ಪಾಕ್‌ ಬಂಟ ಈಗ ಆಫ್ಘನ್‌ ಪ್ರಧಾನಿ!

By Kannadaprabha NewsFirst Published Sep 8, 2021, 8:32 AM IST
Highlights
  • ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿದ ಸುಮಾರು 20 ದಿನಗಳ ಬಳಿಕ ಅಷ್ಘಾನಿಸ್ತಾನದಲ್ಲಿ ತಾಲಿಬಾನಿ ಸಂಘಟನೆ ಹಂಗಾಮಿ ಸರ್ಕಾರ
  • ನೂತನ ಪ್ರಧಾನಿಯಾಗಿ ‘ಪಾಕಿಸ್ತಾನದ ಬಂಟ’ ಎಂದೇ ಕುಖ್ಯಾತಿ ಹೊಂದಿರುವ ಮುಲ್ಲಾ ಮೊಹಮ್ಮದ್‌ ಹಸನ್‌ ಅಖುಂದ್‌ನನ್ನು ನೇಮಕ

ಕಾಬೂಲ್‌ (ಸೆ.08): ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿದ ಸುಮಾರು 20 ದಿನಗಳ ಬಳಿಕ ಅಷ್ಘಾನಿಸ್ತಾನದಲ್ಲಿ ತಾಲಿಬಾನಿ ಸಂಘಟನೆ ಹಂಗಾಮಿ ಸರ್ಕಾರವನ್ನು ರಚಿಸಿದೆ. 

ನೂತನ ಪ್ರಧಾನಿಯಾಗಿ ‘ಪಾಕಿಸ್ತಾನದ ಬಂಟ’ ಎಂದೇ ಕುಖ್ಯಾತಿ ಹೊಂದಿರುವ ಮುಲ್ಲಾ ಮೊಹಮ್ಮದ್‌ ಹಸನ್‌ ಅಖುಂದ್‌ನನ್ನು ನೇಮಿಸಲಾಗಿದೆ. 

ತಾಲಿಬಾನಿ ಆಫ್ಘನ್‌ನಿಂದ ಭಾರತಕ್ಕೆ ಉಗ್ರ ಅಪಾಯ!

2001ರಲ್ಲಿ ಬಮಿಯಾನ್‌ನಲ್ಲಿ ಪುರಾತನ ಬುದ್ಧ ಪ್ರತಿಮೆ ಧ್ವಂಸ ನಡೆಸಿದ ಘಟನೆಯ ಉಸ್ತುವಾರಿಯನ್ನು ಈತನೇ ಹೊತ್ತುಕೊಂಡಿದ್ದ. ಇನ್ನು ಮುಲ್ಲಾ ಬರಾದರ್‌ ಮತ್ತು ಮುಲ್ಲಾ ಅಬ್ದುಸ್‌ ಸಲಾಂ ಅವರು ಉಪಪ್ರಧಾನಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.

click me!