ಪೋಲೆಂಡ್‌ ಬಾವಿಯಲ್ಲಿ ಹಿಟ್ಲರ್‌ನ 28 ಟನ್‌ ಚಿನ್ನ!

By Kannadaprabha News  |  First Published May 29, 2020, 11:21 AM IST

ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಪ್‌ ಹಿಟ್ಲರ್‌ನ ನಾಜಿ ಸೇನೆ ಚಿನ್ನ ಹೂತಿಟ್ಟ ಸ್ಥಳದ ಬಗ್ಗೆಯೇ ಮಾಹಿತಿ ಇರಲಿಲ್ಲ. ಹೀಗಿರುವಾಗ ಸ್ಥಳವೂ ಪತ್ತೆಯಾಗಿ ಚಿನ್ನವೂ ಪತ್ತೆಯಾಗಿದೆ. ಏನು..? ಯಾವಾಗ..? ಇಲ್ಲಿ ಓದಿ


ವಾರ್‌ಸಾ(ಪೋಲೆಂಡ್‌)(ಮೇ 29): ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಪ್‌ ಹಿಟ್ಲರ್‌ನ ನಾಜಿ ಸೇನೆ 1945ರಲ್ಲಿ 28 ಟನ್‌ ಚಿನ್ನ ಹೂತಿಟ್ಟಿದ್ದ ಸ್ಥಳ ಈಗ ಬಹಿರಂಗವಾಗಿದ್ದು, ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈಗಿನ ಮಾರುಕಟ್ಟೆಮೌಲ್ಯದ ಪ್ರಕಾರ ಆ ಚಿನ್ನದ ಬೆಲೆ 11600 ಕೋಟಿ ರುಪಾಯಿ!

ಪೋಲೆಂಡ್‌, ಸೋವಿಯತ್‌ ಒಕ್ಕೂಟ, ಫ್ರಾನ್ಸ್‌, ಬೆಲ್ಜಿಯಂನಂತಹ ದೇಶಗಳಿಂದ ನಾಜಿ ಸೇನೆ ಚಿನ್ನ ಸೇರಿ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿತ್ತು. ಎರಡನೇ ವಿಶ್ವ ಯುದ್ಧದ ವೇಳೆ ಅಂದರೆ 1945ರಲ್ಲಿ ಸೋವಿಯತ್‌ ಒಕ್ಕೂಟ ಜರ್ಮನಿ ಮೇಲೆ ದಾಳಿ ಮಾಡಿದಾಗ ಈ ಅಮೂಲ್ಯ ವಸ್ತುಗಳನ್ನು 11 ಸ್ಥಳಗಳಲ್ಲಿ ಬಚ್ಚಿಟ್ಟಿತ್ತು.

Tap to resize

Latest Videos

undefined

Fact Check: ಭಾರತ ಸೇನೆಯ 75 ಯೋಧರನ್ನು ಕೊಂದು ಹಾಕಿತಾ ಚೀನಾ?

ಇದರ ಜತೆಗೆ ಅಂದಿನ ಜರ್ಮನಿಯ ಶ್ರೀಮಂತರು ಕೂಡ ಸೇನೆಗೆ ತಮ್ಮಲ್ಲಿನ ಆಭರಣಗಳನ್ನು ರಕ್ಷಿಸಲು ನೀಡಿದ್ದರು. ಈ ಪೈಕಿ ಈಗ ಪೋಲೆಂಡ್‌ನಲ್ಲಿರುವ ಹೋಚ್‌ಬರ್ಗ್‌ ಅರಮನೆಯ ಮುಂಭಾಗದ ಮುಚ್ಚಲ್ಪಟ್ಟಿರುವ ಬಾವಿಯಲ್ಲಿ 28 ಟನ್‌ ಚಿನ್ನ ಸಂಗ್ರಹವಿದೆ ಎಂದು ನಾಜಿಯ ಸೇನಾಧಿಕಾರಿಯೊಬ್ಬರು 75 ವರ್ಷಗಳ ಹಿಂದೆ ಬರೆದಿದ್ದ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಇತರೆ 11 ಸ್ಥಳಗಳಲ್ಲಿನ ವಿವರವೂ ಅದರಲ್ಲಿದೆ.

ಸಿಲೆಸಿಯನ್‌ ಬ್ರಿಜ್‌ ಫೌಂಡೇಷನ್‌ ಎಂಬ ಸಂಸ್ಥೆಗೆ ಈ ಡೈರಿ ಕಳೆದ ವರ್ಷ ಸಿಕ್ಕಿತ್ತು. ಪೋಲೆಂಡ್‌ನ ಸಂಸ್ಕೃತಿ ಸಚಿವಾಲಯಕ್ಕೆ ಕಳೆದ ವರ್ಷವೇ ಅದನ್ನು ಹಸ್ತಾಂತರಿಸಿ ಪರಿಶೀಲಿಸಲು ಮನವಿ ಮಾಡಿತ್ತು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಷ್ಠಾನದ ಮುಖ್ಯಸ್ಥ ಆ ಡೈರಿಯಲ್ಲಿನ ಅಂಶವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ. ತನಿಖೆಗೆ ಒತ್ತಡ ಹೇರುವ ಸಲುವಾಗಿ ಹೀಗೆ ಮಾಡಿರುವುದಾಗಿ ಅವರು ಹೇಳುತಿದ್ದಾರಾದರೂ, ಇದೀಗ ನಿಧಿ ಮೇಲೆ ಕಳ್ಳರ ಕಣ್ಣು ಬಿದ್ದಿದೆ.

Fact Check: ‘ಸಮ-ಬೆಸ’ ಸ್ಕೀಮ್‌ನಲ್ಲಿ ಶಾಲೆ ತೆರೆಯಲು ರಾಹುಲ್ ಗಾಂಧಿ ಸಲಹೆ?

ಪೋಲೆಂಡ್‌ ಅರಮನೆಯ ಮುಚ್ಚಲ್ಪಟ್ಟಿರುವ ಬಾವಿಯನ್ನು ತೋಡಲು ಸರ್ಕಾರದ ಅನುಮತಿ ಬೇಕು. ಅರಮನೆಯ ಹಾಲಿ ಮಾಲೀಕರು ಬಾವಿ ತೋಡುವುದಕ್ಕೆ ಅನುಮತಿ ನೀಡಿದ್ದಾರೆ. ನಿಧಿ ಕಳ್ಳರ ಕಾಟದಿಂದ ಸಿಸಿಟೀವಿ ಕ್ಯಾಮೆರಾ ಹಾಗೂ ಬೇಲಿಗಳನ್ನು ಅಳವಡಿಸಿದ್ದಾರೆ ಎಂದು ಪ್ರತಿಷ್ಠಾನ ತಿಳಿಸಿದೆ.

click me!