8 ತಿಂಗಳ ಬಳಿಕ ಪ್ಲೇ ಸ್ಟೋರ್‌ನಲ್ಲಿ WHO Covid-19 Updates ಆ್ಯಪ್!

By Suvarna News  |  First Published Dec 26, 2020, 2:06 PM IST

ಕೋವಿಡ್ 19 ಸಂಬಂಧ ಮಾಹಿತಿ ಒದಗಿಸುವ ಆಪ್ ಒಂದನ್ನು ವಿಶ್ವ ಆರೋಗ್ಯ ಸಂಸ್ಥೆ ಕಳೆದ ಏಪ್ರಿಲ್‌ನಲ್ಲೇ ಗೂಗಲ್ ಪ್ಲೇ ಸ್ಟೋರ್‌ಗೆ ಸೇರಿಸಿತ್ತು. ಕಾರಣಾಂತರಗಳಿಂದ ಆ ಆಪ್‌ ಅನ್ನು ವಾಪಸ್ ಪಡೆದಿತ್ತು. 8 ತಿಂಗಳ ಬಳಿಕ ಮತ್ತೆ ಡಬ್ಲೂಎಚ್ಒ ಕೋವಿಡ್ 19 ಅಪ್‌ಡೇಟ್ಸ್ ಆಪ್ ಅನ್ನು ಮತ್ತೆ ಸೇರಿಸಿದೆ.


ಕೋವಿಡ್ – 19 ಸೋಂಕು ಇಡೀ ಜಗತ್ತಿಗೆ ಯಾವ ಪರಿ ಸಂಕಟ ಕೊಟ್ಟಿದೆ ಮತ್ತು ಕೊಡುತ್ತಿದೆ ಎಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸೋಂಕು ಹರಡುವುದನ್ನು ತಡೆಯಲು ಜಗತ್ತಿನ ಅನೇಕ ದೇಶಗಳು ಹೇರಿದ ಲಾಕ್‌ಡೌನ್, ಸೋಂಕಿಗಿಂತಲೂ ಭಯಂಕರವಾಗಿತ್ತು. ಭಾರತದಲ್ಲಿ ಹೇರಿದ ಲಾಕ್‌ಡೌನ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ, ಇದೀಗ ಪರಿಸ್ಥಿತಿ ಸುಧಾರಿಸುತ್ತಿದೆ. ಬಹುತೇಕವಾಗಿ ಕೋವಿಡ್-19 ಸೋಂಕು ಪ್ರಕರಣಗಳು ಕಡಿಮೆಯಾಗುತ್ತಿವೆ. ಸೋಂಕು ಆರಂಭವಾಗಿ 8 ತಿಂಗಳ ಬಳಿಕ ವಿಶ್ವ ಆರೋಗ್ಯ ಸಂಸ್ಥೆ WHO Covid-19 Updates ಎಂಬ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ಗೆ ಬಿಡುಗಡೆ ಮಾಡಿದೆ.

ಕೊನೆಗೂ ಕೋವಿಡ್ 19ಗೆ  ಸಂಬಂಧಿಸಿದ ಆಪ್ ಬಂತಾಗಿದೆ. ವಿಶೇಷ ಏನೆಂದರೆ, ಕಳೆದ ಏಪ್ರಿಲ್‌ನಲ್ಲೇ ಡಬ್ಲ್ಯೂಎಚ್ಒ ಗೂಗಲ್ ಪ್ಲೇ ಸ್ಟೋರ್‌ಗೆ ಆಪ್ ಬಿಡುಗಡೆ ಮಾಡಿತ್ತು. ಆದರೆ, ಬಿಡುಗಡೆಯಾಗಿರುವ ಆಪ್ ಖಾಸಗಿ ಬೀಟಾ ಆವೃತ್ತಿಯಾಗಿದ್ದರಬೇಕು ಎಂದು ಹೇಳಿದ ಕೂಡಲೇ ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಹಿಂದೆ ಪಡೆದುಕೊಂಡಿತ್ತು. ಆ ಬಳಿಕ ಆಪ್ ಅನ್ನು ಮತ್ತೆ ಪ್ಲೇ ಸ್ಟೋರ್‌ಗೆ ಸೇರಿಸುವ ಕೆಲಸವನ್ನು ಮಾಡಿರಲಿಲ್ಲ. ಇದೀಗ 8 ತಿಂಗಳ ಬಳಿಕ ಡಬ್ಲ್ಯೂಎಚ್ಒ ಅಂತಿಮವಾಗಿ ಆಂಡ್ರಾಯ್ಡ್ ಬಳಕೆದಾರರಿಗೆ ಈ ಆಪ್ ಲಭ್ಯತೆಯನ್ನು ಒದಗಿಸಿದೆ.

Tap to resize

Latest Videos

undefined

ಗೂಗಲ್, ಮೈಕ್ರೋಸಾಫ್ಟ್‌ ಜತೆ ಸ್ಪರ್ಧೆ, ಝೂಮ್‌ನಿಂದಲೂ ಇ-ಮೇಲ್ ಸೇವೆ?

ನೀವು ಈ ಡಬ್ಲ್ಯೂಎಚ್ಒ ಕೋವಿಡ್-19 ಅಪ್‌ಡೇಟ್ಸ್ ಆಪ್ ಅನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆಪ್ ಕೇವಲ 8.8ಎಂಬಿ ಗಾತ್ರದ್ದಾಗಿದೆ. ಆಂಡ್ರಾಯ್ಡ್ 4.1 ವರ್ಷನ್‌ನಿಂದ ಮೇಲ್ಪಟ್ಟ ಎಲ್ಲ ಆಂಡ್ರಾಯ್ಡ್ ಆವೃತ್ತಿಯ ಸಾಧನಗಳಲ್ಲಿ ಈ ಆಪ್ ರನ್ ಆಗುತ್ತದೆ. ಈವರೆಗೆ ಸಾವಿರ ಡೌನ್‌ಲೋಡ್ ಆಗಿರುವುದನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕಾಣಬಹುದಾಗಿದೆ. ಇಂಥದೊಂದು ಆಪ್ ಎಂದು ಬಹಳಷ್ಟು ಜನರಿಗೆ ಗೊತ್ತಿರಲಿಲ್ಲ. ಇದೀಗ ಡಬ್ಲ್ಯೂಎಚ್ಒ ಈ ಆಪ್ ಅನ್ನು ಮತ್ತೆ ಸೇರಿಸಿರುವುದರಿಂದ ಕೋವಿಡ್ 19 ಸೋಂಕಿನ ಬೆಳವಣಿಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿದೆ.

ಈ ಆಪ್‌ನಲ್ಲಿ ಕೋವಿಡ್ 19 ಸೋಂಕಿಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಮತ್ತು ಸಂಘಟನೆಯ ಪ್ರಾದೇಶಿಕ ಪಾರ್ಟರ್ನಸ್ ಅವರ ಮಾಹಿತಿಗಳನ್ನು ನೀಡಲಾಗಿದೆ. ಕೋವಿಡ್ -19 ಸೋಂಕಿನಿಂದ ವ್ಯಕ್ತಿಗತವಾಗಿ ಮತ್ತು ಸಮುದಾಯವನ್ನು ಹೇಗೆ  ರಕ್ಷಿಸಿಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಆಪ್ ಒದಗಿಸುತ್ತದೆ. ಇಷ್ಟು ಮಾತ್ರವಲ್ಲದೇ, ಬಳಕೆದಾರರ ಲೊಕೇಷನ್ ಆಧರಿತವಾಗಿ ರಿಯಲ್ ಟೈಮ್ ಅಪ್‌ಡೇಟ್‌ಗಳನ್ನು ಕೋವಿಡ್-19 ಸೋಂಕಿನ ಸಂಬಂಧ ನೀಡುತ್ತದೆ.

BSNLನಿಂದ 199 ರೂ. ಪ್ರಿಪೇಡ್ ಪ್ಲ್ಯಾನ್, ನಿತ್ಯ 2ಜಿಬಿ ಹೈಸ್ಪೀಡ್ ಇಂಟರ್ನೆಟ್!

ಆಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಅದು ನಿಮ್ಮ ಲೊಕೇಷನ್ ಅನ್ನು ಕೇಳುತ್ತದೆ. ಲೊಕೇಷನ್ ಅಪ್‌ಡೇಟ್ ಆದ ಮೇಲೆ,  ನೀವಿರುವ ಪ್ರದೇಶ ವ್ಯಾಪ್ತಿಯಲ್ಲಿ ಕೋವಿಡ್ 19ಗೆ ಸಂಬಂಧಿಸಿದ ತಾಜಾ ಸುದ್ದಿಗಳ ಬಗ್ಗೆ ಮಾಹಿತಿ ನೀಡುತ್ತದೆ. ಆಪ್‌ನ ಹೋಮ್ ಸ್ಕ್ರೀನ್ ನಿಮಗೆ ನಿಮ್ಮ ದೇಶ ಹಾಗೂ ಜಗತ್ತಿನಲ್ಲಿ ಕೊರೊನಾ ವೈರಸ್ ಪ್ರಕರಣಗಳು ಎಷ್ಟಿವೆ ಎಂಬುದನ್ನು ಪ್ರದರ್ಶಿಸುತ್ತದೆ. ಲೆಟೆಸ್ಟ್ ಅಪ್‌ಡೇಟ್ಸ್‌ಗಳಿಗಾಗಿ ಆಪ್ ನಿಮಗೆ ರಿಯಲ್ ಟೈಮ್ ನೋಟಿಫಿಕೇಷನ್‌ಗಳನ್ನು ಕೂಡ ಕಳಿಹಿಸುತ್ತದೆ.

ಈ ಆಪ್‌ನಲ್ಲಿ ಚೆಕ್ ಅಪ್ ಟ್ಯಾಬ್ ಇದ್ದು, ಕೋವಿಡ್‌ಗೆ ಸಂಬಂಧಿಸಿದ ಗಂಭೀರ ಮತ್ತು ಗಂಭೀರವಲ್ಲದ ಲಕ್ಷಣಗಳ ಬಗ್ಗೆ ಮಾಹಿತಿ ನೀಡುತ್ತದೆ. ಲರ್ನ್ ಎಂಬ ಟ್ಯಾಬ್ ಇದ್ದು, ಅದು ನಿಮಗೆ ಟ್ರಾವೆಲ್ ರೀಲೆಟೆಡ್ ಸಲಹೆಗಳನ್ನು ನೀಡುತ್ತದೆ. ಸ್ಕ್ರಾಲಿಂಗ್ ಡೌನ್ ಮಾಡುತ್ತ ಹೋದಂತೆ ನಿಮಗೆ ಮೂಲಭೂತ ಸ್ವಚ್ಛತೆ ಕೈಗೊಳ್ಳುವ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಕೋವಿಡ್-19 ಸಂಬಂಧ ಹರಿದಾಡುತ್ತಿರುವ ಮಿಥ್ಯಗಳ ಬಗ್ಗೆ ಮಾಹಿತಿಯೂ ನೀಡುತ್ತದೆ.

ನಾಲ್ಕು ಹೊಸ ಮಾಡೆಲ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಸ್ಯಾಮ್ಸಂಗ್

click me!