ಒಟ್ಟಿಗೆ ಗರ್ಭಿಣಿಯರಾದ ಒಂದೇ ಆಸ್ಪತ್ರೆಯ 14 ನರ್ಸ್‌ಗಳು

Published : Jun 24, 2022, 10:01 AM IST
ಒಟ್ಟಿಗೆ ಗರ್ಭಿಣಿಯರಾದ ಒಂದೇ ಆಸ್ಪತ್ರೆಯ 14 ನರ್ಸ್‌ಗಳು

ಸಾರಾಂಶ

ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 14 ನರ್ಸ್‌ಗಳು ಒಂದೇ ಸಮಯದಲ್ಲಿ ಗರ್ಭವತಿಯರಾಗಿದ್ದು, ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಚಿತ್ರ ಎಂದರೆ ಈ ಎಲ್ಲಾ ನರ್ಸ್‌ಗಳು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುವವರಾಗಿದ್ದಾರೆ.

ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 14 ನರ್ಸ್‌ಗಳು ಒಂದೇ ಸಮಯದಲ್ಲಿ ಗರ್ಭವತಿಯರಾಗಿದ್ದು, ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಚಿತ್ರ ಎಂದರೆ ಈ ಎಲ್ಲಾ ನರ್ಸ್‌ಗಳು ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಕೆಲಸ ಮಾಡುವವರಾಗಿದ್ದಾರೆ. ಅಮೆರಿಕಾದ ಮಿಸ್ಸೋರಿಯಲ್ಲಿರುವ (Missouri) ಕನ್ಸಾಸ್‌ ನಗರದಲ್ಲಿರುವ (Kansas City) ಸೇಂಟ್ ಲುಕ್ ಈಸ್ಟ್‌ ಆಸ್ಪತ್ರೆಯಲ್ಲಿ (Saint Luke's East Hospital) ಈ ಕಾಕತಾಳೀಯ ಘಟನೆ ಸಂಭವಿಸಿದೆ.

ಈ ಹಿಂದೆ ಮಾರ್ಚ್ 2019 ರಲ್ಲಿ ಅಮೆರಿಕಾದ ಪೋರ್ಟ್‌ಲ್ಯಾಂಡ್‌ನಲ್ಲಿರುವ ಮೇನೇ ಮೆಡಿಕಲ್ ಸೆಂಟರ್‌ನಲ್ಲಿ (Maine Medical Center in Portland) ಈ ರೀತಿ ಎಲ್ಲರೂ ಒಟ್ಟೊಟ್ಟಿಗೆ ಗರ್ಭವತಿಯರಾದ (pregnant) ಘಟನೆ ನಡೆದಿತಂತೆ. ಹಾಗೆಯೇ ಇದು ಮತ್ತೆ ಸಂಭವಿಸಿದೆ. ಕಾರ್ಮಿಕ ಮತ್ತು ವಿತರಣಾ ಘಟಕದ ಒಂಬತ್ತು ದಾದಿಯರು (nurses) ಒಂದೇ ಸಮಯದಲ್ಲಿ ಗರ್ಭಿಣಿಯರಾದ ವಿಚಾರ ತಿಳಿದಿತ್ತು. ನಂತರ ಅಮೆರಿಕಾದ ಪೋರ್ಟ್‌ಲ್ಯಾಂಡ್‌ನಲ್ಲಿರುವ ಮೈನೆ ವೈದ್ಯಕೀಯ ಕೇಂದ್ರವು ಶೀಘ್ರದಲ್ಲೇ ಮಗುವಿನ ಜನನಕ್ಕೆ ಸಾಕ್ಷಿಯಾಗಿತ್ತು.

Yoga Day: ಗರ್ಭಿಣಿ ಈ ತಿಂಗಳಲ್ಲಿ ಯೋಗಾಭ್ಯಾಸ ಶುರು ಮಾಡಿದ್ರೆ ಆರೋಗ್ಯಕ್ಕೊಳ್ಳೆಯದು

ಗರ್ಭಿಣಿ ನರ್ಸ್‌ಗಳು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಕಾರ್ಮಿಕ ಮತ್ತು ಹೆರಿಗೆ ಘಟಕದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಸಮಯದಿಂದ ನರ್ಸ್‌ಗಳು ಒಬ್ಬರಿಗೊಬ್ಬರು ಬೆಂಬಲಿಸಿದರು ಮತ್ತು ಮಗುವಿನ ಜನನವಾಗುವವರೆಗೂ ಅವರು ಅದನ್ನು ಮುಂದುವರೆಸಿದರು ಎಂದು ಆಸ್ಪತ್ರೆ ಹೇಳಿದೆ. ಆಗಸ್ಟ್‌ನಲ್ಲಿ ದಾದಿಯರು ತಮ್ಮ ಮಕ್ಕಳಿಗೆ ಜನ್ಮ ನೀಡಿದ್ದರು. ಯಶಸ್ವಿ ಹೆರಿಗೆಯ ನಂತರ, ಎಲ್ಲಾ ಒಂಬತ್ತು ತಾಯಂದಿರು - ಮತ್ತು ಅವರ ಮಕ್ಕಳು  ಮತ್ತೊಂದು ಗ್ರೂಪ್‌ ಫೋಟೋಗೆ ಒಟ್ಟಿಗೆ ಸೇರಿದರು ಎಂದು ಛಾಯಾಗ್ರಾಹಕ ಕಾರ್ಲಿ ಮುರ್ರೆ ಸುದ್ದಿಸಂಸ್ಥೆಯೊಂದರ ವೆಬ್‌ಸೈಟ್‌ಗೆ ತಿಳಿಸಿದ್ದಾರೆ. 

ಗರ್ಭಿಣಿ ಕೆಲಸಕ್ಕೆ ಅನರ್ಹ, ಇಂಡಿಯನ್ ಬ್ಯಾಂಕ್ ನೇಮಕಾತಿ ನಿಯಮದ ವಿರುದ್ಧ ಆಕ್ರೋಶ!
 

ಹಾಗೆಯೇ ಈ ಬಾರಿ ಮಿಸೌರಿಯ ಆಸ್ಪತ್ರೆ ಕೂಡ ಒಟ್ಟೊಟ್ಟಿಗೆ ಹಲವು ಮಕ್ಕಳ ಜನನಕ್ಕೆ ಸಾಕ್ಷಿಯಾಗಿದೆ. ವರದಿಗಳ ಪ್ರಕಾರ, ಕಾನ್ಸಾಸ್ ಸಿಟಿಯಲ್ಲಿರುವ ಸೇಂಟ್ ಲ್ಯೂಕ್ಸ್ ಈಸ್ಟ್ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದ ಮತ್ತು ಲೇಬರ್ ಮತ್ತು ಡೆಲಿವರಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹದಿನಾಲ್ಕು ನವಜಾತ ದಾದಿಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದಾರೆ. ಇವರಲ್ಲಿ ಮೊದಲು ಮಗುವಿಗೆ ಜನ್ಮ ನೀಡಿದ್ದು ಕಾರ್ಮಿಕ ಮತ್ತು ವಿತರಣಾ ಘಟಕದಲ್ಲಿ ನೋಂದಾಯಿತ ನರ್ಸ್ ಆಗಿರುವ ಕೈಟ್ಲಿನ್ ಹಾಲ್ (Caitlin Hall) ಜೂನ್ 3 ರಂದು ಅವರು ಮಗುವಿಗೆ ಜನ್ಮ ನೀಡಿದ್ದಾರೆ. 

ಆ ಸಂದರ್ಭದಲ್ಲಿ ನಮ್ಮ ನರ್ಸ್‌ಗಳ ಗುಂಪಿನಲ್ಲಿ ತಾಯಿಯಾಗಲು ಬಯಸಿರುವುದು ನಾನು ಒಬ್ಬಳೇ ಎಂದು ನಾನು ಭಾವಿಸಿದ್ದೆ. ಇದು ನನ್ನ ಮೊದಲ ಗರ್ಭಧಾರಣೆಯಾಗಿತ್ತು. ಹಾಗಾಗಿ ನಾನು ಸುಮಾರು 12 ವಾರಗಳವರೆಗೆ ಮೌನವಾಗಿರಲು ಪ್ರಯತ್ನಿಸುತ್ತಿದ್ದೆ, ಆದರೆ  ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಇತರ ನರ್ಸ್‌ಗಳು ತಾವು ಗರ್ಭವತಿಯಾಗಿರುವುದನ್ನು ಹೇಳಿಕೊಳ್ಳಲು ಶುರು ಮಾಡಿದರು. 
ಹಾಗಾಗಿ ನಾನು ಎಲ್ಲರಿಗೂ ಗರ್ಭವತಿಯಾಗಿರುವುದಾಗಿ ಹೇಳಿದೆ ಎಂದು ಕೈಟ್ಲಿನ್ ಹಾಲ್ ಉಲ್ಲೇಖಿಸಿದ್ದಾರೆ. 

ಸೇಂಟ್ ಲ್ಯೂಕ್ ಆಸ್ಪತ್ರೆಯು ಈಗ ಇನ್ನೂ 13 ಶಿಶುಗಳ ಜನನಕ್ಕಾಗಿ ಕಾಯುತ್ತಿದೆ. ಒಬ್ಬೊಬ್ಬರಿಗೆ ಒಂದೊಂದು ಹೆರಿಗೆ ದಿನ ನಿಗದಿಪಡಿಸಲಾಗಿದ್ದು, ಡಿಸೆಂಬರ್ವರೆಗೆ ಒಬ್ಬೊಬರೆ ಮಗುವಿಗೆ ಜನ್ಮ ನೀಡಲಿದ್ದಾರೆ. ಸೇಂಟ್ ಲುಕ್‌ ಆಸ್ಪತ್ರೆಯಲ್ಲಿ ನಡೆಯುವ ಎಲ್ಲಾ ವಿಶೇಷ ಹೆರಿಗೆಗಳಂತೆ ಈ ದಾದಿಯರ ಹೆರಿಗೆಗೆ ನಮಗೆ ಕಾಯಲಾಗುತ್ತಿಲ್ಲ ಎಂದು ಆಸ್ಪತ್ರೆ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ
ಆಕಾಶಕ್ಕೇ ಕನ್ನಡಿ ಹಾಕಿ ರಾತ್ರಿಗೆ ಗುಡ್‌ ಬೈ ಸಾಹಸ!