ನವದೆಹಲಿ(ಜ.07): ಭಾರತದ ಅತಿದೊಡ್ಡ ಕೌಶಲ ಆಧಾರಿತ ಕ್ಯಾಶುವಲ್ ಗೇಮಿಂಗ್(Gaming) ಕಂಪನಿಯಾಗಿರುವ ಜುಪಿ (Zupee), ಜಿಯೊ(Jio)ಪ್ಲಾಟ್‌ಫಾರ್ಮ್ ಲಿಮಿಟೆಡ್ ಜೊತೆಗೆ ಇದೇ ಮೊದಲ ಬಾರಿಗೆ ಪಾಲುದಾರಿಕೆ ಮಾಡಿಕೊಂದೆ. ವಿವಿಧ ಉತ್ಪನ್ನಗಳನ್ನು ಒಂದುಗೂಡಿಸಿ ಭವಿಷ್ಯದ ಅಗತ್ಯಗಳನ್ನು ಪೂರೈಸುವ ಸಿದ್ಧ ವ್ಯವಸ್ಥೆ ಮೂಲಕ ಬಳಕೆದಾರರ ಜೊತೆಗಿನ ಸಂಪರ್ಕ ಹಾಗೂ ವಿತರಣೆ ಬಲಪಡಿಸಲು ಒಪ್ಪಂದ ಮಾಡಿಕೊಂಡಿೆ. 45 ಕೋಟಿ ಬಳಕೆದಾರರಿಗೆ ಪ್ರಯೋಜನವನ್ನು ಒದಗಿಸಲು ಈ ಪಾಲುದಾರಿಕೆ ನೆರವಾಗಲಿದೆ. ಎರಡೂ ಕಂಪನಿಗಳ ನಡುವಿನ ಹೊಸ ಪಾಲುದಾರಿಕೆ ನೆರವಿನಿಂದ ಜುಪಿ ಗ್ರಾಹಕರಿಗೆ ಅನುಕೂಲವಾಗುವಂತಹ ಉತ್ಪನ್ನಗಳು ಮತ್ತು ಸೇವೆಗಳನ್ನು ತ್ವರಿತವಾಗಿ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ನೀಡಲು ಸಾಧ್ಯಾವಾಗಲಿದೆ. ಜಿಯೊ ಬಳಕೆದಾರರಿಗೆ ಜುಪಿ ಯ ಆನ್‌ಲೈನ್ ಕೌಶಲ ಆಧಾರಿತ ಆಟಗಳ ಸಮೃದ್ಧ ಸಂಗ್ರಹ ಮತ್ತು ಜುಪಿ ಅಭಿವೃದ್ಧಿಪಡಿಸುವ ಇತರ ನವೀನ ಉತ್ಪನ್ನಗಳನ್ನು ಬಳಸುವ ಅವಕಾಶಗಳನ್ನು ಒದಗಿಸಲಾಗುತ್ತದೆ.
ಈ ಹೊಸ ಪಾಲುದಾರಿಕೆಯೊಂದಿಗೆ, ನಗರ ಪ್ರದೇಶಗಳ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಜುಪಿ ಅನ್ನು ಭಾರತದಲ್ಲಿನ ಅತಿದೊಡ್ಡ ಗೇಮಿಂಗ್ ಪ್ಲಾಟ್‌ಫಾರ್ಮ್(Gaming Platform) ಮಾಡುವ ಮಹತ್ವಾಕಾಂಕ್ಷೆಯ ಗುರಿ ತಲುಪಲು ಪ್ರಯತ್ನಿಸಲಾಗುವುದು. ಸಾಧ್ಯವಾದಷ್ಟು ಹೆಚ್ಚು ಬಳಕೆದಾರರಿಗೆ ಬಹು ಭಾಷೆಗಳಲ್ಲಿ(Local Language) ಹೆಚ್ಚು ಗುಣಮಟ್ಟದ ಗೇಮ್‌ಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗುವುದು. ಭಾರತದಲ್ಲಿ 5ಜಿ ವಾಣಿಜ್ಯ ಬಳಕೆಯು ಆರಂಭವಾಗುವುದಕ್ಕೂ ಮೊದಲು 15ಕೋಟಿಗಿಂತಲೂ ಹೆಚ್ಚು 5ಜಿ ಹ್ಯಾಂಡ್‌ಸೆಟ್‌ಗಳು ಮಾರಾಟವಾಗುವ ನಿರೀಕ್ಷೆ ಇದೆ. ಜಿಯೊ ಜೊತೆಗಿನ ಈ ಪಾಲುದಾರಿಕೆಯೊಂದಿಗೆ ಸಾಧ್ಯವಾದಷ್ಟು ಮಾರುಕಟ್ಟೆಯನ್ನು ವಶಪಡಿಸಿಕೊಳ್ಳಲು ಜುಪಿ ಆಕ್ರಮಣಕಾರಿಯಾದ ಧೋರಣೆ ತಳೆದಿದೆ.
undefined
5G Launch in India: 13 ಮಹಾನಗರಗಳಲ್ಲಿ 2022ಕ್ಕೆ ಸೇವೆ ಆರಂಭ: 4Gಗಿಂತ 100 % ಹೆಚ್ಚು ವೇಗದ ಇಂಟರ್ನೆಟ್!
ಜಿಯೊ ಸದ್ಯಕ್ಕೆ ಹೊಂದಿರುವ ಸೇವಾ ಮತ್ತು ಮಾರುಕಟ್ಟೆ ವ್ಯಾಪ್ತಿಯಿಂದ ಜುಪಿ ಸಹ ಪ್ರಯೋಜನ ಪಡೆಯಲಿದೆ. ಎಲ್ಲಾ ಜಿಯೊ ಗ್ರಾಹಕರಿಗೆ ಜುಪಿಯ ಗೇಮ್‌ಗಳನ್ನು ವಿತರಿಸಲಾಗುವುದು. ಇದು ಜಿಯೊ ಫೋನ್ ಗ್ರಾಹಕರಿಗೂ ಲಭ್ಯವಾಗಲಿದೆ. ಇದು ಜುಪಿಗೆ ಭಾರತದಲ್ಲಿನ ಎಲ್ಲಾ ಗೇಮಿಂಗ್ ಕಂಪನಿಗಳಲ್ಲಿಯೇ ದೊಡ್ಡ ಮಾರುಕಟ್ಟೆ ಒದಗಿಸುತ್ತದೆ. ಇದು ವೇಗವಾಗಿ ಬೆಳೆಯುತ್ತಿರುವ ಗೇಮಿಂಗ್ ಸ್ಟಾರ್ಟ್-ಅಪ್ ಅನ್ನು ದೇಶದ ಅತಿದೊಡ್ಡ ಗೇಮಿಂಗ್ ಕಂಪನಿಯಾಗಿ ಪರಿವರ್ತಿಸಲಿದೆ. ಈ ಕಾರ್ಯತಂತ್ರದ ಸಹಭಾಗಿತ್ವವು ನಂಬಲಾಗದ ಬೆಳವಣಿಗೆ ಮತ್ತು ಮುನ್ನೋಟವನ್ನು ದೃಢಪಡಿಸುತ್ತದೆ. ಭಾರತದ ಮಾರುಕಟ್ಟೆಯಲ್ಲಿ ಗೆಲ್ಲುವ ಆಟದ ಸ್ವರೂಪಗಳನ್ನು ಮತ್ತು ಹಣಗಳಿಕೆಯ ಸಾಧ್ಯತೆಗಳನ್ನು ಜುಪಿ ಒದಗಿಸಲಿದೆ.
Jio New Plan ಡಿಸ್ನಿ + ಹಾಟ್‌ಸ್ಟಾರ್ ಒಂದು ವರ್ಷ ಉಚಿತ, ಹೊಸ ಪ್ಲಾನ್ ಲಾಂಚ್ ಮಾಡಿದ ಜಿಯೋ!
ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು, ತನ್ಮಯಗೊಳಿಸುವ ವಿನ್ಯಾಸದ ಅನುಭವಗಳನ್ನು ಹೆಚ್ಚಿಸಲು, ಹೊಸ ಪ್ರದೇಶಗಳಿಗೆ ವಿಸ್ತರಿಸಲು, ಮಾರುಕಟ್ಟೆ ವೃದ್ಧಿಸಲು, ಹೆಚ್ಚೆಚ್ಚು ಗ್ರಾಹಕರನ್ನು ತಲುಪಲು, ಸಂಶೋಧನೆ ಮತ್ತು ನಾವೀನ್ಯತೆ ಕಾರ್ಯಕ್ರಮಗಳಿಗೆ, ಪ್ರತಿಭಾನ್ವಿತ ತಂತ್ರಜ್ಞರನ್ನು ನೇಮಿಸಿಕೊಳ್ಳಲು ಈ ಬಂಡವಾಳವನ್ನು ಬಳಸಲು ಉದ್ದೇಶಿಸಲಾಗಿದೆ. ಈ ಮೂಲಕ ಸಮೃದ್ಧ ಸಾಧ್ಯತೆಗಳು ಮತ್ತು ಅರ್ಥಪೂರ್ಣ ಸಂಪರ್ಕಗಳೊಂದಿಗೆ ಜುಪಿ ಯ ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಲಾಗುವುದು. 2022 ರಲ್ಲಿ, ಜುಪಿ- ಬಳಕೆದಾರರ ಜೊತೆ ಸಂಪರ್ಕ ಸಾಧಿಸಲು, ಅವರನ್ನು ಸಶಕ್ತಗೊಳಿಸಲು ಮತ್ತು ಮನರಂಜಿಸುವ ಉದ್ದೇಶದ ಹೊಸ ರೂಪಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಲಿದೆ.
ಬಳಕೆದಾರ ಕೇಂದ್ರಿತ ವಿನ್ಯಾಸ ಮತ್ತು ತಂತ್ರಜ್ಞಾನದ ಉತ್ತಮ ವಿಧಾನಗಳೊಂದಿಗೆ ನಾವೀನ್ಯತೆಯ ಗಡಿಗಳನ್ನು ಹೊಸ ದೂರಕ್ಕೆ ತಳ್ಳುತ್ತದೆ. ಜುಪಿ-ಯ ಈ ಪಯಣಕ್ಕೆ ಜಿಯೊ ಪರಿಪೂರ್ಣ ಪಾಲುದಾರನಾಗಿದೆ. ನಾವು ಭಾರತದಲ್ಲಿನ ದೂರದ ಪ್ರದೇಶಗಳನ್ನೂ ತಲುಪುತ್ತೇವೆ ಮತ್ತು ಅತ್ಯಂತ ಹಿಂದುಳಿದ ಜನರನ್ನು ಜುಪಿ ವ್ಯಾಪ್ತಿಗೆ ತರಲು ಪ್ರಯತ್ನಿಸುತ್ತೇವೆ. ಇದು ಮುಕ್ತ, ಅನುಮತಿ ಅಗತ್ಯ ಇಲ್ಲದ, ವಿಕೇಂದ್ರೀಕೃತ ಮತ್ತು ಮಿತಿಯಿಲ್ಲದ ಭವಿಷ್ಯದ ಅಂತರ್ಜಾಲದ ನಮ್ಮ ಕಲ್ಪನೆಯನ್ನು ಈ ಪಾಲುದಾರಿಕೆಯು ಸಮರ್ಥವಾಗಿ ಪ್ರತಿಧ್ವನಿಸುತ್ತದೆ ಎಂದು ಜುಪಿ ಸ್ಥಾಪಕ ಮತ್ತು ಸಿಇಒ ದಿಲ್ಶರ್ ಸಿಂಗ್ ಹೇಳಿದ್ದಾರೆ.