Apple CEO Earnings 2021ರಲ್ಲಿ ಊಹೆಗೂ ನಿಲುಕದ ಆದಾಯ ಗಳಿಸಿದ ಆ್ಯಪಲ್ ಸಿಇಒ ಟಿಮ್ ಕುಕ್!

By Suvarna News  |  First Published Jan 7, 2022, 7:21 PM IST

•    ಆಪಲ್ ಕಂಪನಿ ಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಕಂಪನಿ ಎನಿಸಿಕೊಂಡಿದೆ. 
•    ಆಪಲ್ ಕಂಪನಿ ಸಿಇಒ ಟಿಮ್ ಕುಕ್‌ಗೆ ಎಷ್ಟು ಸಂಬಳ ಪಡೆಯಬಹುದು ಎಂಬ ಕುತೂಹಲ ಸಹಜ
•    ಐಫೋನ್, ಮ್ಯಾಕ್‌ಬುಕ್‌ನಂಥ ಉತ್ಕೃಷ್ಟ ಸಾಧನಗಳಿಗೆ ಈ ಆಪಲ್ ಕಂಪನಿ ಹೆಸರುವಾಸಿ


Tech Desk: ಛಜಗತ್ತಿನ ಅತಿದೊಡ್ಡ ತಂತ್ರಜ್ಞಾನ ಕಂಪನಿಯಾಗಿರುವ ಆಪಲ್ (Apple) ಅನ್ನು ಸಿಇಒ ಟಿಮ್ ಕುಕ್ (Tim Cook) ಅವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಹಾಗಾಗಿ, ಈ ಕಂಪನಿಯ ಮುಖ್ಯಸ್ಥರಾದವರು ಎಷ್ಟು ಸಂಬಳ ಅಥವಾ ಹಣವನ್ನು ಗಳಿಸುತ್ತಾರೆಂಬ ಕುತೂಹಲ ಪ್ರಪಂಚದಾದ್ಯಂತ ಅನೇಕ ಜನರು ಆಸಕ್ತಿ ಹೊಂದಿರುವ ವಿಷಯವಾಗಿದೆ. 2021ರಲ್ಲಿ ಟಿಮ್ ಕುಕ್ (Tim Cook) ಅವರು ಒಟ್ಟು 98.7 ಮಿಲಿಯನ್ ಡಾಲರ್ ಮೂಲವೇತನವಾಗಿ ಪಡೆದುಕೊಂಡಿದ್ದಾರೆ. ಇದರಲ್ಲಿ ಷೇರುಗಳ ಆಯ್ಕೆ ಹಾಗೂ ಇತರ ಎಲ್ಲ  ರೀತಿಯ ಸಂಭಾವನೆಗಳು ಸೇರಿವೆ. ನೀವು 98.7 ಮಿಲಿಯನ್ ಡಾಲರ್ ಅನ್ನು ಭಾರತೀಯ ರೂಪಾಯಿಗೆ ಅನುವಾದಿಸಿದಾಗ, ಅದು ಸುಮಾರು 733 ಕೋಟಿ ರೂಪಾಯಿಯಾಗುತ್ತದೆ. ಆಪಲ್ ಸಿಇಒ ಆಗಿ ಟಿಮ್ ಕುಕ್ ಅವರ ದೊರೆಯುವ ವಿಶೇಷ ಭತ್ಯೆಗಳಲ್ಲಿ ಭದ್ರತೆ ಮತ್ತು ಖಾಸಗಿ ವಿಮಾನಗಳ ಸೌಲಭ್ಯವೂ ಸೇರಿಕೊಂಡಿರುತ್ತದೆ ಎಂಬುದನ್ನು ಮರೆಯಬಾರದು. ಅದರ ಇತ್ತೀಚಿನ SEC ಫೈಲಿಂಗ್‌ನಲ್ಲಿ, ಆಪಲ್ ಸಿಇಒ ಅವರ ಸಂಭಾವನೆ ಪ್ಯಾಕೇಜ್ ಅನ್ನು ಬಹಿರಂಗಪಡಿಸಿದೆ.

202ರಲ್ಲಿ ಸುಮಾರು 14 ಮಿಲಿಯನ್ ಡಾಲರ್ (104 ಕೋಟಿ ರೂಪಾಯಿ) ಪಡೆಯಬಹುದು ಎಂದು ಟಿಮ್ ಕುಕ್ ನಿರೀಕ್ಷಿಸಿದ್ದರು. ಆದರೆ, ಅವರ ನಿರೀಕ್ಷೆಗಿಂತಲೂ ಮೀರಿ ವಾರ್ಷಿಕ 98.7 ಮಿಲಿಯನ್ ಡಾಲರ್ ವೇತನವವಾಗಿ ಪಡೆದುಕೊಡಿದ್ದಾರೆ. SEC ಫೈಲಿಂಗ್ ಪ್ರಕಾರ, ಕುಕ್ ಮೂಲ ಆದಾಯದಲ್ಲಿ 3 ಮಿಲಿಯನ್ ಡಾಲರ್ (ಅಂದಾಜು ರೂ 22.30 ಕೋಟಿಗಳು) ಮತ್ತು ಕಂಪನಿಯ ಆರ್ಥಿಕ ಮತ್ತು ಪರಿಸರ ಸುಸ್ಥಿರತೆಯ ಗುರಿಗಳನ್ನು ಪೂರೈಸಲು $12 ಮಿಲಿಯನ್ (ಸುಮಾರು 89.20 ಕೋಟಿ ರೂ.) ಪಡೆದಿದ್ದಾರೆ. 

Tap to resize

Latest Videos

undefined

UPI payment fraud ಹಣ ಪಾವತಿ ಸೇರಿ ಡಿಜಿಟಲ್ ವಹಿವಾಟು ಸುರಕ್ಷಿತವಾಗಿಸುವುದು ಹೇಗೆ? ಇಲ್ಲಿವೆ ಟಿಪ್ಸ್!    

ಕುಕ್ ಸಂಭಾವನೆಯಲ್ಲಿ 1.39 ಮಿಲಿಯನ್ ಡಾಲರ್ (ಅಂದಾಜು ರೂ 10.33 ಕೋಟಿಗಳು) ಗಳಿಸಿದ್ದಾರೆ. ಈ ಪೈಕಿ ಖಾಸಗಿ ಜೆಟ್ ವಿಮಾನಗಳಿಗಾಗಿ 712,488 ಡಾಲರ್, ಭದ್ರತೆಗಾಗಿ 630,630 ಡಾಲರ್, ರಜಾದಿನಗಳಿಗಾಗಿ 23,077 ಡಾಲರ್ ಮತ್ತು ಅವರ 401(k) ಯೋಜನೆಗೆ 17,400 ಡಾಲರ್ ಕೊಡುಗೆಯನ್ನು ಒಳಗೊಂಡಿದೆ. ಕುಕ್ ಸುಮಾರು 82.5 ಮಿಲಿಯನ್ ಡಾಲರ್ (ಅಂದಾಜು ರೂ 613 ಕೋಟಿಗಳು) ಷೇರ್ ಕೂಡ ಪಡೆದುಕೊಂಡಿದ್ದಾರೆ. ಭದ್ರತಾ ಕಾರಣಗಳಿಗಾಗಿ ವಾಣಿಜ್ಯ ವಿಮಾನಯಾನದಲ್ಲಿ ಪ್ರಯಾಣಿಸಲು ತಮ್ಮ ಸಿಇಒಗಳಿಗೆ ಅನುಮತಿ ನೀಡುವುದಿಲ್ಲ ಎಂದು Apple ಹೇಳಿಕೊಂಡಿದೆ.

ಫೈಲಿಂಗ್ ಪ್ರಕಾರ, ಆಪಲ್ 2021 ರಲ್ಲಿ ಗಮನಾರ್ಹವಾಗಿ ಅಭಿವೃದ್ಧಿಯನ್ನು ದಾಖಲಿಸುವ ನಿರೀಕ್ಷೆ ಇದೆ. ಲಾಕ್ಡೌನ್ ಮತ್ತು COVID ಸಾಂಕ್ರಾಮಿಕ ಸ್ಥಿತಿಯೇನೂ ಕಂಪನಿಯ ಜಾಗತಿಕ ಮಾರಾಟದ ಮೇಲೆ ಪರಿಣಾಮ ಬೀರಲಿಲ್ಲ. ಆಪಲ್ ಆದಾಯದಲ್ಲಿ 33 ಶೇಕಡಾ ಹೆಚ್ಚಳ ಮತ್ತು ಮಾರಾಟದಲ್ಲಿ 365 ಬಿಲಿಯನ್ ಡಾಲರ್ ಆಗಿದೆ ಎಂದು ಹೇಳಿಕೊಂಡಿದೆ. ಕಾರ್ಪೊರೇಟ್ ಕಂಪನಿಗಳ ಇತಿಹಾಸದಲ್ಲಿ ಆಪಲ್ 3 ಟ್ರಿಲಿಯನ್ ಮೌಲ್ಯವನ್ನು ಹೊಂದಿರುವ ಮೊದಲ ಕಂಪನಿಯಾಗಿದೆ. ಇದರಿಂದಾಗಿ ಸಂಸ್ಥೆಯು ಹಲವಾರು ದೇಶಗಳ ಸಂಪೂರ್ಣ GDP ಗಿಂತ ದೊಡ್ಡದಾಗಿದೆ.

ಆಪಲ್ ಕಂಪನಿಯ ಐಫೋನ್‌ಗಳು (iPhone), ಐಪ್ಯಾಡ್ (iPad),  ಐಪಾಡ್ (iPod), ಲ್ಯಾಪ್‌ಟಾಪ್‌ (MackBook) ಗಳು ಹಾಗೂ ಇತರ ಸಾಧನಗಳು ಅತ್ಯಾಧುನಿಕ ತಂತ್ರಜ್ಞಾನ (Technology)ದಿಂದ ಕೂಡಿರುತ್ತವೆ. ಹಾಗಾಗಿಯೇ ಅವುಗಳ ಬ್ರ್ಯಾಂಡ್ ಮೌಲ್ಯ ಈಗಲೂ ಕೆಳಗೆ ಇಳಿದಿಲ್ಲ. ವಿಶೇಷವಾಗಿ ಐಫೋನ್‌ಗಳಿಗೆ ಜಗತ್ತಿನಾದ್ಯಂತ ಎಲ್ಲೆಡೆಯೂ ವ್ಯಾಪಕ ಬೇಡಿಕೆ ಇದೆ. ತಮ್ಮ ಪ್ರತಿಸ್ಪರ್ಧಿ ಕಂಪನಿಗಳಿಗಿಂತಲೂ ಒಂದು ಹೆಜ್ಜೆ ಮುಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಆಪಲ್ (Apple) ಐಫೋನ್ ತಯಾರಿಸುತ್ತದೆ. ಹಾಗಾಗಿ, ಅವುಗಳ ಉತ್ಕೃಷ್ಟತೆಯನ್ನು ಯಾರೂ ಮೀರಲು ಸಾಧ್ಯವಾಗುತ್ತಿಲ್ಲ.

Whatsapp Accounts Ban ಒಂದೇ ತಿಂಗಳಲ್ಲಿ 17.5 ಲಕ್ಷ ವಾಟ್ಸಾಪ್ ಖಾತೆ ನಿಷೇಧ!    

click me!