25 ವರ್ಷದ ಪಾಪ್ ಸ್ಟಾರ್ ಶವವಾಗಿ ಪತ್ತೆ| ಇನ್ಸ್ ಸ್ಟಾಗ್ರಾಮ್ ನಲ್ಲಿ ಸ್ತನ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದ್ದ ಪಾಪ್ ಸ್ಟಾರ್ ಸುಲ್ಲಿ ಸಾವು| ಮಾನಸಿಕ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ ಪೊಲೀಸರು.
ಸಿಯೋಲ್, [ಅ.14]: ಸ್ತನ ಪ್ರದರ್ಶಿಸಿ ಸಾಮಾಜಿಕ ಜಾಲಾತಣದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ದಕ್ಷಿಣ ಕೊರಿಯಾದ ಖ್ಯಾತ ಕೊರಿಯನ್ ಪಾಪ್ ಸ್ಟಾರ್ ಶವವಾಗಿ ಪತ್ತೆಯಾಗಿರುವ ಘಟನೆ ದಕ್ಷಿಣ ಕೊರಿಯಾದಲ್ಲಿ ನಡೆದಿದೆ.
ಕೊರಿಯಾದ ಪಾಪ್ ಸ್ಟಾರ್ ಆಗಿದ್ದ 25 ವರ್ಷದ ಸುಲ್ಲಿ ಎನ್ನುವರೇ ಮೃತಪಟ್ಟವರು. ಈಕೆಯ ನಿಜವಾದ ಹೆಸರು ಚೋಯಿ ಜಿನ್-ರಿ ಎಂದು ತಿಳಿದುಬಂದಿದೆ. ನಿವಾಸದಲ್ಲಿಯೇ ಸುಲ್ಲಿ ಶವ ಪತ್ತೆಯಾಗಿರುವುದಾಗಿ ಆಕೆಯ ಮ್ಯಾನೇಜರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.
BSY ಬೆಂಬಲಿಗರಿಗೆ ಗೇಟ್‌ಪಾಸ್, BCCIಗೆ ನೂತನ ಪ್ರಸಿಡೆಂಟ್; ಇಲ್ಲಿವೆ ಅ.14ರ ಟಾಪ್ 10 ಸುದ್ದಿ!
ಸಿಯೊಂಗ್ನಮ್‌ನ ಸುಜಿಯೊಂಗ್-ಗು ನಲ್ಲಿರುವ ಆಕೆಯ ಮನೆಯ 2ನೇ ಮಹಡಿಯಲ್ಲಿ ಸೋಮವಾರ ಸುಲ್ಲಿ ಶವ ಪತ್ತೆಯಾಗಿದೆ. ಪಾಪ್ ಸ್ಟಾರ್ ಸುಲ್ಲಿ ಇನ್ಸ್ ಸ್ಟಾಗ್ರಾಮ್ ನಲ್ಲಿ ಸ್ತನ ಪ್ರದರ್ಶಿಸಿದ್ದು, ಅಂತರ್ಜಾಲದಲ್ಲಿ ಭಾರೀ ಟೀಕೆಗೆ ಒಳಗಾಗುವಂತೆ ಮಾಡಿತ್ತು.
ಆದರೂ ಸುಲ್ಲಿ ಅದೇ ಚಾಳಿಯನ್ನು ಮುಂದುವರಿಸಿದ್ದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಖ್ಯಾತ ಪಾಪ್ ಸಂಗೀತಗಾರ್ತಿ ಸುಲ್ಲಿಯನ್ನು ಅಮಾನತು ಮಾಡಲಾಗಿತ್ತು. ಇದ್ರಿಂದ ಸುಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮತ್ತೊಂದೆಡೆ 25ರ ಹರೆಯದ ಪಾಪ್ ಸ್ಟಾರ್ ತೀವ್ರ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಿರುವುದಾಗಿ ದಕ್ಷಿಣ ಕೊರಿಯಾ ಪೊಲೀಸರು ತಿಳಿಸಿದ್ದಾರೆ. ಆದ್ರೆ ನಿಜವಾದ ಕಾರಣ ಏನು ಎನ್ನುವುದು ಮಾತ್ರ ಇನ್ನು ತಿಳಿದುಬಂದಿಲ್ಲ.