ನೆಲದ ಮೇಲೆ ಬಿದ್ದಿತ್ತು ನಾಯಿ ಮೂಗು, ಎತ್ತಿಕೊಂಡ ಮಹಿಳೆಗೆ ಶಾಕ್: FB ಪೋಸ್ಟ್ ವೈರಲ್

Published : Oct 13, 2019, 12:39 PM IST
ನೆಲದ ಮೇಲೆ ಬಿದ್ದಿತ್ತು ನಾಯಿ ಮೂಗು, ಎತ್ತಿಕೊಂಡ ಮಹಿಳೆಗೆ ಶಾಕ್: FB ಪೋಸ್ಟ್ ವೈರಲ್

ಸಾರಾಂಶ

ನೆಲದ ಮೇಲೆ ತುಂಡಾಗಿ ಬಿದ್ದಿತ್ತು ನಾಯಿ ಮೂಗು| ನಾಯಿ ನೋಡಿಕೊಳ್ಳಲು ಬಂದಾಕೆಗೆ ಶಾಕ್| ಧೈರ್ಯವಾಗಿ ಮೂಗು ಎತ್ತಿಕೊಂಡಾಕೆಗೆ ಶಾಕ್| ವೈರಲ್ ಆಯ್ತು ಫೇಸ್‌ಬುಕ್ ಪೋಸ್ಟ್

ಲಂಡನ್[ಅ.13]: ಸೋಶಿಯಲ್ ಮೀಡಿಯಾದಲ್ಲಿ ಯಾವ ವಿಚಾರ ವೈರಲ್ ಆಗುತ್ತದೆ ಎಂದು ಊಹಿಸುವುದೂ ಅಸಾಧ್ಯ. ಆದ್ರೂ ವೈರಲ್ ಆಗುವ ಪೋಸ್ಟ್ ಗಳಲ್ಲಿ ಬಹುತೇಕ ಸುದ್ದಿಗಳು ವಿಭಿನ್ನವಾಗಿ ತಿಳುವಳಿಕೆ ಕೊಡುತ್ತವೆ. ಆದರೆ ಬ್ರಿಟನ್ ಮಹಿಳೆಯೊಬ್ಬಳು ಮಾಡಿದ ಪೋಸ್ಟ್‌ ಬಹಳ ವಿಚಿತ್ರವಾಗಿದೆ..

ಹೌದು ಈ ಮಹಿಳೆ ಫೇಸ್‌ಬುಕ್ ನಲ್ಲಿ ಶೇರ್ ಮಾಡಿಕೊಂಡಿರುವ ಪೋಸ್ಟ್ ನಲ್ಲಿ ನಾಯಿಯ ಮೂಗು ಮಾತ್ರ ಕಾಣಲು ಸಿಗುತ್ತದೆ. ಇದನ್ನು ನೋಡಿದ್ರೆ ಮೂಗು ಕಳಚಿ ಬಿದ್ದಿದೆ ಎಂದು ಭಾವಿಸಬೇಕು,. ಆದರೆ ವಾಸ್ತವರೆ ಮಾತ್ರ ಕೊಂಚ ಭಿನ್ನವಾಗಿದೆ. 

ಬ್ರಿಟನ್‌ನ ಕೋವೆಂಟ್ರಿ ನಿವಾಸಿ ಜೆಡ್‌ಮರೆ ಮಂಗಳವಾರ ತನ್ನ ತಾಯಿ ಸಾಕಿದ್ದ ನಾಯಿಯನ್ನು ನೋಡಿಕೊಂಡಿದ್ದಳು. ಹೀಗಿರುವಾಗ ಆಕೆ ನೆಲದ ಮೇಲೆ ವಿಚಿತ್ರ ವಸ್ತು ಕಂಡಳು. ಈ ಕುರಿತು ಪೋಸ್ಟ್ ನಲ್ಲಿ ಬರೆದಿರುವ ಜೆಡ್ 'ಅದೇನೆಂದು ನನಗೆ ತಿಳಿದಿರಲಿಲ್ಲ. ಬಳಿಕ ನಾಯಿಯ ಮೂಗು ಆಗಿರಬಹುದು ಎಂದು ಊಹಿಸಿದೆ ' ಎಂದಿದ್ದಾರೆ.

ಮುಂದೆ ಈ ಕುರಿತು ಇನ್ನಷ್ಟು ಬರೆದುಕೊಂಡಿರುವ ಜೆಡ್ 'ಅದು ನಾಯಿ ಮೂಗು ಎಂದು ತಿಳಿದಾಗ ಭಯ ಆಯ್ತು. ನಾಯಿಗೆ ಎಷ್ಟು ನೋವಾಗುತ್ತಿರಬಹುದು ಎಂದು ಯೋಚಿಸಿದೆ. ಅಮ್ಮನ ಬಳಿ ನಿನ್ನ ನಾಯಿಯ ಮೂಗು ತುಂಡಾಗಿದೆ ಎಂದು ಹೇಗೆ ಹೇಳುವುದೆಂಬ ಚಿಂತೆ ಕಾಡಿತು. ನಾಯಿ ಇನ್ನು ಹೇಗೆ ವಾಸನೆ ಗ್ರಹಿಸುತ್ತದೆ ಎಂಬ ಆತಂಕ. ಆದ್ರೂ ಧೈರ್ಯ ಮಾಡಿ ಕೆಳ ಬಿದ್ದಿದ್ದ ಮೂಗಿನ ತುಂಡನ್ನೆತ್ತಿಕೊಂಡೆ. ಅದೃಷ್ಟವಶಾತ್ ಅದು ನಿಜವಾದ ಮೂಗು ಆಗಿರಲಿಲ್ಲ. ಅದೊಂದು ಆಟಿಕೆ ಆಗಿತ್ತು. ನಾಯಿಯ ಮೂಗು ಸರಿಯಾಗಿದೆ ಏನೂ ಆಗಿಲ್ಲ' ಎಂದಿದ್ದಾರೆ.

ಆದರೆ ಜೆಡ್ ರವರ ಈ ಸಾಮಾಣ್ಯ ಈ ಪೋಸ್ಟ್ 2 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಹಾಗೂ 1 ಲಕ್ಷಕ್ಕೂ ಅಧಿಕ ಮಂದಿ ಶೇರ್ ಮಾಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಕಚ್ಚಾತೈಲ ಖರೀದಿ ಹೆಚ್ಚಿಸುವ ಅನಿವಾರ್ಯತೆ: ಮತ್ತೆ ಸುಂಕ ಹೇರಲಿದೆಯಾ ಅಮೆರಿಕಾ
Pakistan Protests: 'ಶೆಹಬಾಜ್ ಷರೀಫ್, ಆಸಿಮ್ ಮುನೀರ್ ಮುರ್ದಾಬಾದ್': ಪಾಕ್ ನಾಯಕರ ವಿರುದ್ಧವೇ ತಿರುಗಿಬಿದ್ದ ಗಿಲ್ಗಿಟ್-ಬಾಲ್ಟಿಸ್ತಾನ್ ಜನ!