ಜನರಿಗೆ ಸ್ವಾತಂತ್ರ ಬೇಕು, ಅದಕ್ಕೆ ಅವರಿಗೆ ಮಾಸ್ಕ್‌ ತೊಡಲು ಹೇಳಲ್ಲ: ಟ್ರಂಪ್‌

By Suvarna NewsFirst Published Jul 19, 2020, 11:49 AM IST
Highlights

ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾದಾಗಿನಿಂದಲೂ ಟ್ರಂಪ್ ಎಡವಟ್ಟು ಹೇಳಿಕೆ| ತೀವ್ರ ಟೀಕೆಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್‌(ಜು.19): ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾದಾಗಿನಿಂದಲೂ ಎಡವಟ್ಟು ಹೇಳಿಕೆ ಮೂಲಕವೇ ತೀವ್ರ ಟೀಕೆಗೆ ಗುರಿಯಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ದೇಶದಲ್ಲಿ 35 ಲಕ್ಷ ಸೋಂಕಿತರು ಪತ್ತೆಯಾಗಿ, 1.35 ಲಕ್ಷ ಸಾವನ್ನಪ್ಪಿದ ಹೊರತಾಗಿಯೂ, ಜನರಿಗೆ ಮಾಸ್ಕ್‌ ಧರಿಸುವಂತೆ ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ.

ಸೋಂಕು ನಿಯಂತ್ರಣಕ್ಕೆ ಮಾಸ್ಕ್‌ ತೊಡುವುದನ್ನು ಕಡ್ಡಾಯ ಮಾಡುವಂತೆ ಅಮೆರಿಕ ಖ್ಯಾತ ಸೋಂಕು ತಜ್ಞ ಡಾ. ಆ್ಯಂಟೋನಿ ಫೌಸಿ ಕರೆ ಕೊಟ್ಟಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಟ್ರಂಪ್‌, ಜನರಿಗೂ ಒಂದಷ್ಟು ಸ್ವಾತಂತ್ರ ಬೇಕು.

ಅದಕ್ಕಾಗಿಯೇ ನಾನು ಜನರಿಗೆ ಮಾಸ್ಕ್‌ ಧರಿಸುವಂತೆ ಕರೆ ಕೊಡುವುದಿಲ್ಲ. ಎಲ್ಲರೂ ಮಾಸ್ಕ್‌ ಧರಿಸಿದಾಕ್ಷಣ ಎಲ್ಲೆಡೆ ಸೋಂಕು ಮಾಯವಾಗುವುದಿಲ್ಲ ಎಂದು ಉಡಾಫೆಯಾಗಿ ಮಾತನಾಡಿದ್ದಾರೆ.

click me!