ಮಾಸ್ಕ್ ಇಲ್ಲದೇ ಪ್ರವೇಶವಿಲ್ಲ, ಧರಿಸಿದ್ದ ಚಡ್ಡಿ ತೆಗೆದು ಮುಖಕ್ಕೆ ಹಾಕಿದ ಮಹಿಳೆ!

By Suvarna NewsFirst Published May 28, 2020, 6:17 PM IST
Highlights

ಕೊರೋನಾ ಆತಂಕ, ಮಹಾಮಾರಿಯಿಂದ ಕಾಪಾಡಿಕೊಳ್ಳಲು ಮಾಸ್ಕ್ ಕಡ್ಡಾಯ| ಮಾಸ್ಕ್ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ತಿರುಗಾಡುವಂತಿಲ್ಲ| ಪೋಸ್ಟ್ ಆಫೀಸ್‌ಗೆ ತೆರಳುವಾಗ ಮಾಸ್ಕ್ ಧರಿಸಲು ಮರೆತ ಮಹಿಳೆ| ಮುಂದಾದ ಘಟನೆಯ ವಿಡಿಯೋ ವೈರಲ್

ಉಕ್ರೇನ್(ಮೇ.28): ಕೊರೋನಾ ವೈರಸ್ ಪ್ರಕರಣಗಳು ವರದಿಯಾದ ಆರಂಭದಲ್ಲಿ ಮಾಸ್ಕ್ ಕೊರತೆ ಬಹುವಾಗಿ ಕಾಡಿತ್ತು. ಎಲ್ಲಿ ನೋಡಿದರೂ ಮಾಸ್ಕ್‌ಗಳ ವಿಭಾಗ ಖಾಲಿ ಖಾಲಿ. ಹೀಗಿರುವಾಗ ಜನರು ಮನೆಯಲ್ಲೇ ಮಾಸ್ಕ್ ತಯಾರಿಸಲಾರಂಭಿಸಿದರು. 

ಸದ್ಯ ವಿಶ್ವದ ಅನೇಕ ರಾಷ್ಟ್ರಗಳು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿವೆ. ಹೀಗಿರುವಾಗ ಮಾಸ್ಕ್ ಇಲ್ಲದೇ ಮನೆಯಿಂದ ಹೊರ ಹೋಗುವವರು ಭಾರೀ ದಂಡ ಭರಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೇ ಮಾಸ್ಕ್ ಇಲ್ಲದೇ ಹೊರ ಹೋಗುವುದು ಅಪಾಯವನ್ನು ಆಹ್ವಾನಿಸಿದಂತೆ. 

ಇಂತಹ ಪರಿಸ್ಥಿತಿಯಲ್ಲಿ ಸದ್ಯ ಉಕ್ರೇನ್‌ನಲ್ಲಿ ನಡೆದ ಘಟನೆಯಂದು ಭಾರೀ ವೈರಲ್ ಆಗಿದೆ. ಪೋಸ್ಟ್‌ ಆಫೀಸ್‌ಗೆ ಅಗತ್ಯ ಕೆಲಸಕ್ಕೆಂದು ತೆರಳಿದ ಮಹಿಳೆಗೆ ಮಾಸ್ಕ್ ಧರಿಸಿ ಬಂದರಷ್ಟೇ ಒಳಗೆ ಹೋಗಿ ಎಂದು ಆದೇಶಿಸಲಾಗಿದೆ. ಹೀಗಿರುವವಾಗ ಮಾಸ್ಕ್ ತರಲು ಮರೆತಿದ್ದ ಮಹಿಳೆ, ನಿಂತಲ್ಲೇ ತಾನು ಧರಿಸಿದ್ದ ಚಡ್ಡಿ ತೆಗೆದು ಮುಖಕ್ಕೆ ಮಾಸ್ಕ್‌ನಂತೆ ಮುಚ್ಚಿದ್ದಾಳೆ. 

ಮಹಿಳೆಯ ಈ ವರ್ತನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ.  ಉಕ್ರೇನ್‌ನ ಪೋಶಾ ಪೋಸ್ಟ್‌ ಆಫೀಸ್ ಈ ಘಟನೆ ಅಲ್ಲೇ ನಡೆದಿದ್ದೆಂದು ಖಚಿತಪಡಿಸಿದೆ. ಹೀಗಿದ್ದರೂ ಈ ವಿಡಿಯೋ ಶೇರ್ ಮಾಡಿಕೊಂಡ ಉದ್ಯೋಗಿ ಸದ್ಯ ಸಮಸ್ಯೆಗೀಡಾಗಿದ್ದಾರೆ. 

click me!