ವೈದ್ಯಕೀಯ ಲೋಕದಲ್ಲಿ ಕಂಡರಿಯದ ಪವಾಡ, ಒಂದೇ ಮಗು ಎರಡು ಬಾರಿ ಜನಿಸಿದೆ

Published : Sep 23, 2026, 01:03 AM IST
Medical Miracle Baby Who Was Born Twice

ಸಾರಾಂಶ

ವೈದ್ಯಕೀಯ ವಿಜ್ಞಾನ ಎಷ್ಟು ಅದ್ಭುತ ಅನ್ನೋದಕ್ಕೆ ಇತ್ತೀಚೆಗೆ ಟೆಕ್ಸಾಸ್‌ನಲ್ಲಿ ರೋಮಾಂಚನಕಾರಿ ಘಟನೆಯೊಂದು ನಡೆದಿದೆ. ಗರ್ಭದಲ್ಲಿದ್ದ ಬ್ರೂಣವನ್ನು ಹೊರತೆಗೆದು, ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿ ಮತ್ತೆ ತಾಯಿಯ ಗರ್ಭದೊಳಗೆ ನಯವಾಗಿ ಇಟ್ಟಿದ್ದರು. ಇದೀಗ ಮಗು ಎರಡನೇ ಬಾರಿಗೆ ಪ್ರಪಂಚಕ್ಕೆ ಕಾಲಿಟ್ಟಿದೆ. ಈ ಕುರಿತ ಸ್ಟೋರಿ ಇಲ್ಲಿದೆ.

ಇದು ಯಾವುದೇ ಸಿನಿಮಾ ಕತೆಯಲ್ಲ. ವೈದ್ಯಕೀಯ ಲೋಕದಲ್ಲಿ ನಡೆದ ಅಚ್ಚರಿಯ ಪವಾಡ. ಒಮ್ಮೆ ಕಲ್ಪಿಸಿಕೊಳ್ಳಿ ಒಂದೇ ಮಗು ಎರಡು ಬಾರಿ ಜನಿಸಲು ಸಾಧ್ಯವೇ? ಊಹಿಸಿಕೊಳ್ಳೋದಕ್ಕೂ ಅಸಾಧ್ಯ. ಆದರೆ ಕೆಲವೊಮ್ಮೆ ಅಂಥ ಮಿರಾಕಲ್ ಸಂಭಸಿಬಿಡುತ್ತವೆ. ಹೌದು, ಇದಕ್ಕೆ ತಾಜಾ ಉದಾಹರಣೆ ಅಂದರೆ ಅಮೆರಿಕದಲ್ಲಿ ವೈದ್ಯಲೋಕಕ್ಕೆ ಸವಾಲಾಗಿದ್ದ ಕಠಿಣ ಸನ್ನಿವೇಶಕ್ಕೆ ಕೊನೆಗೂ ಹ್ಯಾಪಿ ಎಂಡಿಂಗ್ ಸಿಕ್ಕಿದೆ..

ಅದೊಂದು ರೋಚಕ ಕತೆ..

ಆಕೆ ಅಮೆರಿಕದ ಟೆಕ್ಸಾಸ್‌ನ ನಿವಾಸಿ. ಹೆಸರು ಮಾರ್ಗರೇಟ್ ಬೋಮರ್. ಇವರು ಗರ್ಭಿಣಿ ಆಗ್ತಾರೆ. ಬೆನ್ನಲ್ಲೇ ರೂಟಿನ್ ತಪಾಸಣೆಗಾಗಿ ವೈದ್ಯರು ಬಳಿ ತೆರಳಿದ್ದರು. ಆಗ ಅವರಿಗೆ 16 ವಾರ ತುಂಬಿತ್ತು ಅಷ್ಟೇ. ಅಂದರೆ ನಾಲ್ಕು ತಿಂಗಳು. ವೈದ್ಯರು ಸ್ಕ್ಯಾನ್ ಮಾಡಿ ನೋಡಿದಾಗ ಶಾಕಿಂಗ್ ವಿಚಾರ ಬೆಳಕಿಗೆ ಬರುತ್ತದೆ. ಗರ್ಭದಲ್ಲಿದ್ದ ಹೆಣ್ಣು ಬ್ರೂಣದ Tailbone ಬಳಿ ದೊಡ್ಡದಾದ ಗಡ್ಡೆ ಬೆಳೆಯುತ್ತಿತ್ತು. ಇದನ್ನು ವೈದ್ಯಕೀಯ ಬಾಷೆಯಲ್ಲಿ ಸ್ಯಾಕ್ರೊಕಾಕ್ಸಿಜಿಯಲ್ ಟೆರಾಟೋಮ ಎಂದು ಕರೆಯಲಾಗುತ್ತದೆ. ಇದನ್ನು ನೋಡಿದ ವೈದ್ಯರೇ ಹೌಹಾರಿದ್ದರು.

ಯಾಕೆಂದರೆ ಆ ಗಡ್ಡೆ ಅಷ್ಟು ಅಪಾಯಕಾರಿ ಆಗಿತ್ತು. ಗಡ್ಡೆ ಬೆಳೆಯುತ್ತ ಹೋದಂತೆ ಮಗುವಿನ ಶರೀರದ ರಕ್ತವನ್ನೆಲ್ಲ ಅದೇ ಹೀರಿಕೊಳ್ಳುವ ಅಪಾಯವನ್ನು ವೈದ್ಯರು ಕಂಡುಕೊಂಡರು. ಇದರಿಂದ ಮುಂದೊಂದು ದಿನ ಮಗು ರಕ್ತವಿಲ್ಲದೇ ಹೃದಯ ವೈಫಲ್ಯದಿಂದ ಗರ್ಭದಲ್ಲೇ ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು.

ಗರ್ಭಪಾತಕ್ಕೆ ಒಪ್ಪದ ತಾಯಿ, ಮುಂದೇನು?

ಈ ವಿಷಯವನ್ನು ತಾಯಿಗೆ ವೈದ್ಯರು ಮನವರಿಕೆ ಮಾಡಿದರು. ಆದರೆ, ಆ ಮಹಿಳೆಗೆ ಈ ಮೊದಲು ಅವಳಿ ಮಕ್ಕಳಾಗಬೇಕಿತ್ತು. ಆದರೆ ಆರಂಭದಲ್ಲಿಯೇ ಗರ್ಭಪಾತವಾಗಿತ್ತು. ಹೀಗಾಗಿ ಈ ಬಾರಿಯಾದರೂ ಮಗುವನ್ನು ಉಳಿಸಿಕೊಳ್ಳಬೇಕು ಎಂಬ ಮಹದಾಸೆ ಬೇರೂರಿತ್ತು. ಅದೇ ಕಾರಣಕ್ಕೆ ಮಹಿಳೆ ಗರ್ಭಪಾತಕ್ಕೆ ಒಪ್ಪಿಕೊಳ್ಳಲಿಲ್ಲ. ವೈದ್ಯರು ಗರ್ಭಪಾತಕ್ಕೆ ಎಷ್ಟೇ ಸಲಹೆ ನೀಡಿದರೂ, ತಾಯಿ ಮಾತ್ರ ಭರವಸೆ ಕಳೆದುಕೊಳ್ಳಲಿಲ್ಲ. ಹೀಗಾಗಿ ವೈದ್ಯರು ಆಕೆಗೆ ಅಪರೂಪದ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು. ಆದರೆ ಇಲ್ಲಿ ಮಗು ಬದುಕೋದು ಕೇವಲ 50 ಪರ್ಸೆಂಟ್ ಅಷ್ಟೇ ಎಂದಿದ್ದರು. ಹೀಗಿದ್ದೂ ಆಕೆ ಸರ್ಜರಿಗೆ ಒಪ್ಪಿಕೊಂಡಳು.

ಮುಂದೆ ಏನಾಯ್ತು?

ಭ್ರೂಣಕ್ಕೆ 23ನೇ ವಾರ ಪೂರೈಸುತ್ತಿದ್ದಂತೆಯೇ ಹೃದಯ ಬಡಿತ ನಿಲ್ಲುವ ಹಂತಕ್ಕೆ ಬಂದಿತ್ತು. ಆಗ ವೈದ್ಯರು ಸಾಹಸಕ್ಕೆ ಕೈಹಾಕಿದರು. ತಾಯಿಯ ಗರ್ಭಕೋಶವನ್ನೇ ಆಪರೇಷನ್ ಮಾಡಿ ತೆರೆದ ವೈದ್ಯರು.. ಮಗುವಿನ ಅರ್ಧ ಶರೀರದ ಕೆಳಭಾಗವನ್ನು ಹೊರಗೆ ತೆಗೆದರು. ಆಗ ಮಗು ಹೊಕ್ಕಳುಬಳ್ಳಿಯ ಮೂಲಕವೇ ಉಸಿರಾಡುತ್ತಿತ್ತು. 20 ನಿಮಿಷಗಳ ಕಾಲ ಮಗುವನ್ನು ಹೊರಗಿಟ್ಟಿದ್ದರು. ಅಷ್ಟರಲ್ಲಿ ಆ ಪುಟ್ಟ ಶರೀರದಲ್ಲಿದ್ದ ದೊಡ್ಡ ಗಡ್ಡೆಯನ್ನು ಯಶಸ್ವಿಯಾಗಿ ಕತ್ತರಿಸಿ ತೆಗೆದರು.

ಇನ್ನೊಂದು ಮೈಜುಮ್ ಎನಿಸುವ ವಿಚಾರ ಏನೆಂದರೆ ಆಪರೇಷನ್ ವೇಳೆ ಒಮ್ಮೆ ಮಗುವಿನ ಎದೆಬಡಿತ ನಿಂತಿತ್ತಂತೆ. ತಕ್ಷಣವೇ ವೈದ್ಯರು ಅದಕ್ಕೆ ಮರುಜೀವ ನೀಡಿದರು. ಗಡ್ಡೆಯನ್ನ ಕತ್ತರಿಸಿ ತೆಗೆದ ನಂತರ ವೈದ್ಯರು ಮಗುವನ್ನ ಮತ್ತೆ ತಾಯಿಯ ಗರ್ಭದೊಳಗೆ ನಯವಾಗಿ ಇರಿಸಿ ಗರ್ಭಕೋಶಕ್ಕೆ ಹೊಲಿಗೆ ಹಾಕಿ ಮುಚ್ಚಿದರು.

36ನೇ ವಾರದಲ್ಲಿ ಹುಟ್ಟಿದ ಕಂದಮ್ಮ

ಆಪರೇಷನ್ ನಂತರ ತಾಯಿಗೆ ಸಂಪೂರ್ಣ ಬೆಡ್ ರೆಸ್ಟ್ ನೀಡಲಾಯಿತು. ಇತ್ತ ಮಗು ಗರ್ಭದೊಳಗೆ ಎಂದಿನಿಂತೆ ಸಹಜವಾಗಿ ಬೆಳೆಯಲಾರಂಭಿಸಿತು. 36ನೇ ವಾರದ ನಂತರ ವೈದ್ಯರು ಮತ್ತೆ ಸೀಜೆರಿಯನ್ ಮಾಡಿ ಮಗುವನ್ನು ಹೊರಗೆ ತೆಗೆದರು, ಆ ಮೂಲ ಎರಡನೇ ಬಾರಿಗೆ ಮಗು ಪ್ರಪಂಚಕ್ಕೆ ಕಾಲಿಟ್ಟಿತು. ವರದಿಗಳ ಪ್ರಕಾರ ಮಗು ಈಗ ಸಂಪೂರ್ಣ ಆರೋಗ್ಯವಾಗಿದೆ. ಹುಟ್ಟಿದ 8 ದಿನಗಳಲ್ಲಿ ಒಂದು ಸಣ್ಣ ಸರ್ಜರಿ ಮಾಡಿ ಗಡ್ಡೆಯ ಉಳಿದ ಭಾಗವನ್ನು ತೆಗೆದಿದ್ದಾರೆ. ಅಮ್ಮನ ಗರ್ಭದಿಂದ ಹೊರಬಂದು ಜೀವ ಉಳಿಸಿಕೊಂಡು, ಮತ್ತೆ ಗರ್ಭ ಸೇರಿ ಜನಿಸಿದ ಮಗುವಿನ ಸ್ಟೋರಿ ವೈದ್ಯಕೀಯ ಲೋಕದಲ್ಲಿ ಪವಾಡ ಅಲ್ಲದೇ ಮತ್ತಿನ್ನೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂದು ಪ್ರೊಟೋಕಾಲ್​​ ಮೀರಿ ಭಾರತದ ಬಾಲೆಯ ಎತ್ತಿ ಮೂಗು ಒರೆಸಿದ್ದ ಡಯಾನಾ: 34 ವರ್ಷಗಳ ಬಳಿಕ ಇಂದು
ನಾವು ಗೆದ್ದರೆ 90 ಅಡಿ ಹನುಮಂತನ ಮೂರ್ತಿ ನಾಶ: ಚುನಾವಣೆ ಸಮೀಪದಲ್ಲಿ ಅಮೆರಿಕದಲ್ಲಿ ಭುಗಿಲೆದ್ದ ವಿವಾದ