227 ಜನರಿದ್ದ ವಿಮಾನ ನಾಪತ್ತೆಯಾಗಿ 10 ವರ್ಷ: ಮತ್ತೆ ಶೋಧಕ್ಕೆ ಮುಂದಾದ ಮಲೇಷ್ಯಾ

By Anusha KbFirst Published Mar 5, 2024, 4:26 PM IST
Highlights

ಅದು 2014ರ ಮಾರ್ಚ್‌ 8 ಮಲೇಷ್ಯಾದ ಕೌಲಾಲಂಪುರದಿಂದ  227 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನು ಹೊತ್ತುಕೊಂಡು ಟೇಕಾಫ್ ಆದ ವಿಮಾನ ಇದಕ್ಕಿದ್ದಂತೆ ರಾಡಾರ್ ನಿಯಂತ್ರಣದಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದು, ಇಂದಿಗೂ ಆ ವಿಮಾನದ ಸುಳಿವಿಲ್ಲ,

ಕೌಲಂಲಪುರ:  ವಿಶ್ವದ ಅತೀದೊಡ್ಡ ವೈಮಾನಿಕ ದುರಂತ ಅಥವಾ ವೈಮಾನಿಕ ರಹಸ್ಯ ಎಂದೇ ಗುರುತಿಸಲ್ಪಡುವ ಆ ಘಟನೆ ನಡೆದು 10 ವರ್ಷಗಳೇ ಕಳೆದಿವೆ.ಆದರೆ ಆ ಬಗ್ಗೆ ಒಂದೇ ಒಂದು ಸುಳಿವು ಇಂದಿನವರೆಗೂ ಸಿಕ್ಕಿಲ್ಲ, ಆ ಘಟನೆಯಲ್ಲಿ ನಾಪತ್ತೆಯಾದವರ ಕುಟುಂಬದವರು ಇಂದಿಗೂ ಯಾವುದೋ ಒಂದು ಹತಾಶಭಾವದೊಂದಿಗೆ ಕಳೆದುಹೋದ ತಮ್ಮವರ ಕನವರಿಕೆಯಲ್ಲಿದ್ದಾರೆ.  ನಾವು ಹೇಳ್ತಿರೋದು 10 ವರ್ಷಗಳ ಹಿಂದೆ ನಾಪತ್ತೆಯಾದ 227 ಜನ ಪ್ರಯಾಣಿಕರು ಪ್ಲಸ್ 12 ಸಿಬ್ಬಂದಿ ಇದ್ದ ಮಲೇಷ್ಯಾದ ಬೋಯಿಂಗ್‌ 777 ವಿಮಾನದ ಬಗ್ಗೆ. 

ಅದು 2014ರ ಮಾರ್ಚ್‌ 8 ಮಲೇಷ್ಯಾದ ಕೌಲಾಲಂಪುರದಿಂದ  227 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನು ಹೊತ್ತುಕೊಂಡು ಟೇಕಾಫ್ ಆದ ವಿಮಾನ ಇದಕ್ಕಿದ್ದಂತೆ ರಾಡಾರ್ ನಿಯಂತ್ರಣದಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದು, ಇಂದಿಗೂ ಆ ವಿಮಾನದ ಸುಳಿವಿಲ್ಲ, ವಿಮಾನದ ಪತ್ತೆಗಾಗಿ ಮಲೇಷ್ಯಾ ಸರ್ಕಾರ ಹಲವು ವರ್ಷಗಳನ್ನು ಹಲವು ಕೋಟಿಗಳನ್ನು ವೆಚ್ಚ ಮಾಡಿದೆ. ಆದರೂ ವಿಮಾನ ಏನಾಯ್ತು ಎಂಬುದೇ ಇವತ್ತಿಗೂ ಗೊತ್ತಿಲ್ಲ, ಇದರ ಶೋಧಕ್ಕೆ ನೇಮಕವಾದ ಸಂಸ್ಥೆಗಳೆಲ್ಲಾ ಕೈ ಚೆಲ್ಲಿ ಕುಳಿತಿವೆ. ಘಟನೆ ನಡೆದು 10 ವರ್ಷವಾದ ಹಿನ್ನೆಲೆಯಲ್ಲಿ ನಾಪತ್ತೆಯಾದ ವಿಮಾನದಲ್ಲಿದ್ದ ಪ್ರಯಾಣಿಕರ ಕುಟುಂಬದವರು ತಮ್ಮವರ ನೆನಪು ಮಾಡಿಕೊಂಡಿದ್ದಾರೆ. 

ಇರಾನ್‌ಗೆ ಪ್ರಯಾಣಿಸಲು ಭಾರತೀಯರಿಗೆ ಇನ್ನು ಮುಂದೆ ವೀಸಾ ಅಗತ್ಯವಿಲ್ಲ

ಇದೇ ರೀತಿ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಮಲೇಷ್ಯಾ ಸಾರಿಗೆ ಸಚಿವರು ಮಲೇಷ್ಯಾ ಏರ್‌ಲೈನ್ಸ್ ಫ್ಲೈಟ್ MH 370 ಗಾಗಿ ಮತ್ತೆ ಹುಡುಕಾಟ ನಡೆಸಲು ಮಲೇಷ್ಯಾ ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.

ವಿಮಾನ ನಾಪತ್ತೆಯಾದ ಸಂದರ್ಭದಲ್ಲಿ ಮಲೇಷ್ಯಾದ ತನಿಖಾಧಿಕಾರಿಗಳು ವಿಮಾನವನ್ನು ಉದ್ದೇಶಪೂರ್ವಕವಾಗಿ ಹೈಜಾಕ್ ಮಾಡಿರಬಹುದೇ ಎಂಬ ಬಗ್ಗೆ ಇದ್ದ ಸಂಶಯವನ್ನು ನಿರಾಕರಿಸಿರಲಿಲ್ಲ, ಆದರೆ ವಿಮಾನ ಕೆಲವು ಪಳೆಯುಳಿಕೆಗಳು ಎಂದು ನಂಬಲಾದ ಕೆಲ ತುಂಡುಗಳು ಸಿಕ್ಕಿದ್ದು, ಹೀಗಾಗಿ ವಿಮಾನವೂ ಹಿಂದೂ ಮಹಾಸಾಗರದಲ್ಲಿ ಹಾಗೂ  ಆಫ್ರಿಕಾದ ಕರಾವಳಿಯಲ್ಲಿ ಪತನಗೊಂಡು ಸಮುದ್ರಪಾಲಾಗಿರಬಹುದು ಎಂದು ನಂಬಲಾಗಿದೆಯಾದರೂ ಅದಕ್ಕೆ ಖಚಿತವಾದ ಪುರಾವೆಗಳಿಲ್ಲ. 

ಮಲೇಷಿಯಾದ ನೂತನ ರಾಜನಾಗಿ ಸುಲ್ತಾನ್ ಇಬ್ರಾಹಿಂ ನೇಮಕ

ಈಗ 10 ವರ್ಷಗಳು ಕಳೆದ ನಂತರ ಮಲೇಷಿಯಾದ ಸಾರಿಗೆ ಸಚಿವ ಆಂಥೋನಿ ಲೋಕೆ, ಈ ವಿಮಾನದ ಹುಡುಕಾಟದ ಎರಡು ಹಿಂದಿನ ವಿಫಲ ಪ್ರಯತ್ನಗಳ ನಂತರವೂ ಅಮೆರಿಕಾದ ಸಮುದ್ರತಳದ ಪರಿಶೋಧನಾ ಸಂಸ್ಥೆ ಓಷನ್ ಇನ್ಫಿನಿಟಿ ಜೊತೆ  ಹೊಸದಾಗಿ ಹುಡುಕಾಟ ಪ್ರಸ್ತಾಪವನ್ನು ಚರ್ಚಿಸಲು ಆಹ್ವಾನಿಸಲಾಗಿದೆ ಎಂದು ಹೇಳಿದ್ದಾರೆ. 

ಮಲೇಷ್ಯಾ ಸರ್ಕಾರವು ವಿಮಾನದ ಶೋಧಕ್ಕೆ ಬದ್ಧವಾಗಿದೆ ಹುಡುಕಾಟವು ಮುಂದುವರಿಯಬೇಕು ಎಂದು ಸಚಿವ ಲೋಕೆ ಈ ಘಟನೆಯಲ್ಲಿ ನಾಪತ್ತೆಯಾದವರ ಸ್ಮರಣಾರ್ಥ ನಡೆದ  ಕಾರ್ಯಕ್ರಮದಲ್ಲಿ ಹೇಳಿದ್ದಾರೆ.  2018ರಲ್ಲಿ ಮಲೇಷ್ಯಾವೂ ಈ  ದಕ್ಷಿಣ ಹಿಂದೂ ಮಹಾಸಾಗರದಲ್ಲಿ ವಿಮಾನದ ಹುಟುಕಾಟಕ್ಕಾಗಿ  ಓಷನ್ ಇನ್ಫಿನಿಟಿ ಹೇಳಿತ್ತು. ಅಲ್ಲದೇ ಒಂದು ವೇಳೆ ವಿಮಾನ ಸಿಕ್ಕಿದರೆ 70 ಮಿಲಿಯನ್ ಡಾಲರ್ ಪಾವತಿಸುವುದಾಗಿ ಹೇಳಿತ್ತು. 

ಮಲೇಷ್ಯಾ, ಚೀನಾ, ಆಸ್ಟ್ರೇಲಿಯಾ ಈ ಮೂರು ದೇಶಗಳು ಎರಡು ವರ್ಷಗಳ ಕಾಲದ ತಮ್ಮ ಹುಡುಕಾಟವನ್ನು 2017ರಲ್ಲಿ ಅಂತ್ಯಗೊಳಿಸಿದ್ದವು ಇದಕ್ಕೆ 200 ಮಿಲಿಯನ್ ಅಮೆರಿಕನ್ ಡಾಲರ್ ಹಣ ವೆಚ್ಚವಾಗಿತ್ತು. ಒಮ್ಮೆ ಒಶನ್  ಇನ್‌ಫಿನಿಟಿಯ ಪ್ರಸ್ತಾಪಕ್ಕೆ  ಮಲೇಷ್ಯಾ ಕ್ಯಾಬಿನೆಟ್ ಸಮ್ಮತಿ ಸೂಚಿಸಿದ ಕೂಡಲೇ  ಮತ್ತೆ ಈ ಶೋಧ ನಡೆಸುವುದಕ್ಕೆ ಸಹಕರಿಸುವಂತೆ ಆಸ್ಟ್ರೇಲಿಯವನ್ನು ಕೇಳಲಾಗಿದೆ  ಎಂದು ಸಚಿವರು ಹೇಳಿದ್ದಾರೆ. ಅಲ್ಲದೇ  ನೋ ಫೈನ್ ನೋ ಫೀಸ್, ಅಂದರೆ ಪತ್ತೆ ಆಗದಿದ್ದರೆ ಫೀಸು ಇಲ್ಲ ಎಂಬ ರೀತಿ ಈ ಒಪ್ಪಂದಕ್ಕೆ ಮಾತುಕತೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ. 

click me!