ಮುಖದ ತುಂಬೆಲ್ಲ ಕೂದಲು; ಕಾಯಿಲೆಯಿಂದಲೇ ವಿಶ್ವದಾಖಲೆ ಬರೆದ 18 ವರ್ಷದ ಲಲಿತ್‌ ಪಾಟೀದಾರ್‌

Published : Mar 08, 2025, 11:05 AM ISTUpdated : Mar 08, 2025, 11:08 AM IST
ಮುಖದ ತುಂಬೆಲ್ಲ ಕೂದಲು; ಕಾಯಿಲೆಯಿಂದಲೇ ವಿಶ್ವದಾಖಲೆ ಬರೆದ 18 ವರ್ಷದ ಲಲಿತ್‌ ಪಾಟೀದಾರ್‌

ಸಾರಾಂಶ

Lalit Patidar Guinness World Record: ಮುಖದ ಮೇಲೆ ಏನು ಇಷ್ಟೆಲ್ಲ ಕೂದಲು ಇದೆ ಎಂದು 18 ವರ್ಷದ ವ್ಯಕ್ತಿಯೋರ್ವವನನ್ನು ಹೀಯಾಳಿಸಲಾಗಿತ್ತು. ಈ ವ್ಯಕ್ತಿ ಇಂದು ಗಿನ್ನಿಸ್‌ ವಿಶ್ವದಾಖಲೆ ಪಟ್ಟಿ ಸೇರಿದ್ದಾರೆ. ಕಾಯಿಲೆ ಸಲುವಾಗಿ ಈ ರೀತಿ ಅಸಹಜವಾಗಿ ಮುಖದ ಮೇಲೆ ಕೂದಲು ಬೆಳೆದಿದೆಯಂತೆ. 

ಏನಾದರೂ ಸಾಧನೆ ಮಾಡಿದಾಗ ಅದನ್ನು ಗುರುತಿಸಿ ಬಿರುದು ಕೊಟ್ಟರೆ ಖುಷಿ ಆಗುವುದು. ಆದರೆ ಇಲ್ಲೋರ್ವ ವ್ಯಕ್ತಿಗೆ ಇರುವ ಕಾಯಿಲೆಯಿಂದಲೇ ಗಿನ್ನಿಸ್‌ವರ್ಲ್ಡ್‌ ರೆಕಾರ್ಡ್‌ಪಟ್ಟ ಸೃಷ್ಟಿಸಿದ ಹೆಗ್ಗಳಿಕೆ ದೊರೆತಿದೆ. ಲಲಿತ್‌ ಪಾಟೀದಾರ್ ಎನ್ನುವ 18 ವರ್ಷದ ಹುಡುಗ hypertrichosis ( werewolf syndrome ) ಎನ್ನುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಕಾಯಿಲೆಯೇ ಅವರಿಗೆ ವಿಶ್ವದಾಖಲೆ ಮಾಡುವಂತೆ ಮಾಡಿದೆ. 

ಮುಖದ 95% ಕೂದಲು! 
ಇಡೀ ಜಗತ್ತಿನಲ್ಲಿ ಈ ಥರದ ಕಾಯಿಲೆ ಇರುವವರು ಕೇವಲ 50 ಮಂದಿ. ಅವರಲ್ಲಿ ಲಲಿತ್‌ ಕೂಡ ಓರ್ವರು. ಈ ರೀತಿ ಕಾಯಿಲೆ ಇದ್ದಾಗ ಮುಖದ ತುಂಬ ಅಸಹಜವಾಗಿ ಕೂದಲು ಬೆಳೆಯುತ್ತದೆ. ಇವರ ಮುಖದಲ್ಲಿ 95% ಕೂದಲು ಇದೆ. ಮುಖದಲ್ಲಿ ಒಂದು ಸ್ಕ್ಯಾರ್‌‌ ಸೆಂಟಿಮೀಟರ್‌ಗೆ 201.72 ಕೂದಲು ಇವೆಯಂತೆ. 

ಹಲವು ಅಪರೂಪದ ದಾಖಲೆಗಳಿಗೆ ಸಾಕ್ಷಿಯಾದ ಇಂಡೋ-ಪಾಕ್ ಪೈಟ್!

ನೆಗೆಟಿವ್‌ ಮಾತು ಕೇಳಿಬಂದಿತ್ತು! 
ಇವತ್ತು ವಿಶ್ವದಾಖಲೆ ಆಗಿರಬಹುದು. ಆದರೆ ಲಲಿತ್‌ ಮಾತ್ರ ಅಪರಿಚಿತರು, ಕ್ಲಾಸ್‌ಮೇಟ್‌ಗಳಿಂದ ಸಾಕಷ್ಟು ನೆಗೆಟಿವ್‌ ಮಾತುಗಳನ್ನು ಕೇಳಿದ್ದರು. ಈ ಬಗ್ಗೆ ಮಾತನಾಡಿರುವ ಲಲಿತ್‌, “ಕೆಲವರು ನನ್ನ ನೋಡಿ ಹೆದರುತ್ತಿದ್ದರು. ನನ್ನ ಪರಿಚಯ ಆಗಿ, ಅರ್ಥ ಮಾಡಿಕೊಂಡಮೇಲೆ ನಾನು ಕೂಡ ಅವರಂತೆಯೇ ಎಂದು ಅರ್ಥ ಆಯ್ತು. ಬಾಹ್ಯವಾಗಿ ಮಾತ್ರ ನಾನು ಅವರಿಗಿಂತ ಡಿಫರೆಂಟ್‌ ಆಗಿ ಕಾಣಿಸ್ತೀನಿ, ಆಂತರಿಕವಾಗಿ ನಾನು ಕೂಡ ಎಲ್ಲರಂತೆ ಇರುವೆ” ಎಂದು ಹೇಳಿದ್ದಾರೆ. 

ಯುಟ್ಯೂಬ್‌ ಚಾನೆಲ್‌ ಇದೆ! 
ನೆಗೆಟಿವ್‌ ಮಾತುಗಳನ್ನು ಲೆಕ್ಕಕ್ಕೆ ತಗೊಳ್ಳದ ಲಲಿತ್‌ ಅವರು ಯೂನಿಕ್‌ ಐಡೆಂಟಿಟಿ ಹೊಂದಿರೋದನ್ನು ಸಂಪೂರ್ಣವಾಗಿ ಪ್ರಯೋಜನ ಪಡೆಯುತ್ತಿದ್ದಾರೆ. ಯುಟ್ಯೂಬ್‌ ಚಾನೆಲ್‌ ಹೊಂದಿರುವ ಅವರು ದಿನನಿತ್ಯದ ದಿನಚರಿಯನ್ನು ವ್ಲಾಗ್‌ ರೀತಿಯಲ್ಲಿ ಅಪ್‌ಲೋಡ್‌ ಮಾಡುತ್ತಾರೆ. 

ಈ ಬದುಕು ಎಷ್ಟು ಸುಂದರ: ಪ್ರೀತಿಸಿ ಮದುವೆಯಾಗಿ ವಿಶ್ವದ ಅತಿ ಸುದೀರ್ಘ ದಾಂಪತ್ಯ ದಾಖಲೆಗೆ ಪಾತ್ರರಾದ ವೃದ್ಧ ದಂಪತಿ!

ಕೂದಲು ಶೇವ್‌ ಮಾಡಿದ್ರು! 
ಲಲಿತ್‌ ಅವರು ಮಿಲಾನ್‌ಗೆ ( ಇಟಲಿ ) ಟ್ರಾವೆಲ್‌ ಮಾಡಿದ್ದು, ಅಲ್ಲಿನ ಟಿವಿ ಶೋನಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರ ಮುಖದ ಮೇಲಿನ ಕೂದಲಿನ ಅಳತೆ ಮಾಡಲಾಯ್ತು. ಇನ್ನು ಅಲ್ಲಿನ ಸ್ಥಳೀಯ ಕ್ಷೌರಿಕರೊಬ್ಬರು ಕೂದಲು ಲೆಕ್ಕ ಮಾಡುವ ಸಲುವಾಗಿ ಮುಖದ ಮೇಲಿದ್ದ ಸಣ್ಣ ಸಣ್ಣ ಕೂದಲನ್ನು ಶೇವ್‌ ಮಾಡಿದ್ದರಂತೆ. 

ಲಲಿತ್‌ ಪಾಟೀದಾರ್‌ ಏನಂತಾರೆ? 
ವಿಶ್ವದಾಖಲೆ ಆಗಿರುವ ಬಗ್ಗೆ ಮಾತನಾಡಿದ ಲಲಿತ್‌ ಪಾಟೀದಾರ್‌ ಅವರು, “ನನಗೆ ಮಾತೇ ಬರುತ್ತಿಲ್ಲ. ಈ ರೀತಿ ಗುರುತಿಸಿದ್ದು ನನಗೆ ತುಂಬ ಖುಷಿ ಕೊಟ್ಟಿದ್ದು, ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಅಂತ ತಿಳಿಯುತ್ತಿಲ್ಲ. ಈಗ ಜನರು ನನ್ನ ಬಳಿ ಬಂದು ಮುಖದ ಮೇಲಿನ ಕೂದಲನ್ನು ಶೇವ್‌ ಮಾಡು ಅಂತ ಹೇಳುವ ಅವಶ್ಯಕತೆ ಇರೋದಿಲ್ಲ. ನಾನು ಹೇಗಿದ್ದೇನೋ ಹಾಗೆ ಇರ್ತೀನಿ, ನನ್ನ ಲುಕ್‌ ಬದಲಾಯಿಸಿಕೊಳ್ಳೋದಿಲ್ಲ ಅಂತ ಅವರಿಗೆಲ್ಲ ಹೇಳುವೆ” ಎಂದು ಹೇಳಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ