ಸಮುದ್ರ ಆಳದಲ್ಲಿ 14 ಕಾಲಿನ ಹೊಸ ಜೀವಿ ಪತ್ತೆ!

Published : Jul 19, 2020, 07:56 PM IST
ಸಮುದ್ರ ಆಳದಲ್ಲಿ 14 ಕಾಲಿನ ಹೊಸ ಜೀವಿ ಪತ್ತೆ!

ಸಾರಾಂಶ

ಜಿರಳೆ ನೋಡಿದರೆ ಬೆಚ್ಚಿ ಬೀಳುವವರ ಸಂಖ್ಯೆ ಕಡಿಮೆಯೇನಿಲ್ಲ. ಜಿರಳೆ ಅದರ ಪಾಡಿಗೆ ಹೋದರೂ ಮೈಯಲ್ಲಿ ಹೋದ ಅನುಭವಾಗುತ್ತೆ. ಮನೆಯೊಳಗೆ ಜಿರಳೆ ಇದ್ದರೆ ನಿದ್ದೆ ಬರಲ್ಲ. 6 ಕಾಲಿನ ಜಿರಳೆ ಇಷ್ಟು ಭಯ ಸೃಷ್ಟಿಸಿದರೆ, 14 ಕಾಲಿನ ಜಿರಳೆ ನೋಡಿದರೆ ಹೇಗಾಗಬಹುದು? ಬೆಚ್ಚಿ ಬೀಳಬೇಡಿ. ಇದೀಗ ಸಮದ್ರುದ ಆಳದಲ್ಲಿ 14 ಕಾಲಿನ ಜಿರೆಳೆ ಪತ್ತೆಯಾಗಿದೆ.

ಸಿಂಗಾಪುರ(ಜು.19): ಸಮುದ್ರದ ಆಳದಲ್ಲಿರುವ ಎಲ್ಲಾ ಜೀವಿಗಳ ಮಾಹಿತಿ ಲಭ್ಯವಿಲ್ಲ. ಕಾರಣ ಪ್ರತಿ ಬಾರಿ ಸಮುದ್ರದ ಆಳಕ್ಕೆ ಇಳಿದಾಗ ಹೊಸ ಹೊಸ ಜೀವಿಗಳು ಪತ್ತೆಯಾಗುತ್ತವೆ. ಇದೀಗ ಸಿಂಗಾಪುರದ ಪಶ್ಚಿಮ ಜಾವಾದ ಬ್ಯಾಂಟಿನ್ ಸಮುದ್ರದಲ್ಲಿ ಹೊಸ ಜೀವಿಯೊಂದು ಪತ್ತೆಯಾಗಿದೆ. ಏಡಿ ಹಾಗೂ ಜಿರಳೆ ರೂಪದಲ್ಲಿರುವ ಈ ಜೀವಿಗೆ 14 ಕಾಲುಗಳಿವೆ. 

ಆಶ್ಚರ್ಯವಾದರೂ ಆರೋಗ್ಯಕಾರಿ ಜಿರಲೆ ಹಾಲು

ಸಮುದ್ರದಿಂದ ಸಿಕ್ಕಿರುವ ಈ ಜೀವಿ ಇದೀಗ ಎಲ್ಲರ ಆಕರ್ಷಕಣೆಯಾಗಿದೆ. ಸಿಂಗಾಪುರ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಇದೀಗ ಈ ಜೀವಿ ಕುರಿತು ಅಧ್ಯಯನ ಆರಂಭಗೊಂಡಿದೆ. ಈ ಜೀವಿಗೆ ಬಥ್ನೋಮಸ್ ರ್ಯಕ್ಸಸ್ ಅನ್ನೋ ಹೆಸರಿಡಲಾಗಿದೆ. ಇದನ್ನು ಸಮುದ್ರದ ಜಿರಳೆ ಎಂದು ಕರೆದಿದ್ದಾರೆ. 

ಹೊಸ ಜೀವಿ ಕುರಿತು ಹೆಚ್ಚಿನ ಅಧ್ಯಯನ ಅಗತ್ಯವಿದೆ. ಸಮುದ್ರದಲ್ಲಿ ಮಾಲಿನ್ಯ, ತಲದಲ್ಲಿ ಶೇಖರಣೆಯಾಗಿರುವ ಪ್ಲಾಸ್ಟಿಕ್‌ನಿಂದ ಹಲವು ಜೀವಿಗಳು ಅಳಿವಿನಂಚಿಗೆ ತಲುಪಿದೆ. ಪರಿಸರ ಅಸಮತೋಲನವಾದಲ್ಲಿ ಘೋರ ಪರಿಣಾಮ ಎದುರಿಸಬೇಕಾದಿತು. ಹೀಗಾಗಿ ವಿಶೇಷ ಜೀವಿಗಳ ಕುರಿತು ಅಧ್ಯಯನ ಜೊತೆಗೆ ಸಮುದ್ರದಲ್ಲಿನ ಜೀವಿಗಳ ರಕ್ಷಣೆಗೆ ಕ್ರಮಗಳು ಅಗತ್ಯ ಎಂದು ಇಂಡೋನೇಷಿಯಾ ವಿಜ್ಞಾನ ಸಂಸ್ಥೆಯ ಕಾಯೊ ರೆಮಡಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ