಕಲ ಬಾಲಕ ಮುಹಮ್ಮದ್‌ ಆಸಿಮ್‌ ಶಾರ್ಟ್‌ಲಿಸ್ಟ್
*ದೆಹಲಿಯ ವಿಹಾನ್‌ ಮತ್ತು ನವ್  ಅಗರ್ವಾಲ್‌ ಆಯ್ಕೆ
*ನೊಬೆಲ್‌ ವಿಜೇತ ಕೈಲಾಶ್‌ ಸತ್ಯಾರ್ಥಿಯವರಿಂದ ಪ್ರಶಸ್ತಿ ಪ್ರದಾನ

ನವದೆಹಲಿ (ನ. 5): 2021ನೇ ಸಾಲಿನ ಅಂತಾರಾಷ್ಟ್ರೀಯ ಮಕ್ಕಳ ಶಾಂತಿ (International Children's Peace Prize) ಪ್ರಶಸ್ತಿಗೆ ಭಾರತದ ಮೂವರು ಮಕ್ಕಳ ( ಓರ್ವ ಅಂಗವಿಕಲ ಬಾಲಕ ಮತ್ತು ಇಬ್ಬರು ಸಹೋದರರು) ಹೆಸರನ್ನು ಶಾರ್ಟ್‌ಲಿಸ್ಟ್‌ ಮಾಡಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಕ್ಕಳ ಹಕ್ಕುಗಳ ಪ್ರತಿಷ್ಠಾನ ಘೋಷಿಸಿದೆ. ದೌರ್ಬಲ್ಯದ ನಡುವೆಯೂ ಶಿಕ್ಷಣವನ್ನು ಮುಂದುವರೆಸುತ್ತಾ ಮಾದರಿಯಾಗಿರುವ ಕೇರಳದ ಅಂಗವಿಕಲ ಬಾಲಕ ಮುಹಮ್ಮದ್‌ ಆಸಿಮ್‌ (15) (Muhammad Aasim), ಮಾಲಿನ್ಯ ಕಡಿಮೆ ಮಾಡಲು ಬದ್ಧತೆ ತೋರುತ್ತಿರುವ ದೆಹಲಿಯ ವಿಹಾನ್‌ (17) (Vihaan) ಮತ್ತು ನವ್ ಅಗರ್ವಾಲ್‌ರನ್ನು (14)‌ (Nav Agarwal) ಶಾರ್ಟ್‌ಲಿಸ್ಟ್ ಮಾಡಲಾಗಿದೆ. ಜತೆಗೆ ಆಹಾರ ಅನ್ಯಾಯದ ವಿರುದ್ಧ ಹೋರಾಟ ನೆಡೆಸಿದ ಇಂಗ್ಲೆಂಡ್‌ನಲ್ಲಿ (England) ವಾಸಿಸುತ್ತಿರುವ ಇಥಿಯೋಪಿಯನ್ ( Ethiopian) ಪೋಷಕರಿಗೆ ಜನಿಸಿದ 18 ವರ್ಷ ವಯಸ್ಸಿನ ಹುಡುಗಿ ಕ್ರಿಸ್ಟಿನಾ ಅಡಾನೆ (Christina Adane) ಅವರು ಹೆಸರನ್ನು ಕೂಡ  ಶಾರ್ಟ್‌ಲಿಸ್ಟ್‌ ಮಾಡಲಾಗಿದೆ. ಈ ಮೂಲಕ ಒಟ್ಟು ಮೂವರು ಫೈನಲಿಸ್ಟ್‌ಗಳನ್ನು ತಜ್ಞರ ಮಿತಿ ಆಯ್ಕೆ ಮಾಡಿದೆ.

ಮಕ್ಕಳ ಕೊವ್ಯಾಕ್ಸಿನ್‌ ಲಸಿಕೆಗೂ ತ್ವರಿತ ಅನುಮತಿ : ಸೌಮ್ಯ ಸ್ವಾಮಿನಾಥನ್‌

9 ದೇಶಗಳ 169 ನಾಮನಿರ್ದೇಶನಗಳಲ್ಲಿ ಈ ಮೂವರು ಫೈನಲಿಸ್ಟ್‌ಗಳನ್ನು (Finalist) ತಜ್ಞರ ಸಮಿತಿ ಶಾರ್ಟ್‌ಲಿಸ್ಟ್‌ ಮಾಡಿದೆ. ಪ್ರತಿ ವರ್ಷ ನೊಬೆಲ್‌ ಪ್ರಶಸ್ತಿ ವಿಜೇತರಿಂದ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಸಕ್ತ ವರ್ಷ ನೊಬೆಲ್‌ ವಿಜೇತ ಕೈಲಾಶ್‌ ಸತ್ಯಾರ್ಥಿ (Kailash Satyarthi) ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿಯು 1 ಲಕ್ಷ ಯುರೋಗಳನ್ನು ಒಳಗೊಂಡಿರಲಿದೆ. 

ಕನ್ನಡ ಶಾಲೆಯಲ್ಲಿ ತಮಿಳು ಮಕ್ಕಳು : ರಾಜ್ಯ ಗಡಿ ಭಾಗದಲ್ಲಿರುವ ಶಾಲೆ

"ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯ ಪೋಷಕನಾಗಿ ಗಮನಿಸಿದ ಹಾಗೆ ನನ್ನ 13 ವರ್ಷಗಳಲ್ಲಿ ಈ ವರ್ಷದ ಫೈನಲಿಸ್ಟ್‌ಗಳು ಪ್ರಶಸ್ತಿಗೆ ಹೆಚ್ಚಿನ ಅರ್ಹರು ಅನ್ನಿಸುತ್ತದೆ. ಈ ಪ್ರಶಸ್ತಿಯೂ ಅನೇಕ ಪ್ರಸಿದ್ಧ ವಿಜೇತರನ್ನು ಹೊಂದಿರುವ ವಿಶ್ವದ ಯುವ ಜನತೆಗೋಸ್ಜರವೇ ಇರುವ ಬಹುಮಾನ. ಈ ವರ್ಷದ ಫೈನಲಿಸ್ಟ್‌ಗಳು ಯುವಜನಾಂಗಕ್ಕೂ ಹಾಗೂ ಎಲ್ಲರಿಗೂ ಉತ್ತಮ ನಿದರ್ಶನ. ಈ ವಿಜೇತರು ತಮ್ಮ ಮೌಲ್ಯಗಳು ಮತ್ತು ನಿರ್ಣಯಗಳ ಮೂಲಕ, ಪ್ರಪಂಚದಾದ್ಯಂತ ಇತರರ ಹಕ್ಕುಗಳ ಬಗ್ಗೆ ಹೋರಾಟ ನಡೆಸಲು ಮಕ್ಕಳು ಏನನ್ನೆಲ್ಲಾ ಸಾಧಿಸಬಹುದು ಎಂಬುದನ್ನು ತೋರಿಸಿದ್ದಾರೆ." ಎಂದು  ಐಸಿಪಿ (ICP) ಪ್ರಶಸ್ತಿಯ ಪೋಷಕ ಆರ್ಚ್‌ಬಿಷಪ್ ಡೆಸ್ಮಂಡ್ ಟುಟು (Archbishop Desmond Tutu) ಹೇಳಿದ್ದಾರೆ.

Karnataka: ಶಾಲೆಗೆ ಬಾರದ ವಿದ್ಯಾರ್ಥಿಗಳ ಕರೆತನ್ನಿ, ಸ್ಕೂಲ್‌ ಮುಖವನ್ನೇ ನೋಡದ ಸಾವಿರಾರು ಮಕ್ಳು..!

ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 13 ರಂದು ಹೇಗ್‌ನ ಹಾಲ್ ಆಫ್ ನೈಟ್ಸ್‌ನಲ್ಲಿ ನಡೆಯಲಿದೆ ಜತಗೆ ವಿಜೇತರ ಸಂದೇಶವು ಜಾಗತಿಕ ಪ್ರೇಕ್ಷಕರನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಲೈವ್‌ಸ್ಟ್ರೀಮ್ (Live Stream) ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯನ್ನು 2005 ರಲ್ಲಿ ಮಿಖಾಯಿಲ್ ಗೋರ್ಬಚೇವ್ (Mikhail Gorbachev) ಅವರ ಅಧ್ಯಕ್ಷತೆಯಲ್ಲಿ ರೋಮ್‌ನಲ್ಲಿ ನಡೆದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರ (World Summit of Nobel Peace laureates) ವಿಶ್ವ ಶೃಂಗಸಭೆಯಲ್ಲಿ ಪ್ರಾರಂಭಿಸಲಾಯಿತು. ಮಕ್ಕಳ ಹಕ್ಕುಗಳನ್ನು ಪ್ರತಿಪಾದಿಸಲು ಮತ್ತು ಅನಾಥರು, ಬಾಲ ಕಾರ್ಮಿಕರು ಮತ್ತು HIV/AIDS ಪೀಡಿತ ಮಕ್ಕಳ ಹಾಗೂ ದುರ್ಬಲ ಮಕ್ಕಳ ಪರಿಸ್ಥಿತಿಯನ್ನು ಸುಧಾರಿಸಲು ಮಹತ್ವದ ಕೊಡುಗೆ ನೀಡಿದ ಮಕ್ಕಳಿಗೆ ಈ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುತ್ತದೆ.

click me!