CNN ಗೆ ಸೆಡ್ಡು: ಅಮೆರಿಕ ಅಧ್ಯಕ್ಷರ ಟ್ರಂಪ್‌ ಟೀವಿ ಶುರು! ತಮ್ಮ ಕಾರ್‍ಯಕ್ರಮ ಪ್ರಸಾರ ಮಾಡದ್ದಕ್ಕೆ ಕಿಡಿ!

Kannadaprabha News   | Kannada Prabha
Published : Sep 23, 2026, 06:17 AM IST
24x7 Trump TV launches

ಸಾರಾಂಶ

ಅಮೆರಿಕದ ಪ್ರಮುಖ ಮಾಧ್ಯಮಗಳೊಂದಿಗೆ ಸಂಘರ್ಷದ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮದೇ ಆದ 'ಟ್ರಂಪ್ ಟೀವಿ' ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ಶ್ವೇತಭವನಕ್ಕೆ 3 ಚಾನೆಲ್‌ಗಳ ನಿರ್ಬಂಧದ ನಂತರ ಈ ಬೆಳವಣಿಗೆ ನಡೆದಿದೆ. ನ್ಯೂಯಾರ್ಕ್‌ನಲ್ಲಿ ತಮ್ಮ ರಾಜಕೀಯ ವಿರೋಧಿ ಜೋಹ್ರಾನ್‌ ಮಮ್ದಾನಿ ಭೇಟಿ ಏಕೆ?

  • ಇತ್ತೀಚೆಗೆ ಶ್ವೇತಭವನಕ್ಕೆ 3 ಚಾನೆಲ್‌ಗಳಿಗೆ ನಿರ್ಬಂಧ
  • ಇದಕ್ಕೆ ಪ್ರತಿಯಾಗಿ ಟ್ರಂಪ್‌ ಕಾರ್ಯಕ್ರಮ ಪ್ರಸಾರ ಸ್ಥಗಿತ
  • ಸಿಟ್ಟಿಗೆಟ್ಟ ಟ್ರಂಪ್‌ರಿಂದ ಹೊಸ ಟ್ರಂಪ್‌ ಟೀವಿ ಚಾನೆಲ್‌ ಶುರು
  • ಯುಟ್ಯೂಬ್‌ ಮೂಲಕ ದಿನದ24 ಗಂಟೆ ಟ್ರಂಪ್‌ ಸುದ್ದಿ ಪ್ರಸಾರ
  • ಈ ಹಿಂದೆ ಟ್ವೀಟರ್‌ಗೆ ಬದಲಿಯಾಗಿ ಟ್ರುತ್ ಎಂಬ ಜಾಲತಾಣ ಆರಂಭಿಸಿದ್ದ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್ (ಸೆ.23):‌ ಅಮೆರಿಕದಲ್ಲಿನ ಪ್ರಮುಖ ಮಾಧ್ಯಮ ಸಂಸ್ಥೆಗಳು ಹಾಗೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವಿನ ಸಮರ ತಾರಕಕ್ಕೇರಿದೆ. ಟೀವಿ ಚಾನೆಲ್‌ಗಳಿಗೆ ಸಡ್ಡು ಹೊಡೆದಿರುವ ಟ್ರಂಪ್, ತಮ್ಮದೇ ಆದ ‘ಟ್ರಂಪ್‌ ಟೀವಿ’ ಹೆಸರಿನ ಟೀವಿ ಚಾನೆಲ್‌ ಆರಂಭಿಸಿದ್ದಾರೆ.

ಈ ಹಿಂದೆ ಟ್ವೀಟರ್‌ ಸೇರಿದಂತೆ ಹಲವು ಜಾಲತಾಣಗಳು ಟ್ರಂಪ್‌ ತಮ್ಮ ಮೇಲೆ ನಿರ್ಬಂಧ ಹೇರಿದ್ದಕ್ಕೆ ಸಿಟ್ಟಿಗೆದ್ದಿದ್ದ ಡೊನಾಲ್ಡ್‌ ಟ್ರಂಪ್‌, ತಮ್ಮದೇ ಆದ ‘ಟ್ರುತ್ ಸೋಷಿಯಲ್’ ಎಂಬ ತಮ್ಮದೇ ಆದ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರಂ ಆರಂಭಿಸಿದ್ದರು.

ಟ್ರಂಪ್‌ ಪ್ರತ್ಯೇಕ ಟೀವಿ ಏಕೆ ಶುರು ಮಾಡಿದ್ದು?

ತಮ್ಮ ಬಗ್ಗೆ ಸರಿಯಾಗಿ ವರದಿ ಮಾಡುತ್ತಿಲ್ಲ ಎಂದು ಆರೋಪಿಸಿ ಸಿಎನ್‌ಎನ್‌ ಸೇರಿದಂತೆ 3 ಚಾನೆಲ್‌ಗಳಿಗೆ ಟ್ರಂಪ್‌ ಇತ್ತೀಚೆಗೆ ಶ್ವೇತಭವನ ಪ್ರವೇಶ ನಿರ್ಬಂಧಿಸಿದ್ದರು. ಇದನ್ನು ಪ್ರಶ್ನಿಸಿ, ಬಹುತೇಕ ಟೀವಿ ಚಾನೆಲ್‌ಗಳು ಮಂಗಳವಾರ ಟ್ರಂಪ್‌ ಅವರ ಶ್ವೇತಭವನ ಕಾರ್ಯಕ್ರಮಗಳ ಪ್ರಸಾರ ನಿರ್ಬಂಧಿಸಿದವು.

ಆದರೆ, ಇದಕ್ಕೆ ಟಕ್ಕರ್‌ ನೀಡಿರುವ ಟ್ರಂಪ್‌ ಇದೀಗ ದಿನದ 24 ಗಂಟೆಯೂ ಅಮೆರಿಕದ ಅಧ್ಯಕ್ಷೀಯ ಕಾರ್ಯಕ್ರಮಗಳ ಎಕ್ಸ್‌ಕ್ಲೂಸಿವ್‌ ಪ್ರಸಾರಕ್ಕೆ ಮುಂದಾಗಿದ್ದಾರೆ ಹಾಗೂ ʼಟ್ರಂಪ್ ಟೀವಿʼ ಎಂಬ ಯೂಟ್ಯೂಬ್‌ ಸ್ಟ್ರೀಮಿಂಗ್‌ ಫ್ಲಾಟ್‌ಫಾರ್ಮ್‌ ಅನ್ನು ಅಧಿಕೃತವಾಗಿ ಆರಂಭಿಸಿದ್ದಾರೆ.

ವಿರೋಧಿ ಮಮ್ದಾನಿ ಭೇಟಿ:

ಈ ನಡುವೆ, ನ್ಯೂಯಾರ್ಕ್‌ಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಗಾಗಿ ಆಗಮಿಸಿದ ಟ್ರಂಪ್‌, ತಮ್ಮ ರಾಜಕೀಯ ಕಡುವೈರಿ ಹಾಗೂ ನ್ಯೂಯಾರ್ಕ್‌ ಮೇಯರ್‌ ಜೋಹ್ರಾನ್‌ ಮಮ್ದಾನಿ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವೈದ್ಯಕೀಯ ಲೋಕದಲ್ಲಿ ಕಂಡರಿಯದ ಪವಾಡ, ಒಂದೇ ಮಗು ಎರಡು ಬಾರಿ ಜನಿಸಿದೆ
ಅಂದು ಪ್ರೊಟೋಕಾಲ್​​ ಮೀರಿ ಭಾರತದ ಬಾಲೆಯ ಎತ್ತಿ ಮೂಗು ಒರೆಸಿದ್ದ ಡಯಾನಾ: 34 ವರ್ಷಗಳ ಬಳಿಕ ಇಂದು